ಮುಖಪುಟ ಚಟುವಟಿಕೆಗಳು
Activites
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಚಟುವಟಿಕೆಗಳು

:::: ಕಾರ್ಯಚಟುವಟಿಕೆಗಳು ::::

 

ಬೆಂಗಳೂರು: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ವತಿಯಿಂದ 2018 ರಿಂದ 2021 ರವರೆಗಿನ 3 ವರ್ಷಗಳಲ್ಲಿ ವಿವಿಧ ಕೋರ್ಸಗಳಲ್ಲಿ ಅತ್ಯಧಿಕ ಅಂಕಗಳಿಸಿ ಉತ್ತೀರ್ಣರಾದ ಸಮಾಜದ ಪ್ರತಿಭಾವಂತ 350 ವಿದ್ಯಾರ್ಥಿಗಳನ್ನು ಅಭಿನಂದಿಸಿ ಪುರಸ್ಕರಿಸಲಾಯಿತು...ಇದೇ ಸಂದರ್ಭದಲ್ಲಿ 22 ಮಹಾ ದಾನಿಗಳನ್ನು ಗೌರವಿಸಲಾಯಿತು...ಯಶಸ್ವಿ ಕಾರ್ಯಕ್ರಮದ ಸಚಿತ್ರಗಳು...

~~~~~~***~~~~~~

 


ತುಮಕೂರು: ತುಮಕೂರು ತಾಲ್ಲೂಕು ಸಮಿತಿ ಸಹಯೋಗದಲ್ಲಿ ಕೇಂದ್ರ ಸಂಘದ ವತಿಯಿಂದ ತುಮಕೂರಿನ ಬಟವಾಡಿಯ ಕಾಂಪ್ಲೆಕ್ಸ್ ನ ಮೇಲ್ಬಾಗದಲ್ಲಿ 2 ಮತ್ತು 3ನೇ ಅಂತಸ್ತಿನಲ್ಲಿ ಅನಿವಾಸಿ ಭಾರತೀಯರ ಅಭಿವೃದ್ಧಿ ಫೋರಂ ಉಪಾಧ್ಯಕ್ಷರಾಗಿದ್ದ ಶ್ರೀ ವಿ.ಸಿ.ಪ್ರಕಾಶ್‍ರವರ ಸಹಕಾರದಿಂದ ಕರ್ನಾಟಕ ಸರ್ಕಾರದ 50 ಲಕ್ಷ ರೂ ಅನುದಾನ ಮತ್ತು ಕೇಂದ್ರ ಸಂಘದ ಹಣ ಸಹಾಯದಿಂದ, ಒಟ್ಟಾರೆ 1 ಕೋಟಿ 75 ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ನೂತನವಾಗಿ ನಿರ್ಮಾಣಮಾಡಿರುವ ಬೃಹತ್ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮತ್ತು ವಾಣಿಜ್ಯ ಮಳಿಗೆಗಳ ಸಂಕೀರ್ಣ ಕಟ್ಟಡಕ್ಕೆ ಪೂಜ್ಯ “ಶ್ರೀ ದಿ|| ಲಕ್ಷ್ಮೀನರಸಿಂಹಯ್ಯ ಸ್ಮಾರಕ ಸಂಕೀರ್ಣ” ಕಟ್ಟಡದ ನಾಮಕರಣ ಸಮಾರಂಭವನ್ನು 14.10.2017 ರಂದು ಹಮ್ಮಿಕೊಳ್ಳಲಾಗಿತ್ತು. ಸಮಾಜದ ಬಂಧುಗಳ ಕಲ್ಯಾಣ ಕಾರ್ಯಗಳಿಗೆ, ಸಭೆ-ಸಮಾರಂಭಗಳಿಗೆ ಕಡಿಮೆ ಖರ್ಚಿನಲ್ಲಿ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ತುಮಕೂರಿನ ಕೇಂದ್ರ ಸ್ಥಳವಾದ ಬಟವಾಡಿ ವೃತ್ತದ ಬಳಿ ನಿರ್ಮಿಸಲಾದ ವಿಶಾಲವಾದ ಎರಡು ಅಂತಸ್ತಿನ ಭವ್ಯ ಭವನ ಸಮುದಾಯದ ಹೆಮ್ಮೆಯ ಪ್ರತೀಕವಾಗಿದೆ.

