ಮುಖಪುಟ ಪ್ರಶಸ್ತಿ ಪುರಸ್ಕಾರಗಳು
ಪ್ರಶಸ್ತಿ-ಪುರಸ್ಕಾರಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು


ಪ್ರಶಸ್ತಿ-ಪುರಸ್ಕಾರಗಳು

ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿ ಮತ್ತು ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿ

2014-2015 ನೇ ಸಾಲಿನಿಂದ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ಶ್ರೀ ಡಿ. ಈ. ರವಿಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಮಾಜದ ಹಿರಿಯ ಇಬ್ಬರು ಮಹನೀಯರು ಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿದ್ದು,ಪ್ರತೀ ವರ್ಷ ಸಮಾಜದ ಏಳಿಗೆಗಾಗಿ ದುಡಿದ, ನಿರಂತರ ಸಂಘದ ಒಡನಾಟದಲ್ಲಿದ್ದು ಸಮಾಜದ-ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡು, ಸಂಘದ ತಾಲ್ಲೂಕು ಮತ್ತು ಜಿಲ್ಲಾ ಶಾಖೆಗಳಲ್ಲಿ ಪದಾಧಿಕಾರಿಗಳಾಗಿ ಸುಮಾರು ೩೦ ಕ್ಕೂ ಅಧಿಕ ವರ್ಷಗಳ ಕಾಲ ಗುರುತಿಸಬಲ್ಲ ಕಾರ್ಯಸಾಧನೆಗೈದ ಅಥವಾ ಸಮಾಜ ಉನ್ನತಿಗಾಗಿ ಅಪಾರ ಪ್ರಮಾಣದ ಸಹಾಯ-ಸಹಕಾರ ನೀಡಿದ ಮಹಾದಾನಿಗಳು, ಹಿರಿಯ ಸಮಾಜ ಬಂಧುಗಳನ್ನು ಗುರುತಿಸಿ ಪ್ರಶಸ್ತಿ ಸಮಿತಿಯಿಂದ ಆಯ್ಕೆಯಾದ ಇಬ್ಬರು ಮಹನೀಯರಿಗೆ ಪ್ರತಿಷ್ಟಿತ ಪ್ರಶಸ್ತಿಗಳಾದ ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿ ಮತ್ತು ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿ ಗಳನ್ನು ಸಂಘದ ಸಮಾರಂಭದಲ್ಲಿ ಪ್ರದಾನ ಮಾಡಿ ಸತ್ಕರಿಸುವ ಸಂಪ್ರದಾಯವನ್ನು ಹಾಕಿಕೊಳ್ಳಲಾಗಿದೆ.


ಪ್ರಥಮ ಬಾರಿಗೆ 2014-2015 ನೇ ಸಾಲಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಕೇಂದ್ರ ಸಂಘದ ವತಿಯಿಂದ ಬೆಂಗಳೂರು ಮಹಾಲಕ್ಷ್ಮಿಪುರ ಸಂಘದ ಆವರಣದಲ್ಲಿ ದಿನಾಂಕ: 14-11-2015 ರಂದು ಹಮ್ಮಿಕೊಳ್ಳಲಾಗಿದ್ದ ಪೂಜ್ಯ ಮಂಡಿ ಹರಿಯಣ್ಣನವರ 155 ನೇ ಜನ್ಮದಿನೋತ್ಸವ ಸ್ಮರಣ ಸಂಚಿಕೆ “ಸ್ಪಂದನ” ಲೋಕಾರ್ಪಣೆ ಮತ್ತು ಜನಪ್ರತಿನಿಧಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಮಾನ್ ಸಿದ್ದರಾಮಯ್ಯನವರಿಂದ ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿಯನ್ನು ಸಂಘದ ಮಾಜಿ ಅಧ್ಯಕ್ಷರು, ಮಹಾ ದಾನಿಗಳು ಆದ ಒಳಕಲ್ಲು ಶ್ರೀ ಡಿ. ರಾಮಯ್ಯನವರಿಗೂ ಮತ್ತು ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿಯನ್ನು ಹಿರಿಯ ಸಮಾಜ ಸೇವಾ ಕರ್ತ,ಸಂಘದ ಮಾಜಿ ಕಾರ್ಯದರ್ಶಿಗಳಾಗಿದ್ದ ಶ್ರೀ. ಎನ್. ರೇವಣ್ಣನವರಿಗೆ ಪ್ರದಾನ ಮಾಡಿ ಗೌರವಪೂರಕವಾಗಿ ಅಭಿನಂದಿಸಲಾಯಿತು.


2015-16 ನೇ ಸಾಲಿಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನು ಕೇಂದ್ರ ಸಂಘದ ವತಿಯಿಂದ ಬೆಂಗಳೂರು ಮಹಾಲಕ್ಷ್ಮಿಪುರ ಸಂಘದ ಆವರಣದಲ್ಲಿ ದಿನಾಂಕ: 11-12-2016 ರಂದು ಹಮ್ಮಿಕೊಳ್ಳಲಾಗಿದ್ದ ಪೂಜ್ಯ ಮಂಡಿ ಹರಿಯಣ್ಣನವರ 156 ನೇ ಜನ್ಮದಿನೋತ್ಸವ ಸ್ಮರಣ ಸಂಚಿಕೆ “ಸ್ಪಂದನ” ಲೋಕಾರ್ಪಣೆ ಮತ್ತು ಜನಪ್ರತಿನಿಧಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾನ್ಯ ಕಾನೂನು ಮತ್ತು ಸಂಸದೀಯ ಇಲಾಖೆ ಮಂತ್ರಿಗಳಾದ ಶ್ರೀಮಾನ್ ಟಿ.ಬಿ. ಜಯಚಂದ್ರರವರಿಂದ ಶ್ರೀಮಾನ್ ಮಂಡಿ ಹರಿಯಣ್ಣ ಪ್ರಶಸ್ತಿ ಯನ್ನು ಕೇಂದ್ರ ಸಂಘದ ಮಾಜಿ ಉಪಾಧ್ಯಕ್ಷರು, ಹಿರಿಯ ಸಮಾಜಮುಖಿ ಚಿಂತಕರಾದ ಶ್ರೀ ಜಿ.ವಿ. ಕೃಷ್ಣಮೂರ್ತಿ, ಗೌರಿಬಿದನೂರು ರವರಿಗೆ ಮತ್ತು ಶ್ರೀಮಾನ್ ಎಂ.ಎಸ್. ಮಲ್ಲಯ್ಯ ಪ್ರಶಸ್ತಿಯನ್ನು ಹಿರಿಯ ಸಮಾಜ ಸೇವಾ ಕರ್ತ,ತುಮಕೂರು ತಾ||ಸಂಘದ ಮಾಜಿ ಅಧಕ್ಷರು, ಶಿಸ್ತು ಬದ್ದ ಸೇವಾ ಕರ್ತರು ಆದ ಶ್ರೀ. ಬಿ.ಎಂ. ರಾಜಣ್ಣನವರು, ತುಮಕೂರು ರವರಿಗೂ ಪ್ರಧಾನ ಮಾಡಿ ಗೌರವ ಸಮರ್ಪಣೆ ಮಾಡಿ ಅಭಿನಂದಿಸಲಾಯಿತು.

ತುಮಕೂರಿನ ಶ್ರೀಮಾನ್ ಚಂದ್ರಶೇಖರ್ ಸ್ಮಾರಕ ಬಾಲಕಿಯರ ವಿದ್ಯಾರ್ಥಿನಿಲಯದ ಉದ್ಘಾಟನೆ, ಸಮುದಾಯ ಭವನದ ಶಂಕುಸ್ಥಾಪನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರ್ ೧೫೬ ನೇ ಜನ್ಮದಿನೋತ್ಸವ ಸಮಾರಂಭ ತುಮಕೂರಿನ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ ದಿನಾಂಕ: 11-12-2016 ರಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ಸಮಾರಂಭವದಲ್ಲಿ ಸನ್ಮಾನ್ಯ ಶ್ರೀ ಟಿ. ಬಿ. ಜಯಚಂದ್ರರವರು, ಕಾನೂನು ಮತ್ತು ಸಂಸದೀಯ ಇಲಾಖೆ ಸಛಿವರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಯುತ ಡಿ. ಈ. ರವಿಕುಮಾರ್, ಅಧ್ಯಕ್ಷರು, ಹಿಂ.ಸಾ.ಕ್ಷೇ.ಸಂಘ, ಬೆಂಗಳೂರು ರವರು, ಸನ್ಮಾನ್ಯ ವಿ.ಎಸ್. ಉಗ್ರಪ್ಪನವರು, ವಿಧಾನ ಪರಿಷತ್ ಸದಸ್ಯರು, ಸನ್ಮಾನ್ಯ ಡಾ|| ಮುಖ್ಯಮಂತ್ರಿ ಚಂದ್ರುರವರು, ಮಾಜಿ ವಿಧಾನ ಪರಿಷತ್ ಸದಸ್ಯರುಗಳು ತುಮಕೂರಿನ ಬಾಲಕಿಯರ ವಿದ್ಯಾರ್ಥಿನಿಲಯದ ದೇವರಾಯಪಟ್ಟಣದ ನಿವೇಶನ ದಾನಿಗಳಾದ ಶ್ರೀಮತಿ ಪುಷ್ಪಾ ಮತ್ತು ಶ್ರೀ ರವಿಶಂಕರ್ರವರು, ಖ್ಯಾತ ಕೈಗಾರಿಕೋದ್ಯಮಿಗಳು, ತುಮಕೂರು ರವರಿಗೆ ಸಂಘದ ವತಿಯಿಂದ "ದಾನ ಶ್ರೇಷ್ಟ" ಪ್ರಶಸ್ತಿಯನ್ನು ನೀಡಿ ಗೌರವ ಸಮರ್ಪಣೆ ಮಾಡಲಾಯಿತು.

ಇದೇ ಸಂಧರ್ಭದಲ್ಲಿ ಗೌರಿಬಿದನೂರಿನ ವಿದ್ಯಾರ್ಥಿನಿಲಯದ ನಿವೇಶನ ದಾನಿಗಳಾದ ಶ್ರೀಮತಿ ಚಿಕ್ಕಮ್ಮ ವೆಂಕಟರಮಣಗೌಡರ ಪರವಾಗಿ ಉಪನ್ಯಾಸಕ ಶ್ರೀ ಮಂಜುನಾಥ್, ಗೌರಿಬಿದನೂರು ರವರನ್ನು ಸನ್ಮಾನಿಸಲಾಯಿತು.