ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ೧೯೪೩ ರಲ್ಲಿ "ದಾನ ರತ್ನಾಕರ" ಪೂಜ್ಯ ಶ್ರೀ ದಿ|| ಮಂಡಿ ಹರಿಯಣ್ಣ, ಆಗಿನ ಮೈಸೂರು ಪ್ರಜಾಪ್ರತಿನಿಧಿ ಸಭೆ ಯ ನಿರ್ದೇಶಕರು ಸಂಸ್ಥಾಪಿಸಿದರು. ದಿ|| ಮಂಡಿ ಹರಿಯಣ್ಣನವರು ೧೯೧೬ ರಲ್ಲೇ ಬೆಂಗಳೂರಿನಲ್ಲಿ ಉಚಿತವಾಗಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದ್ದರು. ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸಂಘವು ಯಶಸ್ವಿಯಾಗಿ ೭೩ ವರ್ಷಗಳನ್ನು ಪೂರೈಸಿದೆ..
ಸಂಘದ ಹಿನ್ನೆಲೆ :
ನಮ್ಮ ಸಂಘವು ಪ್ರಾರಂಭವಾಗಿದ್ದು ಹೀಗೆ “ಸಾದುಮತದ ಸಾದರ ವಿದ್ಯಾ ಸಂಘ” ಎಂಬ ಹೆಸರಿನಿಂದ. ೧೯೩೩ ರಲ್ಲಿ ತನ್ನ ೧೭ ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಮಯದಲ್ಲಿ ಒರಡಿಸಿದ ಆಮಂತ್ರಣ ಪತ್ರಿಕೆಯಿಂದ ಇದು ವ್ಯಕ್ತವಾಗುತ್ತದೆ, ಅಂದರೆ ೧೯೧೬-೧೭ ರ ಸುಮಾರಿಗೆ ಈ ಸಂಘವು ಪ್ರಾರಂಭವಾಯಿತೆಂದು ತಿಳಿಯಬಹುದು. ೧೯೧೭ ರಲ್ಲಿ ದಿ. ಪೂಜ್ಯ ಮಂಡಿಹರಿಯಣ್ಣ ನವರು ಪ್ರಾರಂಭಿಸಿದ ಉಚಿತ ವಿದ್ಯಾರ್ಥಿ ನಿಲಯದ ಕಾಲದಿಂದಲೇ ನಮ್ಮ ವಿದ್ಯಾಭಿವೃದ್ಧಿ ಸಂಘವು ಪ್ರಾರಂಭವಾಯಿತೆನ್ನಬಹುದು. ಆದೆರೆ ಅಂದಿನಿಂದ ೧೯೪೩ ರಲ್ಲಿ ಸಂಘವು ರಿಜಿಸ್ಟರಿ ಆಗುವವರೆಗೂ ಮತ್ತು ಅಲ್ಲಿಂದೀಚೆಗೂ ಸುಮಾರು ವರ್ಷಗಳ ಕಆಲ ಈ ಸಂಘವು ಸಾದಿಸಿದ ಪ್ರಗತಿ ಅಷ್ಟೇನು ಆಶಾದಾಯಕವಲ್ಲ, ಕಾರಣ ಬಹುಶಃ ಪೂಜ್ಯ ಮಂಡಿಹರಿಯಣ್ಣ ನವು ಮುಂದಾಳತ್ವ ವಹಿಸಿ ನಮ್ಮ ಜನರ ಮಕ್ಕಳ ವಿದ್ಯಾಭಿವೃದ್ಧಿಗೆ ಶ್ರಮಿಸಿದ್ದರಿಂದ ನಮ್ಮ ಮತಬಾಂಧವರು ಆಲಸ್ಯ ಮನೋಭಾವ ತಾಳಿದರೆಂದು ಕಾಣುತ್ತದೆ. ಆದರೂ ನಮ್ಮ ಮತಭಾಂಧವರ ಸಂಘಟನೆ ಮತ್ತು ನಮ್ಮ ಜನರ ಮಕ್ಕಳ ವಿದ್ಯಾರ್ಜನೆಗೆ ಪ್ರೋತ್ಸಾಹ ಕೊಡುವ ಕೆಲಸ ಕುಂಟುತ್ತಾ ಎಡವುತ್ತಾ ನಡದೇ ಇತ್ತು. ಈ ದಿಸೆಯಲ್ಲಿ ನಮ್ಮ ಮತಭಾಂದವರು ಮೊದಲ ಮಹಾಸಭೆ ೧೯೩೦ ರಲ್ಲಿ ಕುಚ್ಚಂಗಿಯಲ್ಲಿ ನಡೆಯಿತು. ನಂತರ ೧೯೩೧ ರಲ್ಲಿ ನಂತರ ೧೯೩೧ ರಲ್ಲಿ ಬೆಂಗಲೂರಿನಲ್ಲಿ ಮತ್ತು ಕೋಡ್ಲಾಪುರದಲ್ಲಿ ಸಭೆಗಳೂ ನಡೆದು, ನಮ್ಮ ಮತಬಾಂದವರು ಮಹಾಸಭೆಯನ್ನು ಮಧುಗಿರಿಯಲ್ಲಿ ನಡೆಯಲು ತೀರ್ಮಾನಿಸಿರುತ್ತಾರೆ. ಮಧುಗಿರಿಯಲಲಿ ನಮ್ಮ ಮತಬಾಂದವರ ಸಭೆಯ ೯-೦೭-೧೯೩೪ ರಲ್ಲಿ ಮೂರು ದಿನಗಳ ಕಾಲ ನಡೆದು ಗುರುತರವಾದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಈ ನಿರ್ಣಯಗಳಲ್ಲಿ ಮಹತ್ವದ್ದೆಂದರೆ ನಮ್ಮ ಸಂಘವನ್ನು ರಿಜಿಸ್ಟರಿ ಮಾಡಿಸುವುದು. ಈ ಮಹಾಸಭೆಯ ಅಧ್ಯಕ್ಷತೆಯನ್ನು ಪೂಜ್ಯ ಮಂಡಿ ಹರಿಯಣ್ಣ ನವರೇ ವಹಿಸಿದ್ದರು. ಸಭೇಯನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ೧೯೧೭ ರಿಂದ ನಡೆಸಿಕೊಂಡು ಬಂದ ವಿದ್ಯಾರ್ಥಿ ನಿಲಯದ ವಿಷಯವನ್ನು ಪ್ರಸ್ತಾಪಿಸುತ್ತಾ ಅಷ್ಟು ವರ್ಷಗಳ ಕಾಲ ತಾವು ತಮ್ಮ ಸ್ವಂತ ಖರ್ಚಿನಿಂದ ವಿದ್ಯಾರ್ಥಿನಿಲಯ ನಡೆಸಿಕೊಂಡು ಬಂದರೂ, ಇನುಮುಂದೆ ಮತಬಾಂಧವರೇ ವಿದ್ಯಾರ್ಥಿ ನಿಲಯದ ಜವಾಬ್ದಾರಿಯನ್ನು ವಿಹಿಸಿಕೊಳ್ಳಬೇಕೆಂದು ಕಳಕಳಿಯಿಂದ ತಿಳಿಸುತ್ತಾರೆ. ಆದರೂ ನಮ್ಮ ಜನರು ಎತ್ತೆಚ್ಚುಕೊಳ್ಳಲಿಲ್ಲ. ಹೀಗಾಗಿ ೧೯೫೭ ರಲ್ಲಿ ಉಚಿತ ವಿದ್ಯಾರ್ಥಿ ನಿಲಯ ನಿಂತುಹೋಗಿ ನಮ್ಮಜನರಿಗೆ ಏನೂ ತೋಚದಾಯಿತು. ಹಾಗೂ ಹೀಗೂ ೧೯೫೭ ರಿಂದ ೧೯೫೯ ರವರೆಗೂ ನಮ್ಮ ಸಂಘದವರೇ, ಪೂಜ್ಯ ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲೇ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಿಂದಲೇ ಊಟದ ವ್ಯವಸ್ಥೆ ಮಾಡಿಕೊಳ್ಳುವಂತೆ ಏರ್ಪಡಿಸಿದರಾದರೂ ಕೊನೆಗೆ ೧೯೫೯ ರಲ್ಲಿ ಪೂಜ್ಯ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿ ಜೀವನ ಕ್ಷೇತ್ರದಲ್ಲಿ ಉನ್ನತ ಪದವಿಗೇರಿದ ಪ್ರಮುಖರು ಏನಾದರೂ ಮಾಡಿ ಸಂಘದ ಇರುವಿಕೆಯನ್ನು ಊರ್ಜಿತಗೊಳಿಸಲು ಪಣತೊಟ್ಟು, ಸಂಘದ ಕಟ್ಟಡ ಮತ್ತು ವಿದ್ಯಾರ್ಥಿನಿಲಯದ ಕಟ್ಟಡವನ್ನು ಕಟ್ಟಲು ಜಾಗವನ್ನು ಪಡೆಯಲು ಪ್ರಯತ್ನಿಸಿ, ಬೆಂಗಳೂರಿನ ರೇಸ್‌ಕೊರ್ಸ್ ಪಕ್ಕದಲ್ಲಿ ೧೯೫೭ ರಲ್ಲಿ ಒಂದು ನಿವೇಶನವನ್ನು ಕೊಂಡರು. ಈ ನಿವೇಶನ ಕೊಳ್ಳಲು ಸಹ ಸಮಘದಲ್ಲಿ ಸಾಕಷ್ಟು ಹಣವಿರಲಿಲ್ಲ. ಇದ್ದ ಸ್ವಲ್ಪ ಹಣ, ಸಾಲವಾಗಿ ಪಡೆದ ಸ್ವಲ್ಪ ಹಣ ಮತ್ತು ನಮ್ಮ ಹಿರಿಯರು ಊರೂರು ತಿರುಗಿ ಮತಭಾಂದವರಿಂದ ವಂತಿಗೆಯಾಗಿ ಪಡೆದ ಹಣದಿಂದ ನಿವೇಶನವನ್ನು ಕೊಂಡಾಯಿತು. ಆದರೆ ಈ ಜಾಗದಲ್ಲಿ ವಿದ್ಯಾರ್ಥಿ ನಿಲಯ ಮಾಡುವುದು ಸರಿಯಿಲ್ಲವೆಂದು ಮನಗಂಡು ಈಗ ಹಾಲಿ ನಮ್ಮ ಸಂಘದ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಇರುವ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ೧೯೭೨ ರಲ್ಲಿ ಪಡೆಯಲಾಯಿತು. ಈ ನಿವೇಶನವನ್ನು ಪಡೆಯುವಲ್ಲಿ ಶ್ರಮಿಸಿದ ದಿ.ಎಂ.ಎಸ್ ಮಲ್ಲಯ್ಯನವರು, ದಿ.ಬಿ.ಕೆ. ಶಿವಲಿಂಗಪ್ಪನವರು ಮತ್ತು ಆಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಮಾನ್ ಎಂ.ಹೆಚ್ ರಾಜು ಅವರ ಪಾತ್ರ ಸ್ಮರಣೀಯ. ಬೆಂಗಳೂರು ನಗರ ಪ್ರಾಧಿಕಾರ ತನ್ನ ಪತ್ರ ದಿನಾಂಕ ೧೬-೭-೧೯೭೨ ರಲ್ಲಿ ವಿದ್ಯಾರ್ಥಿ ನಿಲಯಕ್ಕೆ ಸುಮಾರು ೫೪೭೨೨ ರ ಗಜ ವಿಸ್ತೀರ್ಣ ಈಗಿನ ನಿವೇಶನವನ್ನು ೩೦ ವರ್ಷ ಗುತ್ತಿಗೆಯ ಪ್ರಕಾರ ಮಂಜೂರು ಮಾಡಿತು. ಗುತ್ತಿಗೆ ನಿಯಮದ ಪ್ರಕಾರ ಸಮಘ ಪ್ರತಿ ವರ್ಷದ ಗುತ್ತಿಗೆಯ ಹಣ ೧೮೨೪ ರೂಪಾಯಿಗಳನ್ನು ೧೯೭೨ ನೇ ವರ್ಷದಿಂದ ಪಾವತಿ ಮಾಡುತ್ತಾ ಬಂದಿದೆ. ದಿನಾಂಕ ೦೨-೧೧-೧೯೭೨ ರಿಂದ ನಿವೇಶನ ಸುಪರ್ದು ಪಡೆದಿದೆಯಾದರೂ, ಗುತ್ತಿಗೆ ಹಣ ಪೂರ್ತ ಪಾವತಿ ಮಾಡಿ ನಂತರ ೨೦೦೨ ರ ವರ್ಷದ ನಂತರ ಸಂಘ ಹಕ್ಕು ಪತ್ರ ಪಡೆದು ನೋಂದಣೆ ಮಾಡಿಕೊಳ್ಳಬೇಕಾಗಿದೆ. ಸಂಘ ೧೯೭೬ ರ ಲ್ಲಿ ಕಟ್ಟಡ ಕಟ್ಟಲು ಪ್ರಾರಂಭಿಸಿತು. ೩೧-೧೨-೧೯೮೯ ರ ಆಖೈರಿಗೆ ಕಟ್ಟಡಗಲ ಮೂಲ ಬೆಲೆ ೮,೩೧,೫೯೩ ರೂ. ಆಗಿದೆ. ೧೯೪೩ ರಲ್ಲಿ ನಮ್ಮ ಸಂಘ ರಿಜಿಸ್ಟರು ಆದ ಮೇಲೂ ಸಂಘವು ತಮ್ಮ ಚಟುವಟಿಕೆಗಳನ್ನು ಚುರುಕಿನಿಂದ ಮುಂದುವರಿಸಲಿಲ್ಲ. ಬೆಂಗಳೂರಿನ ನಮ್ಮ ಸಂಘವು ಹೊಸ ನಿವೇಶನವನ್ನು ಕೊಂಡು ನಮ್ಮದೇ ಆದ ಸಂಘದ ಕಛೇರಿಯನ್ನು ಮತ್ತು ವಿದ್ಯಾರ್ಥಿ ನಿಲಯವನ್ನು ತೆರೆಯಬೇಕೆಂದು ಉದ್ದೇಶಿಸಿದ ಸಮಯದಲ್ಲಿ, ತುಮಕೂರು ಮತ್ತು ಗೌರಿಬಿದನೂರಿನಲ್ಲಿಯೂ ವಿದ್ಯಾರ್ಥಿನಿಲಯಗಳನ್ನು ತೆರೆಯಬೇಕೆಂದು ನಿರ್ಧರಿಸಿ ಗೌರಿಬಿದನೂರುನಲ್ಲಿ ೦೯-೧೧-೧೯೬೬ ರಲ್ಲಿಯೂ ಮತ್ತು ತುಮಕೂರಿನಲ್ಲಿ ೧೯೭೦ ರಲ್ಲಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಲಾಯಿತು. ಬೆಂಗಳೂರು ರೇಸ್ ಕೋರ್ಸ್ ಹತ್ತಿರದಲ್ಲಿದ್ದ ನಿವೇಶನವನ್ನು ೧.