~~~~~~***~~~~~~

ಶಿರಾ: ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ(ರಿ) ಶಿರಾ ತಾಲ್ಲೂಕು ಕಡವಿಗೆರೆ ಗೇಟ್‍ನಲ್ಲಿ ಕರ್ನಾಟಕ ಸರ್ಕಾರದ 50 ಲಕ್ಷ ರೂ. ಅನುದಾನ ಮತ್ತು ಮಾನ್ಯ ಮಾಜಿ ಮಂತ್ರಿಗಳಾದ ಜಗದೀಶ್ ಶೆಟ್ಟರ್ ರವರು ವಿಶೇಷ ಅನುದಾನ 10 ಲಕ್ಷ ರೂ.ಗಳು ಒಟ್ಟು 60 ಲಕ್ಷ ರೂಗಳಲ್ಲಿ ಭವ್ಯ ಸಮುದಾಯ ಭವನ ಶಿರಾ ತಾಲ್ಲೂಕು ಸಮಿತಿ ವತಿಯಿಂದ ನಿರ್ಮಿಸಲಾಗಿದ್ದು ದಿನಾಂಕ: 24.09.2017 ರಂದು ಲೋಕಾರ್ಪಣೆಗೊಳಿಸಲಾಗಿದೆ. ಶಿರಾ ತಾಲ್ಲೂಕಿನ ಸಮುದಾಯ ಬಂಧುಗಳ ಮದುವೆ, ನಾಮಕರಣ, ನಿಶ್ಚಿತಾರ್ತ, ಆರತಕ್ಷತೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲಸಿಂಧುವಾದ ಸುಸಜ್ಜಿತ ವಿಶಾಲ ಸಮುದಾಯ ಭವನ ಲೋಕಾರ್ಪಣೆಗೊಳಿಸಲಾಗಿದೆ.

~~~~~***~~~~~

ಮಧುಗಿರಿ : ಮಧುಗಿರಿಯಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯದ ಮೊದಲನೇಯ ಮಹಡಿಯನ್ನು ನಿರ್ಮಿಸಲು ತುಮಕೂರು ಸಂಸದರಾದ ಸನ್ಮಾನ್ಯ ಶ್ರೀ ಮುದ್ದಹನುಮೇಗೌಡರು ಮತ್ತು ಮಧುಗಿರಿ ಶಾಸಕರಾದ ಸನ್ಮಾನ್ಯ ಶ್ರೀ ಕೆ.ಎನ್.ರಾಜಣ್ಣನವರುಗಳ ಒಟ್ಟು 10 ಲಕ್ಷ ರೂಗಳ ಅನುದಾನ ಮತ್ತು ಕೇಂದ್ರ ಸಂಘದ ಸಹಕಾರದಿಂದ ಮಧುಗಿರಿ ತಾಲ್ಲೂಕು ಸಮಿತಿ ವತಿಯಿಂದ ವಿದ್ಯಾರ್ಥಿನಿಲಯ ನಿರ್ಮಾಣವಾಗಿದ್ದು ದಿನಾಂಕ: 08.09.2017 ರಂದು ಉದ್ಘಾಟಿಸಲಾಯಿತು.

~~~~~~***~~~~~~

ತುಮಕೂರು: ತುಮಕೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಾನ್ ಚಂದ್ರಶೇಖರ್ ಸ್ಮಾರಕ ಬಾಲಕಿಯರ ವಿದ್ಯಾರ್ಥಿನಿಲಯದ ಉದ್ಘಾಟನೆ, ಸಮುದಾಯ ಭವನದ ಶಂಕುಸ್ಥಾಪನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ್ ೧೫೬ ನೇ ಜನ್ಮದಿನೋತ್ಸವ ಹಾಗೂ ದಿ. ಮಂಡಿ ಹರಿಯನಣ್ಣ ಪ್ರಶಸ್ತಿ ಮತ್ತು ಶ್ರೀ ಎಂ.ಎಸ್. ಮಲ್ಲಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ತುಮಕೂರಿನ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ದಿನಾಂಕ: 11-12-2016 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿತ್ತು.

