ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಶಿರಾ
|
ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಪಕ್ಕದಲ್ಲೆ ಶ್ರೀಯುತ ಕೆ.ಆರ್ ಕರೇಗೌಡರು ೨೫-೦೨-೨೦೦೪ ರಂದು ದಾನವಾಗಿ ನೀಡಿದ ೨೦ ಗುಂಟೆ ಜಮೀನಿನಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅನುದಾನದಲ್ಲಿ ನೀಡಲಾದ ೧೫ ಲಕ್ಷ ರೂಗಳ ಮತ್ತು ದಾನಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ವಾಗುತ್ತಿದೆ ಮತ್ತು ಇದಲ್ಲದೇ ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ೨೦ ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. |
ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ಮಂಜೂರಾಗಿರುವ ೨೦ ಗುಂಟೆ ಜಮೀನಿನಲ್ಲಿ ಶಿರಾ ತಾಲ್ಲೂಕು ಶಾಖೆಯ ಕಛೇರಿ ಕಟ್ಟಡವನ್ನು ನಿರ್ಮಿಸಲು ಅಡಿಪಾಯ ಹಾಕಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. |
|
|
|