೨೨ ಲಕ್ಷಕ್ಕೆ ಮಾರಿ ಆ ಹಣದಿಂದ ತುಮಕೂರು ಹಾಸ್ಟೇಲಿನ ಕಟ್ಟಡವನ್ನು ೫೦೦೦೦/- ರೂಪಾಯಿಗಳಿಗೆ ೧೯೭೧ ರಲ್ಲಿ ಕೊಂಡುಕೊಳ್ಳಲಾಯಿತು. ಡಿಸೆಂಬರ್ ೧೯೮೯ ಕ್ಕೆ ಇದರ ಮೂಲ ಬೆಲೆ ೩,೦೫,೬೧೦/- ರೂ. ಆಗಿದೆ. ಗೌರಿಬಿದನೂರಿನಲ್ಲಿ ೧೯೭೦-೭೧ ನೇ ಸಾಲಿನಿಂದ ಬಾಡಿಗೆ ಮನೆಯಲ್ಲಿ ಹಾಸ್ಟೇಲ್ ನಡೆಸಿಕೊಂಡು ಬರುತ್ತಿದ್ದು ಮುನಿಸಿಪಾಲಿಟಿಯಿಂದ ೨೦,೮೬೦ /- ರೂ.ಗಳಿಗೆ ಒಂದು ನಿವೇಶನವನ್ನು ಕೊಂಡುಕೊಳ್ಳಾಲಾಯಿತು. ೧೯೮೪ ರಲ್ಲಿ ಈ ನಿವೇಶನವನ್ನು ೨೬-೮೦೪ ರೂ.ಗಳಿಗೆ ಮಾರಿ ಈಗ ಹಾಲಿ ಹಾಸ್ಟೆಲ್ ಇರುವ ಕಟ್ಟಡವನ್ನು ಶ್ರೀ ಆಂಜನೇಯ ಗೌಡರಿಂದ ೨೨.೦೦೦ ರೂಪಾಯಿಗಳಿಗೆ ಕೊಳ್ಳಲಾಯಿತು. ಈ ಹಣವನ್ನು ಆಂಜನೇಯ ಗೌಡರು ಪುನಃ ಹಿಂದಕ್ಕೆ ಕೊಟ್ಟು ನಿವೇಶನವನ್ನು ದಾನವಾಗಿ ಕೊಟ್ಟಿದ್ದಾರೆ. ಈ ನಿವೇಶನದಲ್ಲಿರುವ ಕಟ್ಟಡದ ಬೆಲೆ ಡಿಸೆಂಬರ್ ೧೯೮೬ ಕ್ಕೆ ೪.೦೦,೦೦೦ ರೂಪಾಯಿ ಆಗಿದೆ. ಗೌರಿಬಿದನೂರಿನಲ್ಲಿ ೧೯೮೬ ರವರೆವಿಗೂ ವಿದ್ಯಾರ್ಥಿನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದರೂ, ಈಗ ನಮ್ಮದೇ ವಿದ್ಯಾರ್ಥಿ ನಿಲಯದ ಕಟ್ಟಡ ಇದ್ದರೂ ಸಾಕಷ್ಟು ವಿದ್ಯಾರ್ಥಿಗಳು ಬಾರದೇ ಇರುವುದರಿಂದ ವಿದ್ಯಾರ್ಥಿನಿಲಯ ಸರಿಯಾಗಿ ನಡೆಯುತ್ತಿಲ್ಲ. ತುಮಕೂರಿನಲ್ಲಿ ಆಗ ಸದ್ಯಕ್ಕೆ ೪೦-೪೫ ವಿದ್ಯಾರ್ಥಿಗಳು ವಾಸಂಗ ಮಾಡುತ್ತಿದ್ದರು. ಈಗ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ೭೫-೮೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಧುಗಿರಿಯಲ್ಲಿ ದಿ||.ಪಿ.ಕೆ ನಂಜುಂಡಯ್ಯನವರು ದಾನಮಾಡಿದ ಕಟ್ಟಡದ ದಿ:-೦೧-೦೭-೪೮ ರಲ್ಲಿ ದಿ.ಎಂ.ಜೆ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು. ನಂಜುಂಡಯ್ಯನವರ ಪುತ್ರರಾದ ದಿ. ಶ್ರೀ ಎಂ.ಎನ್ ಬಸಪ್ಪ ಹಾಗೂ ಕಪ್ಪಣ್ಣನವರು ೨೦-೦೧-೭೩ ರಲ್ಲಿ ಸಂಘದ ಹೆಸರಿಗೆ ದಾನ ಪತ್ರ ಬರೆದು ನೊಂದಣಿಯಾಗಿದೆ. ಕಟ್ಟಡದ ಮೂಲ ಬೆಲೆ ೧೩,೫೯೮ ರೂ. ಆಗಿದೆ. ಸುಮಾರು ೩೮ ವರ್ಷಗಳ ಕಾಲ ಈ ವಿದ್ಯಾರ್ಥಿ ನಿಲಯವನ್ನು ಸ್ಥಳೀಯ ಮುಖಂಡರು ಬಹಳ ಶ್ರದ್ದೆವಹಿಸಿ ನಡೆಸಿಕೊಂಡು ಬಂದರು. ಆದರೆ ಕಾರಣಾಂತರದಿಂದ ಹಾಸ್ಟೆಲ್ ನಡೆಸುವ ಕಾರ್ಯ ನಿಂತುಹೋಯಿತು. ಮತ್ತೆ ೧೯೯೧ ರಲ್ಲಿ ಪ್ರಾರಂಭ ಮಾಡಿ ಎರಡು ವರ್ಷಗಳ ಕಾಲ ನಡೆದು ಮತ್ತೆ ನಿಂತು ಹೋಯಿತು. ಇದಕ್ಕೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದಲ್ಲಿರಲು ಬಾರದೇ ಇರುವುದು, ಸಂಘದವರು ವಿದ್ಯಾರ್ಥಿನಿಲಯಗಳಲ್ಲಿ ಉಚಿತ ಊಟದ ವ್ಯವಸ್ಥೆ, ಇಲ್ಲವೆ ಕಡಿಮೆ ಖರ್ಚಿನಲ್ಲಿ ಸಬ್ಸಿಡಿ ಊಟದ ವ್ಯವಸ್ಥೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಹೆಚ್ಚನ ಸಂಖ್ಯೆಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಾರೆಂಬುದನ್ನು ನಾವು ಗಮನಿಸಬೇಕು. ಈಗ ಸದ್ಯಕ್ಕೆ ತುಮಕೂರು ಮತ್ತು ಬೆಂಗಳೂರಿನಲ್ಲಿ ತಾವೇ ಊಟದ ಖರ್ಚುನ್ನು ಭರಿಸಿ ವ್ಯಾಸಂಗ ಮಾಡುತ್ತಿದ್ದಾರಾದರೂ, ಅಲ್ಲಿಯೂ ಸಹ ಊಚಿತ ವ್ಯವಸ್ಥೆ ಅಥವಾ ಕಡಿಮೆ ಖರ್ಚಿನಲ್ಲಿ ಊಟದ ವ್ಯವಸ್ಥೆ ಮಾಡಿದರೆ ಇನ್ನೂ ಹೆಚ್ಚನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಾರೆಂಬುದನ್ನು ನಾವು ಮನಗಾಣಬೇಕು. ಈ ದೆಸೆಯಲ್ಲಿ ನಮ್ಮ ಮತಬಾಂಧವರು ಹೆಚ್ಚನ ಆಸಕ್ತಿ ವಹಿಸಿದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ರೀತಿಯಲ್ಲಿ ಅನುವು ಮಾಡಿಕೊಟ್ಟಂತಾಗುತ್ತದೆ.
ನಮ್ಮ ಹಿರಿಯರಲ್ಲಿ ಅನೇಕರು ಸಂಘವು ಇಷ್ಟರ ಮಟ್ಟಿಗಾದರೂ ಪ್ರಗತಿ ಸಾಧಿಸಲು ನೆರವಾಗಿದ್ದರೆಂದು ಅವರನ್ನು ಸ್ಮರಿಸುವುದು ಕೂಡ ನಮ್ಮ ಕರ್ತವ್ಯವಲ್ಲವೇ? ಈ ಸಂಚಿಕೆಯಲ್ಲಿ ಹಿರಿಯರಲ್ಲ ನೇಕರ ಜೀವನ ಚರಿತ್ರೆಯನ್ನು, ಅವರು ಸಾಧಿಸಿದ ಕಾರ್ಯಗಳನ್ನು ಬಹಳ ಸಂಕ್ಷಿಪ್ತವಾಗಿ ಕೊಡಲಾಗಿದೆ. ಎಲ್ಲರ ಬಗ್ಗೆಯೂ ಸಕಾಲದಲ್ಲಿ ಮಾಹಿತಿ ದೊರೆಯದ್ದರಿಂದ ಕೆಲವರ ಹೆಸರು ಬಿಟ್ಟು ಹೋಗಿರಬಹುದು. ಇದರಿಂದ ಯಾವ ತಪ್ಪು ಕಲ್ಪನೆಯೂ ಬರಬಾರದು. ಪ್ರತ್ಯಕ್ಷವಾಗಿ ಸಂಘದ ಏಳಿಗೆಗೆ ದುಡಿದವರೆಲ್ಲವರನ್ನು ಸಂಘವು ಇಲ್ಲಿ ಸ್ಮರಿಸುತ್ತದೆ. ಸಾಕಷ್ಟು ವಿವರಗಳು ದೊರೆಯದೆ ಇದ್ದು ಕೆಲವು ಹಿರಿಯರನ್ನು ಸಹ ಇಲ್ಲಿ ಹೆಸರಿಸಲಾಗಿದೆ. ದಿವಂಗತರಾದ ಸಾತನೂರು ಚನ್ನೇಗೌಡರು , ಲಿಂಗಣ್ಣನವರು ಬೆಂಗಳೂರು, ವೆಂಕಟಸ್ವಾಮಿಯವರು ಗೌರಿಬಿದನೂರು, ಓಬಳಪ್ಪನವರು ಚಂದನದೂರು. ಎನ್ ಸಿ ವೆಂಕಟರಮಣಪ್ಪನವರು ನಂದಿಗಾನಹಳ್ಳಿ, ಪುಟ್ಟಪುರ‍್ಲಳ್ಳಿ ತಿಮ್ಮೇಗೌಡರು, ಹೆಚ್ ಎಲ್ ಚಿಕ್ಕಣ್ಣನವರು ಬೆಂಗಳೂರು, ಟಿ.ಚನ್ನಪ್ಪನವರು ಉಡುಕುಂಟೆ, ಲಿಂಗದೇವರು ತಿಪ್ಪಸಂದ್ರ, ಬಿ.ಸುಬ್ಬಯ್ಯನವರು ಬಿಸ್ಕೂರು ಪಾಳ್ಯ, ದೊಡ್ಡಹೊನ್ನಪ್ಪನವರು ಮುತ್ಸಾಗರ, ದೊಡ್ಡವೀರಯ್ಯನವರು ನೆಲಮಂಗಲ, ಲಕ್ಷ್ಮೀಪಯ್ಯ ಪುಟ್ಟನಂಜಮ್ಮನವರು ಬೆಂಗಳೂರು, ಜಿ ರಾಮಚಂದ್ರ ಬೆಂಗಳೂರು, ಎ.ಆರ್ ರಾಮಯ್ಯನವರು ಅತ್ತಿಬೆಲೆ, ಕೆಂಪೇಗೌಡರು ಮೈಲಾಗಾನಹಳ್ಳಿ, ವೆಂಕಟಾಶಾಮಿಗೌಡರು ಕಾಟನ್ ಕಲ್ಲು, ಲಕ್ಷ್ಮೀಪತಿಯವರು, ಕೆ.ವಿ ನರಸಪ್ಪನವರು ಕೋಡ್ಲಾಪುರ, ಹಾಲಿ ನಮ್ಮೊಡನಿರುವ ಕೆಲವು ಮಹನೀಯರನ್ನು ಸಹ ಇಲ್ಲಿ ಹೆಸರಿಸಲಾಗಿದೆ. ಸಿ,ಆರ್ ಪಾಪಣ್ಣನವರು ದೊಡ್ಡಹೊಸಹಳ್ಳಿ, ರಾಮಲಿಂಗರೆಡ್ಡಿಯವರು ಚಂದನದೂರು. ಈ.ನಾಗಪ್ಪನವರು ಗುಮ್ಮನಹಳ್ಳಿ, ಸಿ.ಮುದ್ದಪ್ಪನವರು ಮಾಗೋಡು, ಚನ್ನೇಗೌಡರು ದೊಡ್ಡಗ್ರಹಾರ, ಕೆ.ಜಿ ವೀರಣ್ಣನವರು ಬೆಂಗಳೂರು, ಪಂಡಿತ್ ಹನುಮಂತರಾಯಪ್ಪನವರು ಬೆಂಗಳೂರು, ಡಾ. ನಂಜಪ್ಪನವರು ಬೆಂಗಳೂರು, ಡಾ. ಗೋವಿಂದಪ್ಪನವರು ಬೆಂಗಳೂರು. ಡಾ. ನಂಜಪ್ಪನವರು ಬೆಂಗಳೂರು, ಜಿ.ಗಂಗಣ್ಣನವರು ಬೆಂಗಳೂರು, ಡಿ.ಮರಿಯಪ್ಪನವರು ಬೆಂಗಳೂರು, ಡಾ. ಮಹದೇವಪ್ಪನವರು ಬೆಂಗಳೂರು, ಡಾ. ಮುದ್ದಪ್ಪನವರು ತುಮಕೂರು, ಹೆಚ್ ಗಂಗಣ್ಣನವರು ತುಮಕೂರು, ಸಂಜೀವರಾಯಪ್ಪ ಇಂಜಿನೀಯರ್ ಬೆಂಗಳೂರು, ರಾಮಕೃಷ್ಣಯ್ಯನವರು ಇಂಜಿನೀಯರ್ ಚಿಕ್ಕಬಳ್ಳಾಪುರ, ಎಸ್.ಗೋವಿಂದಪ್ಪ ಸೂಪರ‍್ಡೆಂಟ್ ಇಂಜಿನೀಯರ್, ರಾಮಚಂದ್ರ ಇಂಜಿನೀಯರ್, ನಂಜಪ್ಪ ನವರು ಬಾಲೇನಹಳ್ಳಿ. ಈಗ ಹಾಲಿ ಸಂಘದ ವತಿಯಿಂದ ನಡೆಸುತ್ತಿರುವ ಹಾಸ್ಟೆಲ್ ಖರ್ಚು ಮತ್ತು ಕಟ್ಟಡಗಳನ್ನು ನಿರ್ಮಿಸುವ ವ್ಯವಸ್ಥೆಗೆ ಮತಬಾಂಧವರಿಂದ ಬಂದ ಹಣ ಮತ್ತು ಮದುವೆ ಸಮಾರಂಭಗಳಿಂದ ಬಂದ ಹಣವನ್ನು ಉಪಯೋಗಿಸಿ ಕೆಲಸ ನಿರ್ವಹಿಸುತ್ತಿದ್ದೇವೆ.