ಈ ಭವ್ಯ ಸಮಾರಂಭವನ್ನು ಸನ್ಮಾನ್ಯ ಶ್ರೀ ಟಿ. ಬಿ. ಜಯಚಂದ್ರರವರು, ಕಾನೂನು ಮತ್ತು ಸಂಸದೀಯ ಇಲಾಖೆ ಸಛಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ಡಿ. ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು ರವರು ಸಂಘದ ತುಮಕೂರು ಮತ್ತು ಸಿರಾ-ಕಡವಿಗೆರೆ ಯ ಸಮುದಾಯ ಭವನಗಳಿಗೆ ಅನುದಾನಕ್ಕೆ ಒತ್ತಾಯಿಸಿ ಮನವಿಪತ್ರವನ್ನು ಮಾನ್ಯ ಮಂತ್ರಿಗಳಿಗೆ ಸಲ್ಲಿಸಿದರು.
ಸನ್ಮಾನ್ಯ ಶ್ರೀ ಮುದ್ದಹನುಮೇಗೌಡರು, ಮಾನ್ಯ ಸಂಸದರು, ತುಮಕೂರು ರವರು ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರಿನ ದೇವರಾಯಪಟ್ಟಣದ ಶ್ರೀಮಾನ್ ಚಂದ್ರಶೇಖರ್ ಸ್ಮಾರಕ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿದರು. ಸನ್ಮಾನ್ಯ ಶ್ರೀ ವಿ.ಎಸ್. ಉಗ್ರಪ್ಪನವರು, ವಿಧಾನ ಪರಿಷತ್ ಸದಸ್ಯರು ಬಟವಾಡಿಯ ನಿಯೋಜಿತ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಸನ್ಮಾನ್ಯ ಡಾ|| ಮುಖ್ಯಮಂತ್ರಿ ಚಂದ್ರುರವರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರವರು ಪೂಜ್ಯ ದಿ.ಮಂಡಿ ಹರಿಯಣ್ಣನವರ ಆಳೆತ್ತರದ ಭಾವಚಿತ್ರ ಅನಾವರಣ ಗೊಳಿಸಿದರು.
ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿ ಯನ್ನು ಶ್ರೀ ಜಿ.ವಿ. ಕೃಷ್ಣಮೂರ್ತಿ, ಗೌರಿಬಿದನೂರು ರವರಿಗೆ ಮತ್ತು ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿಯನ್ನು ಶ್ರೀ. ಬಿ.ಎಂ. ರಾಜಣ್ಣನವರಿಗೂ ಪ್ರಧಾನ ಮಾಡಲಾಯಿತು.
ತುಮಕೂರಿನ ಬಾಲಕಿಯರ ವಿದ್ಯಾರ್ಥಿನಿಲಯದ ನಿವೇಶನ ದಾನಿಗಳಾದ ಶ್ರೀಮತಿ ಪುಷ್ಪಾ ಮತ್ತು ಶ್ರೀ ರವಿಶಂಕರ್ರವರು, ಖ್ಯಾತ ಕೈಗಾರಿಕೋದ್ಯಮಿಗಳು, ತುಮಕೂರು ರವರಿಗೆ ಸಂಘದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ಗೌರಿಬಿದನೂರಿನ ವಿದ್ಯಾರ್ಥಿನಿಲಯದ ನಿವೇಶನ ದಾನಿಗಳಾದ ಶ್ರೀಮತಿ ಚಿಕ್ಕಮ್ಮ ವೆಂಕಟರಮಣಗೌಡರ ಪರವಾಗಿ ಶ್ರೀ ಮಂಜುನಾಥ್, ಗೌರಿಬಿದನೂರು ರವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಶ್ರೀ ಕಾಂತರಾಜು, ವಿಧಾನ ಪರಿಷತ್ ಸದಸ್ಯರು, ಶ್ರೀ ಎಸ್.ರಫ್ಹೀಕ್ ಅಹಮದ್,ಮಾನ್ಯ ಶಾಸಕರು, ತುಮಕೂರು ನಗರ, ಶ್ರೀ ಕೆ.ಎನ್. ರಾಜಣ್ಣ, ಮಾನ್ಯ ಶಾಸಕರು, ಮಧುಗಿರಿ ಕ್ಷೇತ್ರ, ಸನ್ಮಾನ್ಯ ಶ್ರೀ ಸೊಗಡು ಶಿವನಣ್ಣ, ಮಾಜಿ ಸಚಿವರು, ತುಮಕೂರು, ಸನ್ಮಾನ್ಯ ಶ್ರೀ ಜ್ಯೋತಿ ಗಣೇಶ್,ಬಿಜೆಪಿ ಜಿಲ್ಲಾ ಅಧ್ಯಕ್ಷರು, ಶ್ರೀಮತಿ ಯಶೋದಮ್ಮ, ಮಹಾ ಮೌರರು, ತುಮಕೂರು ಮಹಾನಗರ ಪಾಲಿಕೆ, ಶ್ರೀ ಟಿ.ಆರ್. ನಾಗರಾಜು, ಉಪ ಮಹಾಪೌರರು, ತುಮಕೂರು ಮಹಾನಗರ ಪಾಲಿಕೆ ರವರುಗಳು ಉಪಸ್ಥಿತರಿದ್ದರು.
೨೦೧೬ ನೇ ಸಾಲಿನ ವಿವಿಧ ಕೊರ್ಸ್ ಗಳ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಯಿತು.

