ಮುಖಪುಟ ವಿದ್ಯಾರ್ಥಿ ವೇತನಗಳು
ವಿದ್ಯಾರ್ಥಿವೇತನ

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು-೮೬

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ಮತ್ತು ಸಮಾಜದ ವಿವಿಧ ಸಂಘಟನೆ-ಸಂಘಗಳು ಹಾಗೂ ಟ್ರಸ್ಟ್ ಗಳ ವತಿಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ದೊರೆಯುವ ವಿದ್ಯಾರ್ಥಿವೇತನ ಮತ್ತು ಪ್ರತಿಭಾಪುರಸ್ಕಾರಗಳು:


  • ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ :
    • ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ವತಿಯಿಂದ ಪ್ರತೀ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತೀ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಕರೆಯಾಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಂಘದ ಕಚೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ.

    • ಪುಟ್ಟನಂಜಮ್ಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ/ವಿದ್ಯಾರ್ಥಿವೇತನ :

    • ಸಮಾಜದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಸ್ಥಾಪಿಸಲಾದ ಹಿರಿಯ ಸಮಾಜ ಬಂದುಗಳ ಸೇವಾ ಟ್ರಸ್ಟ್ ಶ್ರೀಮತಿ ಶ್ರೀ ಲಕ್ಷ್ಮೀಪತಯ್ಯ ಪುಟ್ಟನಂಜಮ್ಮ ಟ್ರಸ್ಟ್ ವತಿಯಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದೆ. ಪ್ರತೀ ವರ್ಷ ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ ಮತ್ತು ಆಯ್ಕೆಯಾದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೆ ಮಾಹೆಯಾನ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಂಘದ ಕಛೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ.

    • ತಾಲ್ಲೂಕು ಸಂಘಟನೆಗಳು ಮತ್ತು ಬ್ಯಾಂಕ್ ಗಳ ವತಿಯಿಂದ ಪ್ರತಿಭಾನ್ವಿತರಿಗೆ ಪುರಸ್ಕಾರ :

    • ಸಾದು ಸಂಗಮ ಪತ್ತಿನ ಸಹಕಾರ ಸಂಘ,ಬೆಂಗಳೂರು, ಸಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ, ತುಮಕೂರು ಮತ್ತು ಪರಮಹಂಸ ಪತ್ತಿನ ಸಹಕಾರ ಸಂಘ, ತುಮಕೂರು ರವರು ಆಯಾ ತಾಲ್ಲೂಕು/ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತೀ ವರ್ಷ ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಕರೆಯಾಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಹಕಾರ ಸಂಘ(ಬ್ಯಾಂಕ್)ನ ಕಚೇರಿಗಳಲ್ಲಿ ಮತ್ತು ಸಂಘದ ವೆಬ್ ಸೈಟ್ ನಲ್ಲಿ ನಿರ್ದಿಷ್ಟ ಅವದಿಯಲ್ಲಿ ಪಡೆಯಬಹುದಾಗಿದೆ.

      ಇದಲ್ಲದೇ ಗೌರಿಬಿದನೂರು ಮತ್ತು ಮಧುಗಿರಿ ಗಳಲ್ಲಿ ಹಿಂದೂ ಸಾದರ ನೌಕರರ ಸಂಘಗಳು ಸ್ಥಾಪನೆಯಾಗಿದ್ದು ಆಯಾ ತಾಲ್ಲೂಕು/ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತೀ ವರ್ಷ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತೀ ವರ್ಷ ಆಗಸ್ಟ್-ಸೆಪ್ಟಂಬರ್ ತಿಂಗಳಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಸೂಕ್ತ ಅರ್ಜಿಗಳನ್ನು ಕರೆಯಾಲಾಗುತ್ತದೆ ಮತ್ತು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಅರ್ಜಿಗಳನ್ನು ಆಯಾ ತಾಲ್ಲೂಕು ಸಂಘದ ಕಛೇರಿಗಳಲ್ಲಿ ಮತ್ತು ಹಿಂದೂ ಸಾದರ ನೌಕರರ ಸಂಘದ ಕಚೇರಿಗಳಲ್ಲಿ ಸೂಕ್ತ ಅವದಿಯಲ್ಲಿ ಪಡೆಯಬಹುದಾಗಿದೆ.