ಇತ್ತೀಚಿನ ವರ್ಷಗಳಲ್ಲಿ ಸಂಘದ ಕೆಲಸ ಕಾರ್ಯಗಳು ಚುರುಕಿನಿಂದ ನಡೆಯುತ್ತಿವೆ. ತುಮಕೂರು ಮತ್ತು ಬೆಂಗಳೂರಿನಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲದೆ ಗೌರಿಬಿದನೂರಿನಲ್ಲಿ ಒಂದು ಫ್ರೌಢಶಾಲೆಯನ್ನು ಸಹ ನಡೆಸುತ್ತಿದ್ದೇವೆ, ಇದಕ್ಕೂ ಮತಬಾಂಧವರ ಉತ್ತೇಜನ ಸಹಾಯಬೇಕು. ಈಗ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಕೊಡಲು ಹತ್ತು ಕೊಠಡಿಗಳು ಮಾತ್ರ ಇವೆ. ಇಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಇನ್ನೂ ಹೆಚ್ಚಾಗಿ ಕೊಠಡಿಗಳನ್ನು ಕಟ್ಟಿ ಸ್ಥಳಾವಕಾಶ ಬೇಕು. ಈ ಸಂದರ್ಭದಲ್ಲಿ ಒಂದು ಸಂತೋಷದ ಸುದ್ದಿ ಇಲ್ಲಿ ತಿಳಿಸಬೇಕಾಗಿದೆ. ಒಳಕಲ್ಲು ಗ್ರಾಮದ ಡಿ.ರಾಮಯ್ಯನವರು ೧೦-೧೨ ಲಕ್ಷ ಖರ್ಚು ಮಾಡಿ ತುಮಕೂರಿನಲ್ಲಿರುವ ವಿದ್ಯಾರ್ಥಿ ನಿಲಯದ ಮೇಲೆ ಕೊಠಡಿಗಳನ್ನು ನಿರ್ಮಿಸಲು ಮುಂದೆ ಬಂದಿದ್ದಾರೆ. ಸಂಘವು ಅವರನ್ನು ಅಭಿನಂದಿಸುತ್ತದೆ. ನಮ್ಮ ಮತಬಾಂಧವರ ಸರ್ವತೋಮುಖ ಏಳೀಗೆಯಾಗಬೇಕಾದರೆ ಜೀವನದ ನಾನಾ ಕ್ಷೇತ್ರದಲ್ಲಿ ಪ್ರತಿಯಯೊಬ್ಬ ವ್ಯಕ್ತಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತರಭೇತಿ ಕೊಟ್ಟು ಜೀವನ ಸಾರ್ಥಕ್ಯವನ್ನು ಪಡೆಯಲು ನೆರವಾಗುವ ವ್ಯವಸ್ಥೆಯನ್ನು ಮಾಡಬೇಕು, ನಮಮ್ಮ ಯುವಕ ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗೆ ಕೊಡಲು ತರಬೇತಿ ವ್ಯವಸ್ಥೆಯಾಗಬೇಕು. ಸ್ಕೂಲು ಕಾಲೇಜುಗಳನ್ನು ನಡೆಸಲು ಕಾರ್ಯಕ್ರಮ ಹಾಕಿಕೊಳ್ಳಬೇಕು. ಗ್ರಾಮಾಂತರ ಪ್‌ರದೇಶದಲ್ಲಿರುವ ಮತ ಬಾಂಧವರು ಅನೇಕರಿಗೆ ವ್ಯವಸಾಯವೇ ಮುಖ್ಯ ಕಸುಬು. ಅಂತಹ ಅನುಕೂಲ ಸ್ಥಿತಿಯಲ್ಲರದ ಇವರ ಏಳಿಗೆಗೂ ಕಾರ್ಯಕ್ರಮ ರೂಪಿಸಿಕೊಳ್ಳಬೇಕು. ನಮ್ಮ ಮತ ಬಾಂಧವರಲ್ಲಿ ಕೇವಲ ಕೆಲವರು ಮಾತ್ರ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನರು ಈ ದಿಶೆಯಲ್ಲಿ ಕಾರ್ಯಶೀಲರಾಗುವಂತೆ ಉತ್ತೇಜನ ಕೊಡಬೇಕು, ಈ ಎಲ್ಲಾ ಕಾರ್ಯಕ್ರಮಗಳನ್ನು ಒಮ್ಮೇಲೆ ಮಾಡಲು ಸಾಧ್ಯವಾಗಿದ್ದರೂ ಹಂತ ಹಂತವಾಗಿಯಾಗಿ ಕಾರ್ಯಗತಗೊಳಿಸಬೇಕು. ಅಂಘದಲ್ಲಿ ೧೯೭೧ ರ ಆಖ್ಯರಿಗೆ ೯ ಜನ ದಾನಿಗಳು ೨೨ ಜನ ಆಜೀವ ಸದಸ್ಯರುಗಳು ಹಾಗೂ ೨೬ ಜನಸಾಮಾನ್ಯ ಸದಸ್ಯರಿದ್ದರು. ಈಗ ೧೯೯೩ ರ ಆಖೈರಿಗೆ ದಾನಿಗಳು ಮತ್ತು ಆಜೀವ ಸದಸ್ಯರು ಸೇರಿ ಒಟ್ಟು ೧೭೭೦ ಜನರಿದ್ದಾರೆ. ತಾಲ್ಲೂಕುವಾರು ಆಜೀವ ಸದಸ್ಯರ ಪಟ್ಟಿಯನ್ನು ತಯಾರಿಸಲಾಗಿದೆ. ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ವರ್ಷದಿಂದ ಮತಬಾಂಧವರಿಂದ ಪುದುವಟ್ಟು ಹಣ ಸ್ವೀಕರಿಸಿ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ (ಸ್ಕಾಲರ್ ಶಿಪ್) ಕೊಡುವ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಇನ್ನೂ ಹಿಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬಂದು ಉನ್ನತ ವ್ಯಾಸಂಗ ಮಾಡಬಯಸುವ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಸಾಲದ ಸೌಲಭ್ಯ ಒದಗಿಸಲು ನೆರವಾಗುವರೆಂದು ಆಶಿಸಲಾಗಿದೆ. ಪ್ರತಿ ವರ್ಷವೂ ಸಂಘಕ್ಕೆ ಬರುವ ಹಣದಲ್ಲಿ ಸ್ವಲ್ಪ ಭಾಗವನನು ಕಾದಿರಿಸಿ (ಅoಡಿಠಿus ಜಿuಟಿಜ) ಅದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಉಚಿತ ಊಟದ ವ್ಯವಸ್ಥೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮತಭಾಂದವರು ಉದಾರ ಮನಸ್ಸಿನಿಂದ ದಾನಮಾಡಿದರೆ ಈ ಕಾರ್ಯಕ್ಷಮಗಳು ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಲು ಸಹಾಯವಾಗುತ್ತದೆ. ಈ ಸಮಯದಲ್ಲಿ ಮರೆಯದೆ ನೆನಯಬೇಕಾದ ಸಂಗತಿಯೆಂದರೆ ನಮ್ಮ ಮತಬಾಂಧವರ ಮಕ್ಕಳ ವಿದ್ಯಾವಂತರಾಗಿ, ಜೀವನದಲ್ಲಿ ಯಶಸಿವಗಳಾದರೆ ಪರೋಕ್ಷವಾಗಿ ನಮ್ಮ ಮತದ ಏಳಿಗೆಯಾಗುತ್ತದೆಂದು ಕನಸು ನನಸಾಗಲು ೧೯೧೭ ರಲ್ಲೇ ಬೆಂಗಳೂರಲ್ಲಿ ಉಚಿತ ವಿದ್ಯಾರ್ಥಿ ನಿಲಯ ತೆರೆದು ನಮ್ಮೆಲ್ಲರ ಏಳಿಗೆಗೆ ಕಾರಣರಾದ ಪೂಜ್ಯ ಮಂಡಿ ಹರಿಯಣ್ಣನವರು ಕುಟುಂಬದವರು ಮತ್ತೆ ಉದಾರ ಮನಸ್ಸು ಮಾಡಿ ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ಕಟ್ಟಿಸಿಕೊಟ್ಟಿದ್ದಾರೆ. ಈ ಸಭಾಂಗಣವನ್ನು ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಮಘಕ್ಕೆ ಕೊಟ್ಟಿದ್ದಾರೆ. ನಮ್ಮ ಮತಬಾಂಧವರು ಪೂಜ್ಯ ಹರಿಯಣ್ಣನವರನ್ನು ಮತ್ತು ಅವರ ಕುಟುಂಬದವರನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತಾರೆ.
ಸಂಘದ ಪ್ರಾರಂಭಕ್ಕೆ ದುಡಿದವರು :
|
ಶ್ರೀಮಾನ್ ದಿ. ಮಂಡಿ ಹರಿಯಣ್ಣ ನವರು ಸಂಸ್ಥಾಪನಾ ಅಧ್ಯಕ್ಷರು, ”ಸಾದು ಮತದ ಸಂಘ (ರಿ) ", ಬೆಂಗಳೂರು
|
ಮಾನವ ಜನ್ಮ ದೊಡ್ಡದು, ಅದನ್ನು ಹಾನಿಮಾಡದೆ ದೊಡ್ಡ ರೀತಿಯಿಂದ ಜೀವನವನ್ನು ನಡೆಸುವುದು ಮಾನವರಾಗಿ ಹುಟ್ಟಿದವರೆಲ್ಲರ ಕರ್ತವ್ಯವೆಂದರಿತ ಗಣ್ಯ ಪುರುಷರು ಸಿಗುವುದು ಅಪರೂಪ. ಮಾನವ ತನ್ನ ಹಾಗೂ ಇತರರ ಸುಖ ದುಃಖಗಳನ್ನು ಅತಿರು ಅನುಭವಿಸಬೇಕಾದರೆ ಸಹೃದಯನಾಗುರಬೇಕು. ಮಾನವನ ಮುಖ್ಯ ಅಂಗ ಹೃದಯವಾದುದರಿಂದ ಅಧೆಏ ಔದಾರ್ಯದ ಜನ್ಮ ಸ್ಥಾನ, ಯಾವಾತನಲ್ಲಿ ಹೃದಯ ವೈಶಾಲ್ಯತೆಯುಂಟೋ ಆವಾತನಲ್ಲಿ ಸಹೃದಯತೆ ಸದಾಕಾಲವಿರುತ್ತೆ. ಇಂತಹ ಮಹನೀಯರನ್ನು ಹೃದಯ ಸಂಪನ್ನರು ಎಂದು ಭಾವಿಸುತ್ತಾರೆ. ದಿ.ಶ್ರೀಮಾನ್ ಹರಿಯಣ್ಣನವರು ಇಂತಹ ಒಬ್ಬ ಮಹನೀಯರಾಗಿದ್ದರು. ಮಂಡಿ ಹರಿಯಣ್ಣನವರೆಂದೇ ಪ್ರಸಿದ್ದ ಯಜಮಾನರು ಎಂದೂ ಕರೆಯುತ್ತಿದ್ದರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬೆಂಗಳೂರು, ಮೈಸೂರು ನಗರಗಳಲ್ಲಿ ಮಾತ್ರ ಉನ್ನತ ವ್ಯಾಸಂಗ ಮಾಡಲು ಶಾಲಾ ಕಾಲೇಜುಗಳಿದ್ದವು. ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದವರಲ್ಲಿ ನಿರಕ್ಷರಸ್ತರೇ ಹೆಚ್ಚು ಮಂದಿ ಇರುತ್ತಿದ್ದರು. ಮೇಲು ಕೀಳು ಭಾವನೆ ಬೇರೂರಿದ್ದ ಕಾಲವಾದ್ದರಿಂದ ವಿದ್ಯಾಕಾಂಕ್ಷಿಗಳಾಗಿ ಪಟ್ಟಣಕ್ಕೆ ಬಂದು ವ್ಯಾಸಂಗ ಮಾಡಲು ವಸತಿ ಊಟಕ್ಕೆ ಹಣ ಒದಗಿಸಲಾಗದಂತಹ ಪರಿಸ್ಥಿತಿ ಇದ್ದ ಕಾಲ ಪ್ರಸಾದ ನಿಲಯಗಳೂ ಇರದಿದ್ದಕಾಲ, ಇದನ್ನರಿತ ಶ್ರೀಮಾನ್ ಮಂಡಿ ಹರಿಯಣ್ಣನವರು ವಿದ್ಯಾಕಾಂಕ್ಷಿಗಳಾಗಿ ಬೆಂಗಳೂರು ಪಟ್ಟಣಕ್ಕೆ ಬಂದವರಿಗೆ ವಸತಿ, ಊಟದ ಸೌಕರ್ಯಗಳನ್ನು ಕಲ್ಪಿಸಿದ್ದರು. ಶ್ರೀ ಮರಿಯಪ್ಪನವರ ಮೂರು ಮಕ್ಕಳಲ್ಲಿ ಹರಿಯಣ್ಣನವರು ಮೂರನೇಯವರು. ಮೊದಲ ಮಗಳು ಅಕ್ಕಯ್ಯಮ್ಮ, ಎರಡನೆ ಮಗ ಜವರಾಯಪ್ಪ ಮೂರನೇ ಮಗ ಹರಿಯಣ್ಣ, ಮಂಡಿ ಹರಿಯಣ್ಣನವರು ಎಂದೇ ಪ್ರಸಿದ್ದಿಗೆ ಬಂದಿದ್ದರು. ಇವರು ಜನನ ೧೩-೧೧-೧೮೬೧. ಮಂಡಿ ಹರಿಯಣ್ಣನವರು ವೃತ್ತಿ ಧರ್ಮವಾಗಲಿ, ಪಿತ್ರಾರ್ಜಿತವಾಗಿ ಬಂದುದಾಗಿತ್ತು. ಹರಿಯಣ್ಣನವರು ತಂದೆ, ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದ್ದರು. ಹರಿಯಣ್ಣನವರು ಇಂಟರ್ ಮೀಡಿಯಟ್ ವರೆಗೂ ವ್ಯಾಸಂಗ ಮಾಡಿದ್ದರು, ಹರಿಯಣ್ಣನವರ ಆಪ್ತವರ್ಗ ಸರ್ ಎಂ. ವಿಶ್ವೇಶ್ವರಯ್ಯ, ಸರ್, ಮಿರ್ಜಿ ಇಸ್ಮಾಯಿಲ್ ಬಿ.ಕೆ ಗರುಡಾಚಾರ್ ಸಜ್ಜನರಾವ್, ಪುಟ್ಟಣ್ಣ ಚೆಟ್ಟಿ, ಗುಬ್ಬಿ ತೋಟದಪ್ಪ, ಐರೀಷ್ ಪ್ರೆಸ್ ಮಾಲೀಕರಾಗಿದ್ದ ಕೆ.ಎಸ್ ಕೃಷ್ಣಯ್ಯ ಶೇಟ್ಟರು, ಡಿ.ವಿ ಗುಂಡಪ್ಪನವರು. ಹರಿಯಣ್ಣನವರು ಸರ್ . ಎಂ. ವಿಶ್ವೇಶ್ವರಯ್ಯನವರ ಒಟ್ಟಿಗೆ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿದವರು. ತಮ್ಮ ವೃತ್ತಿ ಮಂಡಿ ವ್ಯಾಪಾರದಲ್ಲಿ ತೊಡಗಿದ್ದರು. ಹಣ ಸಂಪಾದಿಸುವುದೊಂದೇ ವ್ಯಾಪಾರಸ್ಥನ ಮನೋಧರ್ಮವಾಗಿರಬಾರದು. ಆನರಿಗೆ ವ್ಯಾಪಾರದ ಮೂಲಕವೂ ಉತ್ತಮ ಸೇವೆ ಸಲ್ಲಿಸಬಹುದೆಂದು ಅರಿತು ಮೋಸಕ್ಕೆ, ವಂಚನೆಗೆ ಒಳಗಾಗದೇ ತಮ್ಮದೇ ಆದ ರೀತಿಯಲ್ಲಿ ವ್ಯಾಪಾರ ಮನೋಧರ್ಮವನ್ನು ಪಾಲಿಸಿಕೊಂಡು ಬಂದಿದ್ದರು. ತನ್ನ ತಂದೆ ತಾತ ಹಾಕಿಕೊಟ್ಟ ಸನ್ಮಾರ್ಗವನ್ನು ಬಿಡದೆ ಪಾಲಿಸಿಕೊಂಡು ಬಂದಿದ್ದರು. ಬೆಂಗಳೂರಿನ ತರಗುಪೇಟೆ ವರ್ತಕರಿಗೆಲ್ಲ ಮಾರ್ಗರ್ಶಿಗಳಾಗಿದ್ದರು. ಎಲ್ಲಕ್ಕಿಂತ ಮೇಲಾಗಿ ಅವರು ಪ್ರಾಮಾಣಿಕರು. ವರ್ತಕತನಕ್ಕೂ ನೀತಿ ನಿಯಮಗಳುಂಟು. ಲಾಭ ಸಂಪಾಧನೆಗೂ ಮಿತಿಮೇರೆಗಳುಂಟು. ಜಾನ್ ರಸ್ಕಿನ್ ತತ್ವಜ್ಜನು ಮನುಷ್ಯ ಸಮಾಜದ ಉಪಕಾರಿಗಳಲ್ಲಿ ನೀತಿವಂತನಾದ ವಾಪಾರಿ ಬಹುಮಖ್ಯನಾದವನೆಂದು ಪದೇ-ಪದೇ ಭೋದಿಸಿದ್ದಾನೆ. ವ್ಯಾಪಾರವಿಲ್ಲದೆ ಸಮಾಜವಿಲ್ಲ. ಅಂಗಡಿ ಇಲ್ಲದೆ ಊರಿಲ್ಲ. ಹೀಗೆ ವರ್ತಕನು ಸಮಾಜ ಜೀವನಕ್ಕೆ ಮೂಲ ಸಹಾಯಕರಲ್ಲೊಬ್ಬ , ಅವನು ನಿಜವಾದ ಸಹಾಯಕನಾಗಬೆಕಾದರೆ ಅವನೂ ಕೆಲವು ಸಮಯ ನಿಯಮಗಳನ್ನಿಟ್ಟುಕೊಳ್ಳಬೇಕು. ಇಂಥ ಉತ್ತಮವಾದ ವರ್ತಕ ಧರ್ಮಕ್ಕೆ ಆದರ್ಶಪ್ರಾಯುರಾಗಿದ್ದರು ಮಂಡಿ ಹರಿಯಣ್ಣನವರು. ಸರ್ .ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ತಮ್ಮ ಸಹಪಾಟಿಯಾಗಿದ್ದ ಹರಿಯಣ್ಣನವರ ಮನೋಧರ್ಮವನ್ನು ಗಮನಿಸಿದ್ದರು. ಅವರ ಬಹುಮುಖ ಪ್ರತಿಭೆಯನ್ನು, ದೇಶಾಭಿಮಾನವನ್ನು ಕಂಡು ಯೋಚಿಸಿ, ಹರಿಯಣ್ಣನವರನ್ನು ಮೈಸೂರು ರಾಜ್ಯದ ಆಗಿನ ಪ್ರಜಾಪ್ರತಿನಿಧಿ ಸಭೆಗೆ ೧೯೧೪ ರಿಂದ ೧೯೧೮ ರವರೆಗೆ ಸದಸ್ಯರನ್ನಾಗಿ ಮಾಡಿದರು. ಹರಿಯಣ್ಣನವರು ಪ್ರಜಾಪ್ರತಿನಿಧಿ ಸಭೆಯ ನಾಮಕರಣ ಸದಸ್ಯರಾಗಿದ್ದರಂತೆ, ಸಹಕಾರಿ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು. ಗ್ರೇನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಮುಖ್ಯ ಪ್ರವರ್ತಕರಾಗಿ, ಕಾರ್ಯಶೀಲರಾದುದರಿಂದ ಬ್ಯಾಂಕು ಅವರ ಮಾರ್ಗ ದರ್ಶನದಿಂದ ಅಚ್ಚುಕಟ್ಟಾದ ಹಣಕಾಸಿನ ವ್ಯವಹಾರವನ್ನು ನಡೆಸುವಂತೆ ಮಾಡಿದ್ದರು. ಹರಿಯಣ್ಣನವರು ಈ ಬ್ಯಾಂಕಿನ ಅಧ್ಯಕ್ಷರಾಗಿ ಹದಿನೆಂಟು ವರ್ಷಗಳ ಕಾಲ ೧೯೨೭ ರಿಂದ ೧೯೪೪ ರವರಿಗೆ ಬ್ಯಾಂಕು ತಮ್ಮ “ಕೂಸು” ಎಂಬಂತೆ ಮಮತೆಯಿಂದ ಅಬಿಮಾನದಿಂದ ಜೋಪಾನವಾಗಿ ಮುನ್ನಡೆಸಲು ಶ್ರಮವಹಿಸಿದ್ದರು. ಬ್ಯಾಂಕಿಗೆ ಒಂದು ಸ್ವಂತ ಕಟ್ಟಡವನ್ನು ಚಾಮರಾಜಪೇಟೆಯಲ್ಲಿ ಕಟ್ಟಿಸಲು ಸಫಲರಾಗಿದ್ದರು. ಹರಿಯಣ್ಣನವರು ಮೈಸೂರು ಬ್ಯಾಂಕ್ ನ ಕಾರ್ಯ ನಿರ್ವಾಹಕ ಮಂಡಲಿಯಲ್ಲಿ ೧೯೧೩ ರಿಂದ ೧೯೨೫ ರವರೆಗೆ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ವಾಣಿಜ್ಯ ಮಂಡಲಿಯಲ್ಲಿ ೧೯೧೬ ರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಅನೇಕ ಸಂಘ ಸಂಸ್ಥೆಗಳಿಗೆ ಧನ ಸಹಾಯ ಮಾಡಿದ್ದರು. ಹರಿಯಣ್ಣನವರ ವ್ಯಕ್ತಿತ್ರ ಹಾಗೂ ಸ್ವಭಾವದ ಬಗ್ಗೆ ಡಿ.ವಿ ಗುಂಡಪ್ಪನವರು ಹೇಳುವ ಈ ಕೆಳಗಿನ ಮಾತುಗಳು ಗಮನಾರ್ಹ. ಹರಿಯಣ್ಣನವರು ಶಾಂತ ಸ್ವಭಾವದವರು. ಎತ್ತರವಾದ ನಿಲುವುಳ್ಳವರು. ಹೊಳೆಯುವ ಹೊಂಬಣ್ಣ, ಗಂಭೀರವಾದ ಸೌಮ್ಯಮುಖ. ಮೇಲ್ದುಟಿಯ ಮೇಲೆ ಎದ್ದು ಕಾಣುತ್ತಿದ್ದ ತುಂಬು ಮೀಸೆ, ಕ್ಲೋಸ್ ಕಾಲರ್ ಕೋಟು, ಅದರ ಮೇಲೆ ಸರಿಗೆಯ ಶಲ್ಯ, ಸಣ್ಣ ಸರಗೆ ಅಂಚಿನ ಮುಂಡಾಸು, ಕೈಯಲ್ಲಿ ಒಂದು ಬೆತ್ತ. ಇದು ಅವರ ಸಾಮಾನ್ಯ ಉಡುಪು. ಹರಿಯಣ್ಣನವರು ಹೆಚ್ಚು ಮಾತಿನವರಲ್ಲದಿದ್ದರೂ ಮೌನಿಯಾಗಿರಲಿಲ್ಲ. ಸಮಧರ್ಭಕ್ಕೆ ತಕ್ಕಂತೆ ತಕ್ಕಷ್ಟು ಮಾತು, ತಮಹೆ ಗೊತ್ತಿದ್ದ ಭಾಷೆಯಲ್ಲಿ ಸ್ಪುಟವಾಗಿ ಶುದ್ದವಾಗಿ ಮಾತನಾಡುತಿದ್ದರು. ಹರಿಯಣ್ಣನವರು, ಸಜ್ಜನರಾಯರು, ಶ್ನೇಹಶೀಲರು, ಹರಿಯಣ್ಣನವರು ಹೆಚ್ಚು ಮಾತಿನವರಲ್ಲ, ಸಜ್ಜನರಾಯರು ವಿನೋದ ಪ್ರಿಯರು, ತಮ್ಮ ಸ್ನೇಹಿತ ವಿನೋದವಾಗಿ ಮಾತನಾಡುವುದನ್ನೇ ಮಾತಿನಲ್ಲಿಯ ಸ್ವಾರಸ್ಯವನ್ನು ಗ್ರಹಿಸಿ ಹರಿಯಣ್ಣನವರು ಪ್ರಸನ್ನ ಚಿತ್ತರಾಗಿದ್ದರು. ಹರಿಯಣ್ಣ, ಸಜ್ಜನರಾಯರು, ಘನ ಶ್ರೀಮಂತರಾಗಿದ್ದರಂತೆ ಅವರ ನಡೆ ನುಡಿ ಶ್ರೀಮಂತವಾಗಿತ್ತು. ಸಂಜೆಯ ಗೋಷ್ಟಿ ವೆಂಕಟಮುನಯ್ಯ ಶೆಟ್ಟಿರ ಅಂಗಡಿಯಲ್ಲಿ ನಡೆಯುತ್ತಿತ್ತು. ಆಗ ಪೇಟೆಯ ವಿದ್ಯಮಾನ ಚರ್ಚಿಸುತ್ತಿದ್ದರು. ತಮ್ಮ ಸ್ನೇಹಿತರಾಗಲೀ, ವರ್ತಕರಾಗಲೀ, ಬಡವನಾಗಲೀ, ಬಂಧುಗಳಾಗಲೀ ಕಷ್ಟಕ್ಕೆ ಸಿಲುಕಿದರೆ ಅವರ ಕಷ್ಟಕ್ಕೆ ಸಿಲುಕಿದರೆ ಅವರ ಕಷ್ಟ ನಿವಾರಣೆ ಮಾಡಲು ಮುಂದಾಗುತ್ತಿದ್ದರು ಹರಿಯಣ್ಣನವರು. ವಿಶ್ವೇಶ್ವರಯ್ಯನವರಿಗಿದ್ದಂತೆಯೇ ಮಿರ್ಜಾಸಹೇಬರಿಗೂ ಹರಿಯಣ್ಣನವರಲ್ಲಿ ಮನಃಪೂರ್ವಕವಾದ ವಿಶ್ವಾಸ ಗೌರವಗಳಿದ್ದವು, ಒಂದಾನೊಂದು ಉತ್ಕಟ ಸಂಧರ್ಭದಲ್ಲಿ ಮಿರ್ಜಾರವರು ಒಬ್ಬಾನೊಬ್ಬ ಮನುಷ್ಯನ ವಿಷಯದಲ್ಲಿ ಕನಿಕರ ತೋರಿ “ಮಂಡಿ ಹರಿಯಣ್ಣನವರಿಗೋಸ್ಕರ ನಾನು ಈ ಮನುಷ್ಯನ ವಿಷಯದಲ್ಲಿ ರಿಯಾಯಿತಿ ತೋರಿಸಿದ್ದೇನೆ ಎಂದು ಹೇಳಿದ್ದುಂಟು “. ಸ್ವಾತಂತ್ರ್ಯಪೂರ್ವ ಗಣ್ಯ ವ್ಯಕ್ತಿಯಾಗಿದ್ದ ಹರಿಯಣ್ಣನವರು ತಮ್ಮ ಸಮಕಾಲೀನರಲ್ಲಿ, ಸಹಪಾಟಿಗಳಲ್ಲಿ, ಸ್ನೇಹಿತರಲ್ಲಿ ನಡೆದುಕೊಂಡ ರೀತಿ ಅನನ್ಯವಾಗಿತ್ತು. ಯಾವ ಕೆಲಸವನ್ನು ಮಾಡಿದರೂ ದೊಡ್ಡರೀತಿಯಿಂದ ಬಹುಕಾಲ ಉಳಿಯುವಂತೆ ಮಾಡುತ್ತಿದ್ದರು. ಅವರು ವಿದ್ಯಾರ್ಥಿಗಳಿಗೆ ಪ್ರಾರಮಭಿಸಿದ ವಸತಿ, ಊಟದ ಹಾಸ್ಟೇಲಿನಲ್ಲಿ ಇದ್ದು, ಓದಿದವರಲ್ಲಿ ಹೆಚ್ಚು ಜನ ರಾಜ್ಯ, ಕೇಂದ್ರ ಸರ್ಕಾರದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಾರ್ಥಕ ಜೀವನ ಸಡೆಸಿದ್ದಾರೆ. ನಮ್ಮ ಜನಾಂಗದ ಉನ್ನತಿಗೆ, ನಮ್ಮ ನಮ್ಮ ಮತಬಾಂಧವರನ್ನು ಸಂಘಟಿಸಲು ೧೯೧೫ ರಿಂದ ಶ್ರೀಮಾನ್ ಹರಿಯಣ್ಣನವರ ಪಾತ್ರ ಅಭಿನಂದನೀಯ, ಅವರ ಸಹಪಾಟಿಗಳೂ ನಮ್ಮ ಸಮಾಜದ ಗಣ್ಯ ವ್ಯಕ್ತಿಗಳೂ ಆಗಿದ್ದ ದಿ. ಕುದೂರು ಕಾಳಪ್ಪನವರು, ದಿ. ಅಡಕೆ ಮಂಡಿ ಮುದ್ದವೀರಪ್ಪನವರು, ಸೋಂಪುರದ ದಿ. ಶ್ರೀ ಸಂಜೀವಪ್ಪನವರು. ದಿ. ಶ್ರಾವಂಡನಹಳ್ಳಿ ಚಿಕ್ಕೇಗೌಡರು, ದಿ. ಮಾಗೋಡು ಮಲ್ಲೇಗೌಡರು, ಕೋಡ್ಲಾಪುರದ ದಿ. ಸಾಹುಕಾರ್ ಲಕ್ಷ್ಮೀನರಸಪ್ಪನವರೂ, ಮುಂತಾದವರೊಡನೆ ಸಭೆ ಸೇರಿ ಚರ್ಚಿಸುತ್ತಿದ್ದರು. ತುಮಕೂರು ತಾಲ್ಲೂಕು ಕುಚ್ಚಂಗಿ ಗ್ರಾಮದಲ್ಲಿ ಶ್ರೀಮಾನ್ ಹರಿಯಣ್ಣನವರ ಅಧ್ಯಕ್ಷ್ಷತೆಯಲ್ಲಿ ಒಂದು ಪ್ರತಿನಿಧಿಗಳ ಮಹಾಸಭೆ ೨೯-೧೨-೧೯೩೦ ರಲ್ಲಿ ನಡೆಯಿತು. ನಂತರ ಅವರ ಅಧ್ಯಕ್ಷತೆಯಲ್ಲಿಯೇ ಬೆಂಗಳೂರಿನಲ್ಲಿ ೦೫-೦೧-೧೯೩೧ರಲ್ಲಿ ಸಭೆ ಸೇರಿ ಸಾದರ ಎಂದು ಮಹಾಸಭೆ ನಡೆಸಲು ತೀರ್ಮಾನಿಸಿತು. ಪುನಃ ೧೧-೦೨-೧೯೩೧ ಹಾಗೂ ೦೮-೦೩-೧೯೩೧ರಲ್ಲಿ ಕೋಡ್ಲಾಪುರದ ದಿ. ಶ್ರೀಮಾನ್ ಲಕ್ಷ್ಮೀನರಸಪ್ಪನವರ ಮನೆಯಲ್ಲಿ ಸಭೆ ಸೇರಿ ಗೌರಿಬಿದನೂರು ತಾಲ್ಲೂಕಿನಲ್ಲಿ ಮಹಾಸಭೆ ಸೇರಲು ತೀರ್ಮಾನಿಸಲಾಯಿತು. ಸಾದು ಮತದ ಮಹಾಸಭೆ ೦೯-೦೭-೧೯೩೪ ರಂದು ಮಧುಗಿರಿಯಲ್ಲಿ ಶ್ರೀಮಾನ್ ಹರಿಯಣ್ಣನವರ ಅಧ್ಯಕ್ಷತೆಯಲ್ಲಿ ೩ ದುನಗಳು ವಿಜೃಂಭಣೆಯಿಂದ ನಡೆದು " ಸಾದು ಮತದ ಸಂಘ”ಎಂದು ಹೆಸರಿಡಬೇಕೆಂದು ತೀರ್ಮಾನಿಸಲಾಯಿತು. ಆ ದಿನ ಮಹಾಸಭೇಯ ಅರ್ಧಯಕ್ಷತೆ ವಹಿಸಿ ಸಂಘ ಸ್ಥಾಪನೆಗೆ ಮಾಡಿದ ಭಾಷಣ. ಐಕ್ಯಮತ್ಯವಿಲ್ಲದೆ ಯಾವ ಸಮಾಜವೂ ತನ್ನ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ನಮ್ಮ ಸಮಾಜದ ಏಳಿಗೆಯ ವಿಚಾಯ್ಳೂ ಕಾರ್ಯತಹ ನಡಯಬೇಕಾದರೆ ಸಮಸ್ತ ಜನರು ಸೇರಿ ಸಂಘವನ್ನೇರ್ಪಡಿಸಿಬೇಕು. “ ಸಂಘ ಶಕ್ತಿಃ ಕಲೌಯುಗೆ” ಎಂಬ ನಾನ್ನುಡಿಯಂತೆ ಇತರ ಮತದವರು ಅಭಿವೃದ್ದಿ ಹೊಂದಲು ಸಂಘಗಳನ್ನೇರ್ಪಡಿಸಿ ಮುಂದುವರಿಯುತ್ತಿರುವಾಗ, ನಾವು ನಮ್ಮದರದ್ರಾವಸ್ತೆಯನ್ನು ಕಷ್ಟ ದೆಸೆಯನ್ನು ಕಾರಣವಾಗಿಟ್ಟುಕೊಂಡು ಕಾಲಹರಣ ಮಾಡಿದರೆ ನಮ್ಮ ಸಮಾಜವು ಎಂದಿಗೂ ಅಭಿವೃದ್ಧಿಯಾಗುವುದಿಲ್ಲ, ಹಣವಿಲ್ಲವೆಂದು ಸುಮ್ಮನೆ ಕುಳಿತರಾಗುವುದಿಲ್ಲ, ಮುಖ್ಯವಾಗಿ ಬೇಕಾದುದು ಐಕ್ಯಮತ್ಯ ಮತ್ತು ಉತ್ಸಾಹದಿಂದ ಮತ ಸೇವೆ ಮಾಡಲು ಬದ್ದಕಂಕರಾಗಿ ನಿಲ್ಲುವ ಮಹಾನೀಯರು, ಸಕಲೈಶ್ವರ್ಯಕ್ಕೂ ಪರಮೇಶ್ವರನೇ ಕಾರಣವಾಗಿರುವುದರಿಂದ ನಾವು ಆಸಕ್ತಿಯಿಂದ ಕೆಲಸ ಮಾಡಿದರೆ ಪರಮಾತ್ಮನು ನಮಗೆ ಸಹಾಯನಾಗುತ್ತಾನೆ, ಆದುದರಿಂದ ನಾವೆಲ್ಲರೂ ದಯಾಳುವಾದ ಭಗವಂತನನ್ನು ನಮ್ಮ ಸಂಘದ ಶ್ರೇಯೋಭಿವೃದ್ದಿಗಾಗಿ ಪ್ರಾರ್ಥಿಸಿ ಒಗ್ಗಟ್ಟಿನಿಂದ ಕಾರ್ಯಸಾಧನೆ ಮಾಡಿದರೆ ಸಂಘವು ಶಾಶ್ವತವಾಗಿ ನಡೆದುಕೊಂಡು ಬರುವುದರಲ್ಲಿ ಸಂದೇಹವಿಲ್ಲ. ದಿ: ೨೬-೧೦-೧೯೪೦ ರಂದು ಗೌರಿಬಿದನೂರು ತಾಲ್ಲೂಕು ಗೊಟಗನಾಪುರದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಶ್ರೀಮಾನ್ ಮಂಡಿಹರಿಯಣ್ಣನವರು ವಹಿಸಿ, ಸಂಘಕ್ಕೆ ನಮ್ಮ ಜನಾಂಗದ ಎಲ್ಲಾ ಮತಬಾಂದವರನ್ನು ಸದಸ್ಯರನ್ನಾಗಿ ಮಾಡಿಸಿ ಸಂಘವನ್ನು ನೊಂದಾಯಿಸಲು ತೀರ್ಮಾನಿಸಿ ೧೦,೭,೧೯೪೩ ರಲ್ಲಿ ರ “ ಸಾದು ಮತದ ಸಂಘ” ಎಂದು ನೊಂದಾಯಿಸಲದಪಟ್ಟಿತು. ಇಂತಹ ವಿಶಾಲ ಮನೋಭಾವದ ಹಾಗೂ ಸಾದು ಮತಕ್ಕೆ ತಿಲಕಪ್ರಾಯರಾಗಿದ್ದ ಶ್ರೀಮಾನ್ ಹರಿಯಣ್ಣನವರು ತುಂಬು ಸಾರ್ಥಕ ಜೀವನವನ್ನು ಮಾಡಿ ತಮ್ಮ ೮೫ ನೇ ವಯಸ್ಸಿನಲ್ಲಿ ದಿನಾಂಕ ೦೫-೧೧-೧೯೪೬ ರಂದು ನಮ್ಮೆಲ್ಲರನ್ನೂ ಅಗಲಿ ತಮ್ಮ ಚರಿತೆಯನ್ನು ಜೀವಂತಗೊಳಿಸಿದ್ದಾರೆ. ಅಡಿಕೆ ಮಂಡಿ ಮುದ್ದುವೀರಪ್ಪನವರು, ಬೆಂಗಳೂರು. ದಿ: ಶ್ರೀಮತಿ ಚಿಕ್ಕಮ್ಮ ಮತ್ತು ದಿ. ಬ್ರಹ್ಮಪ್ಪರವರ ಪುತ್ರರಾಗಿ ಜನಿಸಿದರು. ಅಡಿಕೆ ಮಂಡಿ ವ್ಯಾಪಾರದಲ್ಲಿ ಅಡಿಕೆ ಮಂಡಿ ಮುದ್ದುವೀರಣ್ಣನವರೆಂದೇ ಪ್ರಸಿದ್ದರಾಗಿ, ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. ಸಾದು ಮತದ ಏಳಿಗೆಗಾಗಿ ಪ್ರಾರಂಭದಿಂದಲೂ ೧೯೩೧ ರಿಂದ ಶ್ರಮಿಸಿದ ಮ್ರಮುಖರಲ್ಲಿ ಒಬ್ಬರು. ಸಂಘದ ಪ್ರಥಮ ಜನರಲ್ ಸೆಕ್ರೆಟರಿಯಾಗಿ ೧೯೩೫ ರಲ್ಲಿ ಆಯ್ಕೆಗೊಂಡರು, ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಆರ್ಥಿಕವಾಗಿ ಸಹಾಯ ಮಾಡಿ ಸಂಘದ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿದರು. ಇವರು ಶ್ರೀ ಮಂಡಿ ಹರಿಯಣ್ಣ ನವರ ಸಮಕಾಲೀನರಲ್ಲಿ ಒಬ್ಬರು. ಇವರ ಸೇವೆ ಕೇವಲ ತಮ್ಮ ಮತಕ್ಕೆ ಸೀಮಿತವಾಗಿರದೆ ಬೇರೆ ಮತಗಳ ಅಭ್ಯುದಯಕ್ಕೆ ಶ್ರಮಿಸಿದ್ದರೆಂಬುದಕ್ಕೆ ೧೯೪೫ ರಲ್ಲಿ ಅವರೇ ಸ್ಥಾಪಿಸಿದ ಶ್ರೀ ದಿಗಂಬರ ಜೈನ ಮಹಾವೀರ ಸಂಘವೇ ಸಾಕ್ಷಿ. ಅದರ ಅಧ್ಯಕ್ಷರಾಗಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಗ್ರೈನ್ ಮರ್ಚೆಂಟ್ ಬ್ಯಾಂಕಿನ ಸ್ಥಾಪಕ ಡೈರೆಕ್ಟರಾಗಿ ಅದರ ಅಭ್ಯುದಯಕ್ಕೆ ಕಾರಣರಾದರು. ಸಾದು ಮತಕ್ಕೆ ಅವರ ಕೊನೆಯುಸಿರು ಇರುವವರೆಗೂ ಬಿಚ್ಚು ಮನಸ್ಸಿನಿಂದ ನಿಷ್ಠಾನಂತರಾಗಿ ಸೇವೆಸಲ್ಲಿಸಿದುದನ್ನು ಸಂಘವು ಸ್ಮರಿಸುತ್ತದೆ.