ಸಮಾರಂಭದಲ್ಲಿ ಸಮಾಜದ ಗಣ್ಯರು, ಮುಖಂಡರು ಮತ್ತು ತಾ|| ಸಮಿತಿ, ವನಿತಾ ಮಂಡಳಿ, ವಿವಿಧ ಸಂಘ-ಸಂಸ್ಥೆ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ಬಂಧುಗಳು ಭಾಗವಹಿಸಿದ್ದರು..

~~~~~~~~***~~~~~~~~

ಬೆಂಗಳೂರು : ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು ರವರು ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದ 28 ನೇ ವಾರ್ಷಿಕೋತ್ಸವ ಸಮಾರಂಭವನ್ನು ದಿನಾಂಕ 13.03.2016 ರಂದು ಸಂಜೆ 4.00 ಗಂಟೆಗೆ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದು ಅಂದೇ ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ಸ್ಮಾರಕ ವಿದ್ಯಾರ್ಥಿನಿಲಯ ಬೆಂಗಳೂರು ದ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಾರಂಭೋತ್ಸವವನ್ನು ಆಯೋಜಿಸಲಾಗಿತ್ತು.

ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ ಸ್ಮಾರಕ ವಿದ್ಯಾರ್ಥಿನಿಲಯ ಬೆಂಗಳೂರು ದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ಶ್ರೀಯುತ ಹೆಚ್. ಶಶಿಧರ್ ರವರು, ನಿವೃತ್ತ ಐ.ಎ.ಎಸ್. ಅಧಿಕಾರಿಗಳು ನೆರವೇರಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಡಿ.ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ, ಸಂಘ, ಬೆಂಗಳೂರು ರವರು ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಶ್ರೀ. ಡಾ|| ಶಿವು ರವರು, ಡಾ||ಮೃತ್ಯುಂಜಯಣ್ಣನವರು, ಡಾ|| ಎಸ್.ಎಂ. ಸುರೇಶ್ ರವರು, ಕ್ಯಾಪ್ಟನ್ ಎಂ.ಎಂ. ಹರೀಶ್ ರವರು, ಶ್ರೀ ಎಂ. ಎಂ. ಮಹೇಶ್ ರವರು, ಶ್ರೀ ಬಿ.ಆರ್. ಚನ್ನಕೇಶವರವರು ಹಾಗೂ ವಿಷೇಶ ಆಹ್ವಾನಿತರಾಗಿ ಶ್ರೀ ಹೆಚ್. ಶ್ರೀಧರ್ ರವರು, ಶ್ರೀ ಕೆ.ಎನ್. ಹೇಮಚಂದ್ರರವರು, ಶ್ರೀಮತಿ ಪದ್ಮಾ ಚಂದ್ರು ರವರು, ಶ್ರೀ. ಬಿ.ಎನ್. ಲಕ್ಷ್ಮೀಪತಿರವರು, ಶ್ರೀ ಮಾಗೋಡು ದೊಡ್ಡೇಗೌಡರವರು, ಶ್ರೀ.ಆರ್. ಸದಾನಂದ ರವರು , ಶ್ರೀ ಭೋಜರಾಜು ರವರು, ಶ್ರೀ ನಾಗೇಂದ್ರ ಕೇ.ಜಿ. ರವರು ಮತ್ತು ಶ್ರೀ ರಮೇಶ್ ರವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಾನಿಗಳಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಸಮಾಜದ ಗಣ್ಯರು, ಕೇಂದ್ರ ಸಮಿತಿ ನಿರ್ದೇಶಕರುಗಳು, ತಾ|| ಸಮಿತಿ, ವನಿತಾ ಮಂಡಳಿ, ವಿವಿಧ ಸಂಘ-ಸಂಸ್ಥೆ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ವಿವರ ಮತ್ತು ಸಂಘಟನೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಈ ಕೆಳಕಂಡ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ......
www.hsks students association.com

