ಮುಖಪುಟ ಸಮುದಾಯ ಭವನಗಳು
ಸಮುದಾಯ ಭವನಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು

ಸಮುದಾಯ ಭವನ

1917 ರಿಂದ 1942 ರವರೆಗೂ ಪೂಜ್ಯ ಮಂಡಿ ಹರಿಯಣ್ಣನವರು ತಮ್ಮ ಸ್ವಂತ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 1943 ರಲ್ಲಿ "ಸಾದು ಮತದ ಸಂಘ" ಎಂದು ನೋದಾಯಿಸಲ್ಪಟ್ಟ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ನಿವೇಶನವನ್ನು 1972 ರಲ್ಲಿ ನಮ್ಮ ಹಿರಿಯರಾದ ದಿ||ಶ್ರೀಯುತ ಎಂ.ಎಸ್ ಮಲ್ಲಯ್ಯ ನವರು, ದಿ|| ಬಿ.ಕೆ ಶಿವಲಿಂಗಪ್ಪ ನವರು ಮತ್ತು ದಿ||ಎಂ.ಹೆಚ್ ರಾಜು ರವರು ಹಾಗೂ ಇತರರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಮಹಾಲಕ್ಷ್ಮಿಪುರಂ ನ ನಿವೇಶನದಲ್ಲಿ ದಾನಿಗಳ ಸಹಕಾರದಿಂದ 1977 ರಲ್ಲಿ ಸಮುದಾಯ ಭವನ ನಿರ್ಮಿಸಲಾಯಿತು. ೧೯೮೦ ರಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನೆರವೇರಿತು. 2008-20012 ರ ಅವದಿಯಲ್ಲಿ ಮೊದಲ ಅಂತಸ್ತಿನಲ್ಲಿ ದಾನಿಗಳ ನೆರವಿನಿಂದ ಕೊಠಡಿಗಳನ್ನು ನಿರ್ಮಿಸಲಾಯಿತು. 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ. 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ. 2014 ರಲ್ಲಿ ಶ್ರೀ ರವಿಕುಮಾರ್ ಡಿ.ಈ. ರವರ ಆಡಳಿತ ಮಂಡಳಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯವನ್ನು ಸಂಪೂರ್ಣ ನವೀಕರಿಸಲಾಯಿತು.

 

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಶಿರಾ

ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಪಕ್ಕದಲ್ಲೆ ಶ್ರೀಯುತ ಕೆ.ಆರ್ ಕರೇಗೌಡರು ೨೫-೦೨-೨೦೦೪ ರಂದು ದಾನವಾಗಿ ನೀಡಿದ ೨೦ ಗುಂಟೆ ಜಮೀನಿನಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅನುದಾನದಲ್ಲಿ ನೀಡಲಾದ ೧೫ ಲಕ್ಷ ರೂಗಳ ಮತ್ತು ದಾನಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ವಾಗುತ್ತಿದೆ ಮತ್ತು ಇದಲ್ಲದೇ ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ೨೦ ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಕೊರಟಗೆರೆ

ಕೊರಟಗೆರೆ ಪಟ್ಟಣದಲ್ಲಿ ಸಂಘದ ಸ್ವತ್ತಿನಲ್ಲಿ ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರು ರವರ ಅನುದಾನ ೧೫ ಲಕ್ಷ ರೂಗಳೊಂದಿಗೆ ಮತ್ತು ದಾನಿಗಳ ಸಹಕಾರದಿಂದ ಸುಸಜ್ಜಿತ ಸಮುದಾಯ ಭವನವನ್ನು ಶ್ರೀಯುತ ಎ.ಡಿ ಬಲರಾಮಯ್ಯ ನವರು ಮತ್ತು ಕೊರಟಗೆರೆ ತಾಲ್ಲೂಕು ಸಮಿತಿ ಸದದ್ಯರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ.ಕೊರಟಗೆರೆ ಪಟ್ಟಣದಲ್ಲಿ ಸಂಘದ ಸುಸಜ್ಜಿತ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ನೆರವೇರುತ್ತಿದೆ.