|
ಶ್ರೀಮಾನ್ ದಿ. ಎಂ. ಎಸ್ ಮಲ್ಲಯ್ಯನವರು ಸಂಸ್ಥಾಪರು, ”ಯುವಕ ಸೇವಾ ಸಮಾಜ ", ಬೆಂಗಳೂರು
|
೧೯೦೯ರಲ್ಲಿ ದಿ. ಶ್ರೀಮತಿ ಅಕ್ಕಯ್ಯಮ್ಮ ಮತ್ತು ದಿ.ಶ್ರೀ ಸಿದ್ದಪ್ಪನವರ ಮಕ್ಕಳಾಗಿ ಮೈದನಹಳ್ಳಿಯಲ್ಲಿ ಜನಿಸಿದರು. ತಮ್ಮ ೮ನೇ ವಯಸ್ಸಿನಲ್ಲೇ ತಂದೆಯವರು ತೀರಿಕೊಂಡರು. ಕಷ್ಟದಲ್ಲೆ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮುಗಿಸಿ, ಬೆಂಗಳೂರುಗೆ ಬಂದು ದಿ. ಮಂಡಿಹರಿಯಣ್ಣನವರ ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮುಗಿಸಿದರು. ೧೯೨೬- ೨೭ ಕ್ಕೆ ತಮ್ಮ ವ್ಯಾಸಂಗ ಮುಗಿಸಿ ರಾಜ್ಯದ ಲೇಖಪಾಲನ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ತಮ್ಮ ವಿದ್ಯಾಭ್ಯಾಸದ ಕಾಲದ ಅವಧಿಯಲ್ಲೇ ನಮ್ಮ ಸಮಾಜದೇಳಿಗೆಗಾಗಿ ದುಡಿಯಬೇಕೆಂಬ ಹಂಬಲವನ್ನು ತಾವು ಮೈಗೂಡಿಸಿಕೊಂಡರು. ತಮ್ಮ ತುಂಬು ಬದುಕಿನ ಕಾಲಾವಧಿಯಲ್ಲಿ ಅವರು ನಮ್ಮ ಸಮಾಜಕ್ಕೆ ಮಾಡಿದ ಸೇವೆಯಿಂದ ಇದನ್ನು ಕಾಣಬಹುದು. ನಮ್ಮ ಯುವಜನರನ್ನು ಸಂಘಟಿಸಿ ಹಿರಿಯರು ಸಮಾಜಸೇವೆ ಮಾಡಲು ಹಾಕಿಕೊಂಡಿರುವ ಕಾರ್ಯಕ್ರಮದಲ್ಲಿ ನೆರವಾಗಲು ೧೯೩೪ ರಲ್ಲಿ ಯುವಕ ಸೇವಾ ಸಮಾಜವನ್ನು ಸ್ಥಾಪಿಸಿ ಕಾರ್ಯೋನ್ಮುಖರಾದರು. ೧೯೩೫ ರ ಸುಮಾರಿಗೆ ತಾವು ಹಾಸನಕ್ಕೆ ವರ್ಗವಾದಾಗ ಈ ಯುವಜನ ಸೇವಾ ಸಮಾಜದ ಕಾರ್ಯ ಅಷ್ಟಕ್ಕೇ ನಿಂತಿತು. ಆದರೂ ತಮ್ಮ ಉಳಿದ ಕಾಲವನ್ನು ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ನಾನಾ ರೀತಿಯಲ್ಲಿ, ನಮ್ಮ ಸಂಘದ ಮೂಲಕ ಕಾಗದಗಳನ್ನು ಬರೆಸುತ್ತಾ ಶಾಲಾ ಕಾಲೇಜುಗಳಲ್ಲಿ ಸೀಟುಕೊಡಿಸುವ ಫ್ರೀಷಿಪ್, ಸ್ಕಾಲರ್‌ಷಿಪ್ ಕೊಡುವ ಅಥವಾ ವಿದ್ಯಾಭ್ಯಾಸ ಮುಗಿದ ಮೇಲೆ ಅವರಿಗೆ ಸರ್ಕಾರದ ಕೆಲಸಕೊಡಿಸುವ ಬಗ್ಗೆ ಶಿಫಾರಸ್ಸು ಮಾಡುವಲ್ಲಿ ಬಡ್ತಿ ಕೊಡುವ ವಿಷಯದಲ್ಲಿ ಹೀಗೇ ಸತತವಾಗಿ ಪ್ರಯತ್ನ ಪಡುತ್ತಾ ಬಂದರು. ನಮ್ಮ ಸಂಘವು ೧೯೪೩ ರಲ್ಲಿ ರಿಜಿಸ್ಟರು ಆಗುವುದಕ್ಕಿಂತ ಮುಂಚೆ ಅಂದರೆ ನಮ್ಮ ಸಂಘವು ೧೯೪೩ ರಲ್ಲಿ ರಿಜಿಸ್ಟರು ಆಗುವುದಕ್ಕಿಂತ ಮುಂಚೆ ಅಂದರೆ ೧೯೩೪ ರಲ್ಲಿಯೇ ಮಧುಗಿರಿಯಲ್ಲಿ ನಮ್ಮ ಮತ ಭಾಂದವರ ಸಭೆ ನಡೆದು ನಮ್ಮದೇ ಆದ ಸಂಘವನ್ನು ರಿಜಿಸ್ಟರು ಮಾಡಬೇಕೆಂದು ತೀರ್ಮಾನ ತೆಗೆದುಕೊಂಡರು. ದಿ. ಮಂಡಿಹರಿಉಯಣ್ಣನವರೇ ಈ ಮಹಾಸಭೆಯ ಅಧ್ಯಕ್ಷರಾಗಿದ್ದರು. ನಮ್ಮ ಸಂಘವು ೧೯೪೩ ರಲ್ಲಿ ರಿಜಿಸ್ಟರು ಆದ ಮೇಲೂ ಸಹ ದಿ. ಮಂಡಿಹರಿಯಣ್ಣನವರೇ ಉಚಿತ ವಿದ್ಯಾರ್ಥಿನಿಲಯವನ್ನು ,ಮುಂದುವರೆಸಿಕೊಂಡು ಬಂದರು. ಈ ಕಲಾವಧಿಯಲ್ಲಿ ೧೯೪೪-೧೯೫೬ ಮಲ್ಲಯ್ಯನವರು ವಿದ್ಯಾರ್ಥಿನಿಲಯ ವಾರ್ಡನ್ ಆಗಿ ಕೆಲಸಮಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಗಳಾಗಿದ್ದರು. ೧೯೫೬ ರಿಂದಾಚೆಗೆ ಉಚಿತ ವಿದ್ಯಾರ್ಥಿ ನಿಲಯ ನಡೆಯಲಿಲ್ಲವಾದ್ದರಿಂದ ಮನಸ್ಸಿನಲ್ಲಿ ತುಂಬಾನೊಂದುಕೊಂದುಕೊಂಡು ನಮ್ಮ ಸಂಘವನ್ನು ಕಾರ್ಯೋನ್ಮುಖವಾಗುವಂತೆ ಮಾಡಿ ತನ್ಮೂಲಕ ವಿದ್ಯಾರ್ಥಿನಿಲಯವನ್ನು ಊರ್ಜಿತಗೊಳಿಸಬೇಕೆಂದು ಅವರು ಪಟ್ಟ ಶ್ರಮ ಅಷ್ಠಿಷ್ಟಲ್ಲ. ಈ ಕಾರ್ಯ ನಿರ್ವಹಿಸಲು ಹಾಸ್ಟೆಲ್ ಕಟ್ಟಲು ಬಂದ ಜಾಗವನ್ನು ಸಂಘವೇ ಪಡೆಯಬೇಕೆಂದು ಉದ್ದೇಶದಿಂದ ಬೆಂಗಳೂರು ಮುನಿಸಿಪಾಲಿಟಿಗೆ ಅರ್ಜಿಸಲ್ಲಿಸಿದರು. ಆದ್ದರಿಂದ ಪ್ರಯೋಜನವಾಗದಿದ್ದರಿಂದ ರೇರ್ಸ್ ಕೋರ್ಸ್ ಪಕ್ಕದಲ್ಲಿ ಜಾಗವನ್ನು ಖರೀದಿಸಿ ಕೊಳ್ಳಲು ನಿರ್ಧರಿಸಿ, ನಮ್ಮ ಮತಭಾಂದವರಿಂದ, ಹಳೆಯ ವಿದ್ಯಾರ್ಥಿಗಳಿಂದ ಮತ್ತು ಸಾಲದ ರೂಪವಾಗಿ ಹಣ ಸಂಗ್ರಹಿಸಿ ನಿವೇಶನವನ್ನು ಕೊಳ್ಳಲು ಏರ್ಪಾಡು ಮಾಡಿ, ನಿವೇಶನ ಕೊಳ್ಳುವಲ್ಲಿ ಇರುವ ಪಾತ್ರ ಹೊರಿದು. ಆ ನಿವೇಶನದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಲು ಸರಿಯಾದ ಜಾಗವಲ್ಲವೆಂದು ಸಂಘದವರು (ರಾಜಾಜಿನಗರ) ಬೆಂಗಳೂರೂ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್‌ಬೋರ್ಡಿನಿಂದ ನಮ್ಮವರೇ ಆದ ದಿ. ಬಿ.ಕೆ ಶಿವಲಿಂಗಪ್ಪನವರು ಮತ್ತು ಶ್ರೀ ಎಂ.ಹೆಚ್ ರಾಜು ಅವರ ಸಹಾಯದಿಂದ ಪಡೆಯಲು ಶ್ರಮಿಸಿ ನಿವೇಶನವನ್ನು ೩೦ ವರ್ಷದ ಲೀಸ್ ಮೇಲೆ ಪಡೆಯಲು ಶ್ರಮಿಸಿದರು. ಅದೂ ಅಲ್ಲದೆ ಇವರು ಕಾರ್ಯದರ್ಶಿಯಾಗಿದ್ದಾಗ ೧೯೭೦ ರಲ್ಲಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಕ್ರಮತೆಗೆದುಕೊಂಡರು. ನಂತರ ೧೯೭೧ ರಲ್ಲಿ ಸಂಘವು ತನ್ನದೇ ಆದ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕೆ ಕೊಂಡಿತು. ೧೯೭೮ ರ ವರೆಗೂ ಸಂಘದ ಕಾರ್ಯದರ್ಶಿಯಾಗಿ ಸಂಘದ ಸರ್ವೋನ್ಮಖವಾದ ಏಳಿಗೆಗಾಗಿ ದುಡಿದರು. ಇವರ ಮತ್ತು ಮತಬಾಂಧವರ ಶ್ರಮದಿಂದ ೧೯೭೯ ರಲ್ಲಿ ಬೆಂಗಳೂರುನ ವಿದ್ಯಾರ್ಥಿನಿಲಯ ಮತ್ತೆ ಪ್ರಾರಂಭವಯಿತು. ೧೯೮೧ ರಿಂದ ೧೯೮೮ರ ವರೆಗೂ ಉಪಾಧ್ಯಕ್ಷರಾಗಿ ಮತ್ತು ೧೯೮೯-೯೦ ರಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ನಮ್ಮ ಮತದ ಸರ್ವತೋಮುಖ ಅಭಿವೃದ್ಧಿಗೆ, ತಮ್ಮ ಯೌವ್ವನದಿಂದಲೂ ರ್ಶರಮಿಸಿ ತಮ್ಮ ಇಳಿವಯಸ್ಸಿನಲ್ಲಿಯೂ ಸಂಘದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ೧೯೯೪ ಜನವರಿ ಮಾಹೆಯಲ್ಲಿ ತಮ್ಮ ೮೫ ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಕುದೂರು ಕಾಳಪ್ಪನವರು ಬೆಂಗಳೂರು : ದಿ. ಶ್ರೀ ಕುದೂರು ಕಾಳಪ್ಪನವರು ನಮ್ಮ ಸಂಘದ ಅಭಿವೃದ್ದಿಗೆ ದುಡಿದವರಲ್ಲಿ ಕೆಲವೇ ಮಂದಿ ಹಿರಿಯರಲ್ಲಿ ಇವರೂ ಒಬ್ಬರು. ಆಗಿನ ಕಾಲದ ಬೆಂಗಳುರುನ ಪ್ರತಿಷ್ಟಿತ ವ್ಯಕ್ತಿಗಳಾಗಿದ್ದ ಶ್ರೀ ಸಜ್ಜಿನ್ ರಾವ್, ಶ್ರೀ ಗರುಡಾಚಾರ್, ಶ್ರೀ ಪುಟ್ಟಣ್ಣ ಶೆಟ್ಟರು ಮತ್ತು ಶ್ರೀ ಮಂಡಿಹರಿಯಣ್ಣನವರ ಸಮಕಾಲೀನರು. ಬೆಂಗಳೂರಿನ ಪ್ಮುಖ ವ್ಯಾಪಾರಿಗಳಲ್ಲಿ ಇವರೂ ಒಬ್ಬರು. ಬಣ್ಣ ಮತ್ತು ನೂಲಿನ ಸಗಟು ವ್ಯಾಪಾರಿಗಳು, ಹಾಗೂ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಕಟ್ಟುವ ಕಂಟ್ರಾಕ್ಟರ್ ಆಗಿ ಕೆಲಸ ಮಾಡಿದ್ದಾರೆ. ನಮಗೆ ತಿಳಿದ ಮಟ್ಟಿಗೆ ಇವರ ಪೂರ್ವಿಕರು ಮಾಗಡಿ ಕೆಂಪೇಗೌಡನ ಆಸ್ಥಾನದಲ್ಲಿ ಮಂತ್ರಿಗಳಾಗಿ, ಕೆಂಪೇಗೌಡನ ಕಾಲಾ ನಂತರ ಬೆಂಗಳೂರಿಗೆ ವಲಸೆ ಬಂದು ನೆಲೆಸಿದರು. ೧೯೩೪ ರಲ್ಲಿ ಮಧುಗಿರಿಯಲ್ಲಿ ನಡೆದ ಸಾದು ಮತದ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ಆರಿಸಿಬಂದರು, ೧೯೪೦ ರಲ್ಲಿ ಗೊಟಕಣಾಪುರದಲ್ಲಿ ನಡೆದ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ಸಾದು ಮತದ ಸರ್ವತೋಮುಖ ಏಳಿಗೆಗೆ ಒಂದು ಕಾರ್ಯಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿ ಚುನಾಯಿತರಾದರು. ಅವರ ಜೀವ ಪರ್ಯಂತವೂ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರು.
ಸಂಜೀವಪ್ಪನವರು ಸೋಂಪುರ : ನಮ್ಮ ಮತಬಾಂಧವರನ್ನು ಒಂದುಗೂಡಿಸಿ ಸಂಘವನ್ನು ಕಟ್ಟುವುದರಲ್ಲಿ ಶ್ರಮಿಸಿದವರಲ್ಲಿ ಮೊದಲಿಗರು. ನಮ್ಮ ಮತದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಿಂದೆಯೇ ಒಂದು ಪುದುವಟ್ಟು ಇಟ್ಟು, ಪ್ರತಿ ವರ್ಷ ನಮ್ಮ ಮತದ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗದಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ಒಂದು ಪಾರಿತೋಷಕವನ್ನು ಕೊಡುವಂತೆ ಮಾಡಿದರು. ನಮ್ಮ ಮಕ್ಕಳ ವಿದ್ಯಾಭಿವೃದ್ದಿಯಲ್ಲಿ ಇವರಿಗಿದ್ದ ಆಸಕ್ತಿ ಇದರಿಂದ ವ್ಯಕ್ತವಾಗುತ್ತದೆ.