~~~~~~***~~~~~~

ಗೌರಿಬಿದನೂರು ಟೌನ್ ನಲ್ಲಿ ಪ್ರಥಮವಾಗಿ ಸಮಾಜದ ಭಂಧುಗಳು ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ) ದ ಪ್ರಾರಂಭೋತ್ಸವ ಸಮಾರಂಭವನ್ನು ದಿನಾಂಕ 17 ಜನವರಿ 2016 ರಂದು ಬೆಳಿಗ್ಗೆ 11.00 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.

ಗೌರಿಬಿದನೂರು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ) ದ ಆವರಣದಲ್ಲಿ ಶ್ರೀಯುತ ಡಿ.ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ, ಸಂಘ, ಬೆಂಗಳೂರು ರವರು ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಯುತ ಶ್ರೀರಾಮ್ ಸಂಕೇತ್ ರವರು, ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ), ಗೌರಿಬಿದನೂರು ರವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀಮತಿ ಮಂಜುಳ, ಉಪ ನೋಂದಣಾಧಿಕಾರಿಗಳು, ಚಿಕ್ಕಬಳ್ಳಾಪುರ ರವರು, ಶ್ರೀ ಜಿ.ಸಿ. ಸತೀಶ್ ಕುಮಾರ್ ರವರು, ಉಪಾಧ್ಯಕ್ಷರು, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ), ಗೌರಿಬಿದನೂರು, ಶ್ರೀ ಪಿ. ಮೂರ್ತಿ ರವರು, ಅಧ್ಯಕ್ಷರು, ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ), ತುಮಕೂರು, ಶ್ರೀ ಸಿ.ಆರ್. ನರಸಿಂಹಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಚಿಕ್ಕಬಳ್ಳಾಪುರ, ಶ್ರೀ ಬಿ.ಎನ್. ಲಕ್ಷ್ಮೀಪತಿ ರವರು, ಅಧ್ಯಕ್ಷರು, ಸಾಧು ಸಂಗಮ ಪತ್ತಿನ ಸಹಕಾರ ಸಂಘ (ನಿ), ಬೆಂಗಳೂರು, ಶ್ರೀ ಗೋವಿಂದರಾಜು, ಅಧ್ಯಕ್ಷರು, ಹಿಂ.ಸಾ.ಕ್ಷೇ, ಸಂಘ, ಗೌರಿಬಿದನೂರು ರವರು ಹಾಗೂ ವಿಶೇಷ ಆಹ್ವಾನಿತರಾಗಿ ಶ್ರೀ ಹೆಚ್. ಶ್ರೀಧರ್ ರವರು, ಶ್ರೀಮತಿ ಪದ್ಮಾ ಚಂದ್ರು ರವರು, ಶ್ರೀ ಬಿ.ಜಿ. ಗೋವಿಂದರಾಜು, ಶ್ರೀ ಬಿ.ಹೆಚ್. ನಂಜುಂಡಯ್ಯ ನವರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ), ಗೌರಿಬಿದನೂರು ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗ ಸಮಾರಂಭವನ್ನು ಸುಸೂತ್ರವಾಗಿ ನೆರವೇರಿಸಿದರು. ಸಮಾರಂಭದಲ್ಲಿ ಸಮಾಜದ ಗಣ್ಯರು, ಕೇಂದ್ರ ಸಮಿತಿ ಮತ್ತು ತಾ|| ಸಮಿತಿ ನಿರ್ದೇಶಕರುಗಳು, ವನಿತಾ ಮಂಡಳಿ, ವಿವಿಧ ಸಂಘ-ಸಂಸ್ಥೆ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ಸಮಾಜ ಭಂಧುಗಳು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿದರು.

~~~~~~~~***~~~~~~~~


ದಿನಾಂಕ: 14-11-2015 ರಂದು ಪೂಜ್ಯ ಮಂಡಿ ಹರಿಯಣ್ಣನವರ ೧೫೫ ನೇ ಜನ್ಮದಿನೋತ್ಸವ ಸ್ಮರಣ ಸಂಚಿಕೆ “ಸ್ಪಂದನ” ಲೋಕಾರ್ಪಣೆ,
ಮಂಡಿ ಹರಿಯಣ್ಣ ಮತ್ತು ಎಂ.ಎಸ್. ಮಲ್ಲಯ್ಯನವರ ಪ್ರಶಸ್ತಿ ಪ್ರಧಾನ,
