ಮುಖಪುಟ ತುಮಕೂರು
ಹಿಂದೂ ಸಾದರ ಸಂಘದ ವಜ್ರಮಹೋತ್ಸವ ಮತ್ತು ಪೂಜ್ಯ ಮಂಡಿ ಹರಿಯಣ್ಣ ವಿದ್ಯಾರ್ಥಿನಿಲಯದ ಶತಮಾನೋತ್ಸವ ಸಮಾರಂಭದ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಗಾಗಿ ಸಮಾಜ ಭಂಧುಗಳ ಮಾಹಿತಿ ಸಲ್ಲಿಸುವ ಬಗ್ಗೆ....

ಶತಮಾನೋತ್ಸವ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಗಾಗಿ ಸಮಾಜ ಭಂಧುಗಳ ಮಾಹಿತಿ ಸಲ್ಲಿಸುವ ಬಗ್ಗೆ....

ಪೂಜ್ಯ ಶ್ರೀ ದಿ. ಮಂಡಿ ಹರಿಯಣ್ಣನವರು ಸಂಸ್ಥಾಪಿತ ವಿದ್ಯಾರ್ಥಿನಿಲಯ 100 ವರ್ಷಗಳನ್ನು ಪೂರೈಸಿದ್ದು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ(ರಿ), ಬೆಂಗಳೂರು ಕೇಂದ್ರ ಸಂಘ ಸ್ಥಾಪಿತವಾಗಿ 75 ವರ್ಷಗಳನ್ನು ಪೂರೈಸಿದ್ದು ಕೇಂದ್ರ ಸಮಿತಿ ಮತ್ತು ಎಲ್ಲಾ ತಾಲ್ಲೂಕು ಸಮಿತಿ ಆಡಳಿತ ಮಂಡಳಿ ಮತ್ತು ನಿರ್ದೇಶಕರುಗಳು, ಸಂಘದ ವಜ್ರ ಮಹೋತ್ಸವ ಮತ್ತು ವಿದ್ಯಾರ್ಥಿನಿಲಯದ ಶತಮಾನೋತ್ಸವವನ್ನು ವಿಜೃಂಬಣೆಯಿಂದ ಅಚರಿಸಲು ತೀರ್ಮಾನಿಸಲಾಗಿದ್ದು, ತತ್ಸಂಬಂದವಾಗಿ ಜನವರಿ 2019 ರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದರಿಸಲಾಗಿತ್ತು, ಕರೋನಾ ಸಂಕಷ್ಟದಿಂದಾಗಿ ಸಾದ್ಯವಾಗದೆ ಇದೀಗ ೨೦೨೨ರಲ್ಲಿ ವಿಜ್ರುಂಬಣೆಯಿಂದ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಶತಮಾನೋತ್ಸವ ಸಮಾರಂಭದ ಸವಿನೆನಪಿಗಾಗಿ ಒಂದು ಸ್ಮರಣ ಸಂಚಿಕೆಯನ್ನು ಹೊರತರಲು ತೀರ್ಮಾನಿಸಿದ್ದು, ಸ್ಮರಣ ಸಂಚಿಕೆಯಲ್ಲಿ ಪೂಜ್ಯ ಮಂಡಿ ಹರಿಯಣ್ಣನವರ ಸಾಧನಾ ವರದಿ, ಸಮಾಜದ-ಸಂಘದ ಏಳಿಗಿಗಾಗಿ ದುಡಿದ ಮಹನೀಯರ ಮಾಹಿತಿ,ಸಂಸ್ಥಾಪನಾ ಸಮಾಜ ಬಂಧುಗಳ ಕಿರು ಪರಿಚಯ,ವಿದ್ಯಾರ್ಥಿನಿಲಯದ ಸ್ಥಾಪಕ ವಿದ್ಯಾರ್ಥಿಗಳ ಅನಿಸಿಕೆಗಳು, ಹಿರಿಯ ಸಮಾಜ ಬಂಧುಗಳ ವಿವರಗಳು, ಆಯ್ದ ಸೃಜನಶೀಲ ಬರಹಗಳು, ಸಂಘದ ಅಭಿವೃದ್ದಿ ಚಟುವಟಿಕೆಗಳ ಚಿತ್ರಣ, ಸಮಾಜದ ಉನ್ನತ ವಿದ್ಯಾವಂತರು, ಉತ್ತಮ ವಾಣಿಜ್ಯೋದ್ಯಮಿಗಳು,ಕೈಗಾರಿಕೋದ್ಯಮಿಗಳು, ಸಮಾಜದ ಅನಿವಾಸಿ ಭಾರತೀಯರು, ಸರ್ಕಾರೀ ನೌಕರರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು, ಖಾಸಗೀ ಕ್ಷೇತ್ರಗಳಲ್ಲಿನ ಉನ್ನತ ಅಧಿಕಾರಿಗಳು, ಮಹಾದಾನಿಗಳ ಮಾಹಿತಿಯನ್ನೋತ್ತ ಸ್ಮರಣ ಸಂಚಿಕೆಯನ್ನು ಹೊರತರಲು ನಿಮ್ಮಗಳ ಸಹಾಯ ಸಹಕಾರದ ಅಗತ್ಯತೆ ಇದೆ..

ತಾವುಗಳು ಅರ್ಹ ಸಮಾಜ ಬಂಧುಗಳ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ಸಂಘಕ್ಕೆ ತಲುಪಿಸುವ ನಿಟ್ಟಿನಲ್ಲಿ

ಇಲ್ಲಿ ಪ್ರಕಟಿಸಲಾಗಿರುವ ಅರ್ಜಿ ನಮೂನೆಯನ್ನು ಮುದ್ರಿಸಿ ವಿವರಗಳನ್ನು ಭರ್ತಿ ಮಾಡಿ ಕೇಂದ್ರ ಸಂಘದ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸುವುದು

https://drive.google.com/file/d/1Z_urYOV5IY-jQYTQVUr0jGeGeX-vp5yU/view?usp=sharing

ಅಥವಾ

ಇಲ್ಲಿ ಲಭ್ಯವಿರುವ ಗೂಗಲ್ ಪಾರಂನಲ್ಲಿ ವಿವರಗಳನ್ನು ನೇರವಾಗಿ ಭರ್ತಿ ಮಾಡಿ ಸಲ್ಲಿಸಬಹುದು.

ಇಲ್ಲಿ ಕ್ಲಿಕ್ಕಿಸಿ......

https://docs.google.com/forms/d/1S3h12Wb6w9wUP_im6sriPIB6lIuIrGhAyZ6AghyRuBA/edit?usp=sharing

ಅಥವಾ

ನಿಮ್ಮ ತಾಲ್ಲೂಕು ಸಮಾಜದ ಸಂಘದ ಕಛೇರಿಗಳಲ್ಲಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಲ್ಲಿನ ನಿರ್ದೇಶಕರಿಗೆ ಸಲ್ಲಿಸಬಹುದು.