ಸಾಹುಕಾರ್ ಲಕ್ಷ್ಮೀನರಸಪ್ಪ ನವರು ಕೋಡ್ಲಾಪುರ : ಮಧುಗಿರಿ ತಾಲ್ಲೂಕು ಕೋಡ್ಲಾಪುರ ಗ್ರಾಮದ ಸಾ|| ಲಕ್ಷ್ಮೀನರಸಪ್ಪನವರು ನಮ್ಮ ಮತಬಾಂಧವರಲ್ಲಿ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು. ನಮ್ಮ ಮತದ ಜನರು ಅಭಿವೃದ್ಧಿಗಾಗಿ ಸುಮಾರು ವರ್ಷಗಳಿಂದಲೂ ಬೆಂಗಳೂರಿನ ದಿ. ಶ್ರೀ. ಮಂಡಿ ಹರಿಯಣ್ಣನವರು ಅನೇಕ ಪ್ರಯತ್ನ ಮಾಡಿದರೂ ನಮ್ಮ ಮತದ ಸಮಸ್ತ ಜನರ ಸಹಾಯವು ಬಾರದೇ ಹೋದದ್ದರಿಂದ ಸಾಕಷ್ಟು ಅಭಿವೃದ್ಧಿಯುಂಟಾಗಲಿಲ್ಲ. ಹೀಗಿರುವಲ್ಲಿ ಡಿಸೆಂಬರ್ ೧೯೩೦ ರಲ್ಲಿ ತುಮಕೂರು ತಾಲ್ಲೂಕು ಕುಚ್ಚಂಗಿಯಲ್ಲಿ ಒಂದು ಸಭೆ ನಡೆದು ನಮ್ಮ ಮತದವರ ಜನಗಣತಿ ಮಾಡಿ ಮತಬಾಂಧವರ ಅಭಿವೃದ್ಧಿಗೆ ಮಾಡಬೇಕಾದ ಕಾರ್ಯಕ್ರಮಗಳನ್ನು ಚರ್ಚಿಸಲಾಯಿತು. ಆನವರಿ ೧೯೩೧ ರಲ್ಲಿ ದಿ. ಸಾ|| ಲಕ್ಷ್ಮೀನರಸಪ್ಪನವರ ಮನೆಯಲ್ಲಿ ಮತ್ತೆ ಸಭೆ ಸೇರಿ ಸಾದು ಮತದ ಮಹಾಸಬೆ (ಕಾನ್ ಫರೆನ್ಸ್ ) ಯನ್ನು ಕರೆಯಬೇಕೆಂದು, ಅಲ್ಲಿ ಮತದವರ ಏಳಿಗೆಗಾಗಿ ಕೈಗೊಳ್ಳುವ ಸಮಗ್ರ ವಿಷಯವನ್ನು ಚರ್ಚಿಸಿ ಕಾರ್ಯೋನ್ಮುಖರಾಗಬೇಕೆಂದು ತೀರ್ಮಾನಿಸಲಾಯಿತು. ಹೀಗೆ ಮಧುಗಿರಿಯಲ್ಲಿ ೧೯೩೪ ರಲ್ಲಿ ನಡೆದ ನಮ್ಮ ಮತಬಾಂಧವರ ಮಹಾಸಭೆಗೆ ಇದು ನಾಂದಿಯಾಯಿತು. ದಿ. ಸಾ|| ಲಕ್ಷ್ಮೀನರಸಪ್ಪನವರು ನಮ್ಮ ಸಂಘ ಸ್ಥಾಪನೆ ಮತ್ತು ಅದರ ಅಭಿವೃದ್ಧಿಗೆ ಅದಿಯಿಂದಲೂ ಶ್ರಮಿಸಿದವರು. ೧೯೩೪ ರಲ್ಲಿ ನಡೆದ ನಮ್ಮ ಮಧುಗಿರಿ ಮಹಾಸಭೆಯಲ್ಲಿ ತಮ್ಮ ಸ್ವಾಗತ ಮಂಡಲಿಯ ಅಧ್ಯಕ್ಷ ಭಾಷಣದಲ್ಲಿ ನಮ್ಮ ಸಂಘವನ್ನು ರಿಜಿಸ್ಟರು ಮಾಡಿಸಿ ತನ್ಮೂಲಕ ಅಭಿವೃದ್ಧಿ ಸಾಧಿಸಬೇಕೆಂದು ಸೂಚಿಸುತ್ತಾರೆ. ತಮ್ಮ ಜೀವಾವಧಿಯವರೆಗೂ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಹಕರಿಸುತ್ತಾರೆ.
ಮಲ್ಲೇಗೌಡರು ಮಾಗೋಡು : ಶಿರಾ ತಾಲ್ಲೂಕು ಮಾಗೋಡು ಗ್ರಾಮದಲ್ಲಿ ೧೮೮೯ರಲ್ಲಿ ಚನ್ನದ್ಯಾವರೇಗೌಡರ ಪುತ್ರರಾಗಿ ಜನಿಸಿದರು. ಸುತ್ತಮುತ್ತಲ ಗ್ರಾಮಗಳಲ್ಲಿ ಚಿರಪರಿಚಿತ ವ್ಯಕ್ತಿ, ಅವರ ಕಾರ್ಯದಕ್ಷತೆ ಮತ್ತು ಬಡವರಲ್ಲಿಯ ಅವರ ಅನುಕಂಪ ಅವರು ಜನಾನುರಾಗಿಯಾಗಲು ಕಾರಣ. ನಮ್ಮ ಮತಬಾಂಧವರ ಸಂಘಟನಾ ಕಾರ್ಯದಲ್ಲಿ ೧೯೩೧ ರಿಂದಲೂ ಶ್ರಮಿಸಿದವರು. ದಿ.ಕುದೂರು ಕಾಳಪ್ಪನವರ ಒಡನಾಡಿಯಾಗಿ ಕೆಲಸ ಮಾಡಿದವರು. ೧೯೩೪ ರಲ್ಲಿ ಮಾಗೋಡಿನ ಕೆರೆ ಕೋಡಿ ಅತಿವೃಷ್ಟಿಯಿಂದ ಒಡೆದು ಹೋದ ಸಮಯದಲ್ಲಿ ಊರಿನ ಮತ್ತು ಸುತ್ತಮುತ್ತಲಿನ ಊರಿನ ಜನರನ್ನು ಹುರಿದುಂಬಿಸಿ, ಒಡೆದು ಹೋದ ಕೋಡಿಯನ್ನು ಕಟದಟೆ, ಮತ್ತೆ ಕೆರೆಯಲ್ಲಿ ನೀರು ನಿಲ್ಲಿಸಿ ಬೆಳೆಯಾಗಲು ಅನುಕೂಲ ಮಾಡಿದರು. ಇವರ ಈ ಕಾರ್ಯದಕ್ಷತೆಯನ್ನು ಗುರುತಿಸಿ ಆಗಿನ ಮಹಾರಾಜರಾಗಿದ್ದ ಶ್ರೀಮಾನ್ ಕೃಷ್ಣರಾಜ ಒಡೆಯರು ಇವರಿಗೆ ದಸರಾ ಮಹೋತ್ಸವ ಸಂದರ್ಭದಲ್ಲಿ ಮೈಸೂರಿಗೆ ಸೇರಿದ್ದ ದರ್ಬಾರಿನಲ್ಲಿ ಸುವರ್ಣ ಪದಕ ಮತ್ತು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಬೆಂಗಳೂರು ಸಾದು ಮತದ ಯುವಕ ಸೇವಾ ಸಮಾಜದವರು ೧೯೩೪ ರಲ್ಲಿ ದಿ. ಮಂಡಿಹರಿಯಣ್ಣನವರ ಅಧ್ಯಕ್ಷತೆಯಲ್ಲಿ ಸತ್ಕಾರ ಕೂಟವನ್ನೇರ್ಪಡಿಸಿ ಇವರನ್ನು ಅಭಿನಂದಿಸಿದರು. ದಿ. ಮಂಡಿಹರಿಯಣ್ಣ ನವರು ತಮ್ಮ ಭಾಷಣದಲ್ಲಿ “ಸಾದು ಮತದವರಲ್ಲಿ ಈ ರೀತಿ ಮನ್ನಣೆ ಪಡೆದವರು ಮಾ.ರಾ.ರ್ಶರೀ ಮಲ್ಲೇಗೌಡರೊಬ್ಬರೇ” ಎಂದು ಈ ಬಹುಮಾನವು ಒಟ್ಟು ಸಾದುಮತಕ್ಕೆ ಬಂದಷ್ಟು ಆನಂದವಾಗಿದೆಂದೂ ಒರತಿಯೊಬ್ಬ ಯುವಕ ನೂ ಮಲ್ಲೇಗೌಡರಂತೆ ದೇಶಸೇವೆ ಮಡಬೇಕೆಂದು ನುಡಿದರು. ನಮ್ಮ ಯುವಕರು ಈ ಮಾತನ್ನು ಗಮನಿಸಬೇಕು,
ಮಂಡಿ ಕಾಳಪ್ಪನವರು, ಬೆಂಗಳೂರು : ಇವರು ಬೆಂಗಳೂರು ಪ್ರಮುಖ ವರ್ತಕರಲ್ಲಿ ಒಬ್ಬರು. ನಮ್ಮ ಮತಬಾಂಧವರ ಸಂಘದ ಚಟುವಟಿಕೆಗಳಲ್ಲಿ ಮೊದಲಿನಿಂದಲೂ ಭಾಗವಹಿಸಿ ಸೇವೆ ಸಲ್ಲಿಸಿದ್ದಾರೆ. ೧೯೪೩ ರಲ್ಲಿ ನಮ್ಮ ಸಂಘದ ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡಿದರು. ತದನಂತರ ನಡೆದ ಎಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿ ಸಲಹೆಗಳನ್ನಿತ್ತು ಸೇವೆ ಸಲ್ಲಿಸಿದ್ದಾರೆ.
ಎಸ್ ಹನುಮಂತರಾಯಪ್ಪನವರು. ಸೋಂಪುರ : ಕೊರಟಗೆರೆ ತಾಲ್ಲೂಕು ಸೋಂಪುರದಲ್ಲಿ ದಿ. ಸಂಜೀವಪ್ಪನವರ ಪುತ್ರರಾಗಿ ಜನಿಸಿದರು. ನಮ್ಮ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ವ್ಯಕ್ತಿ, ೧೯೩೧ ರಿಂದಲೂ ಮತಬಾಂಧವರ ಸಂಘಟನೆ ಮತ್ತು ಸಂಘದ ಉನ್ನತಿಗೆ ಶ್ರಮಿಸಿದ ಮುಖ್ಯರಲ್ಲಿ ಒಬ್ಬರು. ೧೯೩೪ ರಲ್ಲಿ ಮಧುಗಿರಿಯಲ್ಲಿ ನಡೆದ ಮಹಾಸಭೆಯ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ೧೯೪೩ ರಿಂದ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ನಮ್ಮ ಮತಬಾಂಧವರ ಸಭೆಗಳು, ಅಲಕಾಪುರ, ಸೊಂಡೆಕೊಪ್ಪ ಮತ್ತು ೧೯೫೬ ರಲ್ಲಿ ಬಾಲೇನಹಳ್ಳಿಯಲ್ಲಿ ಜರುಗಿದಾಗ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಜಕೀಯ ಕ್ಷೇತ್ರದಲ್ಲಿ ದುಡಿದಿದ್ದಾರೆ.
ಜಿ. ವೆಂಕಟರಮಣಪ್ಪನವರು, ಗೊಟಕಣಾಪುರ : ಗೌರಿಬಿದನೂರು ತಾಲ್ಲೂಕು ಗೊಟಕನಾಪುರದ ಗ್ರಾಮದ ದಿ. ಶ್ರೀ.ನಂಜುಂಡೇಗೌಡ ಮತ್ತು ದಿ. ಶ್ರೀಮತಿ ಚೆನ್ನಮ್ಮ ನವರ ಪುತ್ರರಾಗಿ ಜನಿಸಿದರು,ನಮ್ಮ ಮತ ಬಾಂಧವರ ಸಂಘಟನೆಗೆ ೧೯೩೧ ರಿಂದ ಶ್ರಮಿಸಿದರು ೧೯೪೦ ರಲ್ಲಿ ಗೊಟಕನಾಪುರದಲ್ಲಿ ನಡೆದ ಮತಬಾಂಧವರ ಮಹಾಸಭೆಯ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ತರುವಾಯ ನಮ್ಮ ಸಂಘದ ಬೆಳವಣಿಗೆಗೆ ಅವಶ್ಯವಾಗಿ ಬೇಕಾದ ಹಣ ಶೇಖರಿಸುವಲ್ಲಿ ಇರುವ ಪಾತ್ರ ಹಿರಿದು. ಗಾಡಿಯಲ್ಲಿ ಊರು ಊರು ತಿರುಗಿ ಹಣ ಶೇಖರಿಸಿದರು. ೧೯೬೯ ರಲ್ಲಿ ಸಂಘದ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ತುಮಕೂರಿನಲ್ಲಿ ನಮ್ಮ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮತ್ತು ಬಟವಾಡೆ ಗ್ರಾಮದಲ್ಲಿಯ ನಿವೇಶನವನ್ನು ಕೊಳ್ಳುವುದರಲ್ಲಿಯೂ ಸಂಘದ ಪದಾಧಿಕಾರಿಗಳು ಮತ್ತು ತುಮಕೂರಿನ ಪ್ರಮುಖ ವ್ಯಕ್ತಿಗಳಾದ ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು, ಶ್ರೀ ಬಿ.ಕೆ. ಚಿಕ್ಕಣ್ಣನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರಿಗೆ ಸಹಕಾರ ಕೊಟ್ಟು ಕೆಲಸ ಸಾದಿಸಿದರು.
ಜಿ.ವೆಂಕಟಶಾಮಿಗೌಡರು, ಗೊಟಕನಾಪುರ : ಇವರು ಗೌರಿಬಿದನೂರು ತಾಲ್ಲೂಕು ಗೊಟಕನಾಪುರ ಗ್ರಾಮದ ಶ್ರೀಮತಿ ಅಕ್ಕಯ್ಯಮ್ಮ ಮತ್ತು ಶ್ರೀ ಅಣ್ಣಯ್ಯಪ್ಪನವರ ಜೇಷ್ಠ ಪುತ್ರರಾಗಿ ಜನಿಸಿದರು. ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿದರು. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ತರಗತಿಯವರೆಗೂ ಓದಿದರು. ಇವರು ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಪ್ರಜಾಪ್ರತಿನಿಧಿ ಸಭೆಯ ಗೌರಿಬಿದನೂರು ತಾಲ್ಲೂಕಿನಿಂದ ಆಯ್ಕೆಯಾಗಿದ್ದರು. ಆಚಾರ್ಯ ಪಾಠಶಾಲೆಯಲ್ಲಿ ಕಾರ್ಯದರ್ಶಿಯಾಗಿ ೧೫ ವರ್ಷ ಸೇವೆ ಸಲ್ಲಿದ್ದಾರೆ. ಗೌರಿಬಿದನೂರು ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಶ್ರಮಿಸಿ, ಅದರ ಉಪಾಧ್ಯಕ್ಷರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದಾರೆ. ೧೯೩೧ ರಿಂದಲೂ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸದಸ್ಯರಾಗಿ ಪಾಲ್ಗೊಂಡು ೧೯೪೩ ರಿಂದ ೧೯೬೫ ರವರೆಗೂ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ೧೯೬೫ ರಲ್ಲಿ ದೈವಾದೀನರಾದರು.