ಜನಪ್ರತಿನಿಧಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ವನ್ನು
ಕೇಂದ್ರ ಸಂಘದ ವತಿಯಿಂದ ಬೆಂಗಳೂರು ಮಹಾಲಕ್ಷ್ಮಿಪುರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಮಾನ್ ಸಿದ್ದರಾಮಯ್ಯನವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು,
ಶ್ರೀಮಾನ್ ಹೆಚ್. ಆಂಜನೇಯರವರು, ಸಮಾಜ ಕಲ್ಯಾಣ ಸಚಿವರು "ಸ್ಪಂದನ" ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು,
ಶ್ರೀಮಾನ ಟಿ. ಬಿ. ಜಯಚಂದ್ರರವರು, ಕಾನೂನು ಮತ್ತು ಸಂಸದೀಯ ಹಾಗೂ ಉನ್ನತ ಶಿಕ್ಷಣ ಸಚಿವರು ದಿ. ಪೂಜ್ಯ ಮಂಡಿ ಹರಿಯಣ್ಣನವರ ಭಾವಚಿತ್ರ ಅನಾವರಣ ಗೊಳಿಸಿದರು.
ಮುಖ್ಯ ಅಥಿತಿಗಳಾಗಿ ಸನ್ಮಾನ್ಯ ಹೆಚ್.ಎಂ. ರೇವಣ್ಣನವರು, ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ವಿ.ಎಸ್. ಉಗ್ರಪ್ಪನವರು, ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ಡಾ|| ಮುಖ್ಯಮಂತ್ರಿ ಚಂದ್ರುರವರು, ಮಾಜಿ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಡಿ. ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು ರವರು ಸಂಘದ ವಿವಿಧ ಬೇಡಿಕೆಗಳ ಬಿನ್ನವತ್ತಳಿಕೆ ಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು..

ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿ ಯನ್ನು ಶ್ರೀ ಡಿ. ರಾಮಯ್ಯನವರಿಗೂ, ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿಯನ್ನು ಶ್ರೀ. ಎನ್. ರೇವಣ್ಣನವರಿಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನ ಸದಸ್ಯರಾಗಿ ಚುನಾಯಿತರಾದ ಶ್ರೀ ನಾಗರಾಜ್ ಮತ್ತು ಶ್ರೀಮತಿ ನಳಿನಾ ಮಂಜುನಾಥ್ ರವರನ್ನು ಸನ್ಮಾನಿಸಲಾಯಿತು.
೨೦೧೪-೧೫ ನೇ ಸಾಲಿನ ಚುನಾಯಿತ ಜನಪ್ರತಿನಿಧಿಗಳನ್ನು ಅಭಿನಂದಿಸಲಾಯಿತು ಮತ್ತು ೨೦೧೫ ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಬೆಳ್ಳಿ ಪದಕ ನೀಡಿ ಪುರಸ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ಅಧಿಕೃತ ವೆಬ್ ಸೈಟ್  www.hindusadarasangha.in ಅನ್ನು ಖ್ಯಾತ ತಜ್ಗ್ನ ವೈದ್ಯರಾದ ಶ್ರೀ ಮೃತ್ಯುಂಜಯಣ್ಣನವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು.ವೆಬ್ಸೈಟ್ ನಿರ್ಮಿಸಿ, ಸಂಯೋಜಿಸಿ ಕನ್ನಡದಲ್ಲಿ ಅಳವಡಿಸಿದ ಶ್ರೀ ಬಿ.ಎನ್. ನಾಗರಾಜ್ ರವರು ಉಪಸ್ಥಿತರಿದ್ದರು

ಸಮಾರಂಭದಲ್ಲಿ ಸಮಾಜದ ಗಣ್ಯರು, ಮುಖಂಡರು ಮತ್ತು ತಾ|| ಸಮಿತಿ, ವನಿತಾ ಮಂಡಳಿ, ವಿವಿಧ ಸಂಘ-ಸಂಸ್ಥೆ ಸದಸ್ಯರುಗಳು ಹಾಗೂ ಅಪಾರ ಸಂಖ್ಯೆಯ ಬಂಧುಗಳು ಭಾಗವಹಿಸಿದ್ದರು..

~~~~~~~~***~~~~~~~~

ದಿನಾಂಕ: 28-10-2015 ರಂದು ಮಧುಗಿರಿ ಪಟ್ಟಣದಲ್ಲಿರುವ ವಿದ್ಯಾರ್ಥಿನಿಯರ ವಸತಿನಿಲಯದ ಮೊದಲನೇ ಅಂತಸ್ಥಿನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಮಧುಗಿರಿ ತಾಲ್ಲೂಕಿನ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಾದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ, ಮಧುಗಿರಿ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಯುತ ಡಿ.ಈ. ರವಿಕುಮಾರ್ ರವರು, ಅಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು ರವರು ವಹಿಸಿದ್ದರು.
ಶ್ರೀಮಾನ್ ಡಾ|| ಮುಖ್ಯಮಂತ್ರಿ ಚಂದ್ರುರವರು, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರವರು ಚುನಾಯಿತ ಜನಪ್ರತಿನಿಧಿಗಳನ್ನು ಸನ್ಮಾನಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಬಿ.ಎನ್. ಲಕ್ಷ್ಮೀಪತಿ, ಉಪಾಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು, ಶ್ರೀ ಎ.ಡಿ. ಬಲರಾಮಯ್ಯ, ಮಾಜಿ ಪುರಸಭಾ ಸದಸ್ಯರು, ಕೊರಟಗೆರೆ, ಶ್ರೀ ಎಂ.ಜಿ. ಶ್ರೀನಿವಾಸಮೂರ್ತಿ, ಶ್ರೀ ಬಿ.ಎನ್. ನರಸಿಂಹಮೂರ್ತಿ, ಶ್ರೀ ಎಂ.ಕೆ. ನಂಜುಂಡಯ್ಯ ರವರು ಉಪಸ್ಥಿತರಿದ್ದರು.

~~~~~~~~***~~~~~~~~

ಗೌರೀಬಿದನೂರಿನ ಸಮತಾ ಪ್ರೌಡಶಾಲೆಯಲ್ಲಿ ದಿನಾಂಕ: ೧೦.೧೦.೨೦೧೫ ರಿಂದ ೧೫.೧೦.೨೦೧೫ ರ ವರೆಗೆ ವಿವಿಧ ಸರ್ಕಾರೀ ಹುದ್ದೆಗಳಾದ ಪ್ರಥಮ ದರ್ಜೆ/ ದ್ವಿತೀಯ ದರ್ಜೆ/ ಸಹಾಯಕರು/ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಸ್ಮೃತಿ ಕ್ರಿಯೇಶನ್ಸ್ ವತಿಯಿಂದ, ಕೇಂದ್ರ ಸಂಘದ ಸಹಯೋಗದಲ್ಲಿ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ನೂರಾರು ಉದ್ಯೋಗಾಕಾಂಕ್ಷಿಗಳು ಉತ್ತಮ ತರಬೇತಿಯನ್ನು ಪಡೆದುಕೊಂಡರು.

~~~~~~~~***~~~~~~~~

ದಿನಾಂಕ: 08-03-2015 ರಂದು ತುಮಕೂರಿನ ದೇವರಾಯಪಟ್ಟಣದ ನಿವೇಶನದಲ್ಲಿ ವಿದ್ಯಾರ್ಥಿನಿಯರ ವಸತಿನಿಲಯ ನಿರ್ಮಾಣಕ್ಕಾಗಿ ಶಂಖುಸ್ಥಾಪನೆ ನೆರವೇರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದ ಸನ್ಮಾನ್ಯ ಶ್ರೀ ಕೆ.ಎನ್. ರಾಜಣ್ಣ, ಮಧುಗಿರಿ ಶಾಸಕರು, ಸನ್ಮಾನ್ಯ ಶ್ರೀ ರಫ಼ೀಕ್ ಅಹಮದ್, ತುಮಕೂರು ಶಾಸಕರು, ಸನ್ಮಾನ್ಯ ಶ್ರೀ ಸುರೇಶ್ ಗೌಡರು, ತುಮಕೂರು ಗ್ರಾಮಾಂತರ ಶಾಸಕರು, ಸನ್ಮಾನ್ಯ ಶ್ರೀ ಹುಲಿನಾಯ್ಕರ್, ವಿಧಾನಪರಿಷತ್ ಸದಸ್ಯರು ಭೂಮಿ ಪೂಜೆ ನೆರವೇರಿಸಿದರು. ಶ್ರೀಯುತ ಡಿ.ಈ. ರವಿಕುಮಾರ್ ರವರು, ಅಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು, ಶ್ರೀಮತಿ ಮುಖ್ಯಮಂತ್ರಿ ಚಂದ್ರುರವರು ರವರು ಗುದ್ದಲಿ ಪೂಜೆ ನೆರವೇರಿಸಿದರು.
ತುಮಕೂರು ಸಂಸದರಾದ ಸನ್ಮಾನ್ಯ ಶ್ರೀ ಮುದ್ದಹನುಮೇಗೌಡ ರವರು, ತುಮಕೂರು ತಾ. ಶಾಖೆಯ ಅಧ್ಯಕ್ಷರಾದ ಶ್ರೀ. ಕೆ. ಉಗ್ರಪ್ಪರವರು ನಾಮಪಲಕ ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ನಿವೇಶನ ದಾನಿಗಳಾದ ಶ್ರೀಮತಿ ಪುಷ್ಪಾ ಮತ್ತು ರವಿಶಂಕರ್ ದಂಪತಿಗಳನ್ನು ಸನ್ಮಾನಿಸಲಾಯಿತು ಹಾಗೂ ಕೊಠಡಿ ನಿರ್ಮಾಣಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು.
ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ಶ್ರೀ ಡೆಲ್ಟಾ ರವಿಕುಮಾರ್, ಶ್ರೀಮತಿ ಲಲಿತಾ, ಶ್ರೀ ಲೋಕೇಶ್ ರವರು ಉಪಸ್ಥಿತರಿದ್ದರು.