ಮಾಕಳಪ್ಪ ನವರು ಬಿ.ಎ. ಬೆಂಗಳೂರು :ಮಾಕಳಪ್ಪನವರು ಮುನಿಯಪ್ಪನವರ ಮಗನಾಗಿ ಜನಿಸಿದರು. ಬಿ.ಎ ಪದವಿಯನ್ನು ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿ ಗುಮಾಸ್ತರಾಗಿ ಸೇರಿ ೧೯೧೪ ರಲ್ಲಿ ಅಮಲ್ದಾರರಾಗಿ ಬಡ್ತಿ ಹೊಂದಿದರು (ಹರಿಹರ), ನಮ್ಮ ಜನಾಂಗದಲ್ಲಿ ಮೊದಲ ತಾಲ್ಲೂಕು ಅಧಿಕಾರಿ. ಹಿಂದೆ ಬ್ರಿಟೀಷರ ಕಾಲದಲ್ಲಿ ಬಹಳ ಜಬರ್ ದಸ್ತಿನಿಂದ ಈ ಆಡಳಿತ ನಡೆಸಿದರು. ಬೆಂಗಳೂರಿನಲ್ಲಿದ್ದ ನಮ್ಮ ಹಿರಿಯರಲ್ಲಿ ಇವರು ಒಬ್ಬರು. ಈಗಲೂ ಇವರೂ ವಾಸವಾಗಿದ್ದ ಸಣ್ಣ ಬೀದಿಗೆ “ಮಾಕಳಪ್ಪ ಬೀದಿ” ಎಂದು ಹೆಸರಿದೆ.
ಎ. ಮರಿಯಪ್ಪ ಬಿ.ಎ, ಬೆಂಗಳೂರು :ದಿ. ಮಾಕಳಪ್ಪ ನವರ ಮಗನಾಗಿ ೧೯೦೧ ರಲ್ಲಿ ಜನಿಸಿದರು. ಬಿ.ಎ ಪದವಿ ನಂತರ ಸರ್ಕಾರಿ ಹುದ್ದೆಗೆ ಸೇರಿ ೧೯೩೮ ಅಮಲ್ದಾರರಾಗಿ ಬಡ್ತಿ ಹೊಂದಿದರು. ನಂತರ ಅಸಿಸ್ಟೆಂಟ್ ಕಮೀಷನರಾಗಿ ಬಡ್ತಿ ಹೊಂದಿ ತುಮಕೂರು, ಕೋಲಾರ. ಹಾಸನ ಮುಂತಾದೆಡೆಯಲ್ಲಿ ಪ್ರೈವೇಟ್ ಸೆಕ್ರಟರಿಯಾಗಿ ಕೆಲಸ ಮಾಡಿದರು. ನಿವೃತ್ತಿಯಾದ ನಂತರ ಬೆಂಗಳೂರು ಯೂನಿವರ್ಸಿಟಿ ಸೆನೆಟ್ ಮೆಂಬರಾಗಿ ಸೇವೆ ಸಲ್ಲಿಸಿದ್ದಾರೆ. ನಮ್ಮ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಗಣ್ಯ ವ್ಯಕ್ತಿಗಳಲ್ಲಿ ಇವರು ಒಬ್ಬರು. ೧೯೩೧ ರಿಂದ ೧೯೪೩ ರ ವರೆಗೆ ಸಂಘದ ಕಾರ್ಯದರ್ಶಿಯಾಗಿಯೂ ೧೯೬೯ ರಲ್ಲಿ ಸಂಘದ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಘದ ಪುರೋಭಿವೃದ್ಧಿಗೆ ಆದಿಯಿಂದಲೂ ದುಡಿದ ಮಹನೀಯರಲ್ಲಿ ಇವರು ಒಬ್ಬರು.
ಬಿ.ಕೆ. ಶಿವಲಿಂಗಪ್ಪ ಬಿ.ಇ: ಎಂಎಸ್ಸಿ, ಎಂಐಎಸ್ಸಿ:ಎಂಐಇ. ಬೆಂಗಳೂರು : ಬೆಂಗಳೂರು ಕಾಳಪ್ಪನವರ ಪುತ್ರರಾಗಿ ೧೯೨೨ ರಲ್ಲಿ ಬೆಂಗಳೂರಲ್ಲಿ ಜನಿಸಿದರು. ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ವಿದ್ಯಾರ್ಜನೆ ಮಾಡಿ ಬಿ.ಇ. ಪದವೀಧರರಾದರು. ನಮ್ಮ ಸಮಾಜದಲ್ಲಿ ಇವರೇ ಬಿ.ಇ ಪದವೀಧರರಲ್ಲಿ ಮೊದಲನೆಯವರು. ಬಿ.ಇ ಪದವಿ ನಂತರ ಸರ್ಕಾರದ ಪಿ.ಡಬ್ಲುಡಿ ಇಲಾಖೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರಾಗಿ ಸೇರಿದರು. ನಂತರ ಎಕ್ಸಿಕ್ಯೂಟಿವ್ ಇಂಜಿನಿಯರಾಗಿ ಬಡ್ತಿ ಹೊಂದಿ, ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ, ಎಂ.ಎಸ್, ಪದವೀಧರರಾಗಿ ಹಿಂತಿರುಗಿದರು. ನಂತರ ಹಾಸನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೋಫೆಸರ್ ಮತ್ತು ಪ್ರಿನ್ಸಿಪಾಲರಾಗಿ ೫ ವರ್ಷ ಕಾಲ ಸೇವೆ ಸಲ್ಲಿಸಿದರು. ಹಟ್ಟಿ ಬಂಗಾರದ ಗಣಿಯಲ್ಲಿಯೂ ಸಹ ಸೇವೆ ಸಲ್ಲಿಸಿದರು. ಸೂಪರಿಡೆಂಟ್ ಇಂಜಿನೀಯರ್‌ರಾಗಿ ಬಡ್ತಿ ಹೊಂದಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಇಂಜಿನಿಯರಿಂಗ್ ಮೆಂಬರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸರ್ಕಾರದ ಸೇವಾವಧಿಯಲ್ಲಿ ಮತ್ತು ತಾವು ನಿವೃತ್ತಿ ಹೊಂದಿದ ಮೇಲೂ ನಮ್ಮ ಸಂಘದ ಪುರೋಭಿವೃದ್ಧಿಗೆ ಬಹಳವಾಗಿ ಶ್ರಮಿಸಿದ್ದಾರೆ. ಸಂಘದ ವತಿಯಿಂದ ಕಟ್ಟಿದ ಮೊದಲ ವಿದ್ಯಾರ್ಥಿ ನಿಲಯದ ಕಟ್ಟಡ ಮತ್ತು ಸಭಾಂಗಣ ನಿರ್ಮಿಸುವಲ್ಲಿ ಇವರು ವಹಿಸಿದ ಪಾತ್ರ ಸ್ಮರಣೀಯ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮೊದಲಿಗರಲ್ಲಿ ಇವರೂ ಒಬ್ಬರು. ಇವರ ಸೇವೆಯನ್ನು ಸಂಘವು ಕೃತಜ್ಞತಾ ಪೂರ್ವಕವಾಗಿ ಇಲ್ಲಿ ಸ್ಮರಿಸುತ್ತದೆ.
ಎ. ಗೋವಿಂದಪ್ಪ, ಆವಿನಕುಂಟೆ : ಮಡಕಶಿರಾ ತಾಲ್ಲೂಕು ಆವಿನಕುಂಟೆ ಗ್ರಾಮದಲ್ಲಿ ದಿ. ನಾಗಮ್ಮ ಮತ್ತು ದಿ. ಲಕ್ಕಪ್ಪನವರ ಮಗನಾಗಿ ಶ್ರೀ ಮಂಡಿ ಹರಿಯಣ್ಣ ನವರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿ, ಮೈಸೂರು ಬ್ಯಾಂಕ್‌ನಲ್ಲಿ ಕೆಲಸ ಮಾಡಿ ನಿವೃತ್ತರಾದರು. ನಮ್ಮ ಸಂಘದ ಪುರೋಭಿವೃದ್ಧಿಗೆ ಇವರು ಸಲ್ಲಿಸಿದ ಸೇವೆ ಅಪಾರ. ಸಂಘದ ಖಜಾಂಚಿಯಾಗಿ ೧೯೮೧-೮೨ ರಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಘದ ಕಾರ್ಯ ಚಟುವಟಿಕೆಯಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡಿದ ಮೊದಲಿಗರಲ್ಲಿ ಇವರೂ ಒಬ್ಬರು. ಸಂಘದ ಅಭಿವೃದ್ಧಿಗೆ ಇವರ ಕಾಳಜಿ ಅಪಾರ. ಬಹಳ ಚರ್ಷಕಾಲ ಕಾರ್ಯಕಾರಿ ಸಮಿತಿಯಲ್ಲಿ ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ್ದಾರೆ.
ಬಿ.ಎನ್ ಚಂದ್ರಶೇಖರ್ ಬಿ.ಎ. ಬೆಂಗಳೂರು : ಬಿ.ಎನ್ ಚಂದ್ರಶೇಖರ್‌ರವರು ಬೆಂಗಳೂರಿನ ಬಿ.ಕೆ ನಂಜುಂಡಯ್ಯ ಮತ್ತು ಶ್ರೀಮತಿ ಪುಟ್ಟಮ್ಮ ರವರ ಪುತ್ರರಾಗಿ ೧೪-೧೨-೧೯೧೮ ರಂದು ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದರು. ಎಸ್ ಬಿ.ಎಂಲ್ಲಿ ಕೆಲಸಕ್ಕೆ ಸೇರಿದರು. ನಂತರ ಬೆಂಗಳೂರು, ಮೈಸೂರು, ಮತ್ತು ತುಮಕೂರಿನಲ್ಲಿ ಸರ್ಕಾರಿ ಪ್ರೊಮೊಟೆಡ್ ಮೇನೇಜರ್ ಆಗಿ ಆಯ್ಕೆಯಾದರು. ಇವರು ತುಮಕೂರಿನ ವಿದ್ಯಾರ್ಥಿನಿಲಯದಲ್ಲಿ ೧೯೭೯-೧೯೮೪ ರ ವರೆಗೆ ವಾರ್ಡನ್ ಆಗಿ ಕೆಲಸ ನಿರ್ವಸಿದ್ದರು. ಇವರು ದಿ. ಮಂಡಿ ಹರಿಯಣ್ಣ ವಿದ್ಯಾರ್ಥಿನಿಲಯದಲ್ಲಿ ಅಧ್ಯಕ್ಷರಾಗಿದ್ದರು. ಇವರು ೧೯೮೯ ರಲ್ಲಿ ನಿಧನರಾದರು.
ಬಿ.ಕೆ ರಾಮಯ್ಯ ಬಿ.ಇ, ಎಂಎಸ್‌ಸಿಇ. ಪಿಹೆಚ್‌ಡಿ. : ದಿ.ಕೆಂಪಮ್ಮ ಮತ್ತು ದಿ. ಕೆಂಪರಾಮಯ್ಯನವರ ಮೊದಲನೇ ಮಗನಾಗಿ ಮಾಗಡಿ ತಾಲ್ಲೂಕು ಬಿಸ್ಕೂರಿನಲ್ಲಿ ೮-೦೯-೧೯೨೧ ರಲ್ಲಿ ಜನಿಸಿದರು. ಇವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಇವರ ತಾಯಿಯನ್ನು ಕಳೆದುಕೊಂಡರು. ನಂತರ ಇವರು ತನ್ನ ಚಿಕ್ಕಪ್ಪ ನಾದ ಸೊಂಡೇಕೊಪ್ಪದ ದಿ. ಪಾಳ್ಯದ ವೀರಪ್ಪ ನವರ ಮನೆಯಲ್ಲಿ ಬೆಳೆದರು.
ಪುಟ್ಟಹರಿಯಮ್ಮ ನವರು, ಕುದೂರು : ದಿ. ಶ್ರೀಮತಿ ಸಾಕಮ್ಮ ಮತ್ತು ದಿ. ಶ್ರೀ ನಂಜುಂಡಪ್ಪನವರ ಪುತ್ರಿಯಾಗಿ ಕುದೂರಿನಲ್ಲಿ ಜನಿಸಿದರು. ತಮ್ಮ ೧೪ ನೇ ವಯಸ್ಸಿನಲ್ಲಿ ಮದುವೆಯಾದರು. ತಮ್ಮ ಪತಿಯು ಆ ವರ್ಷವೇ ತೀರಿಕೊಂಡರಾದರು ದೃತಿಗೆಡದೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ, ಆಗಿನ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ವಿದ್ಯಾ ಇಲಾಖೆಯಲ್ಲಿ ಉಪಾದ್ಯಾಯ ವೃತ್ತಿಯನ್ನು ಅವಲಂಬಿಸಿ ಬೆಂಗಳೂರು, ತುಮಕೂರು ಮತ್ತು ಶಿವಮೊಗ್ಗ ಊರುಗಳಲ್ಲಿ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೪೪ ರಲ್ಲಿ ದೈವಾಧೀನರಾದರು. ಇವರು ತಮ್ಮ ಉಪಾಧ್ಯಾಯ ವೃತ್ತಿಯಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳಿಗನುಗುಣವಾಗಿ ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯಕ್ಕೆ ತಮ್ಮ ಸ್ವಂತ ಹಣದಿಂದ ಉಚಿತವಾಗಿ ನೀರಿನ ಕೊಳಾಯಿ ಮತ್ತು ವಿದ್ಯುತ್ ದೀಪದ ವ್ಯವಸ್ಥೆ ಮಾಡಿಸಿಕೊಟ್ಟರು. ಅಲ್ಲದೆ ಕುದೂರಿನಲ್ಲಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಹೆಂಗಸರ ಆಸ್ಪತ್ರೆಯನ್ನು ಸಹ ಕಟ್ಟಿಸಿದ್ದಾರೆ. ಬೆಂಗಳೂರಿನ ಅಶಕ್ತ ಪೋಷಕ ಸಭೆಯ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಸಹ ಕಟ್ಟಿಸಿಕೊಟ್ಟಿದ್ದಾರೆ. ನಮ್ಮ ಮತದ ವೊದ್ಯಾರ್ಥಿಗಳಲ್ಲಿ ಹೆಚ್ಚಿಗೆ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಕೊಡುವಂತೆ ವಿದ್ಯಾ ಇಲಾಖೆಯಲ್ಲಿ ಪುದಿವಟ್ಟು ಹಣ ಇಟ್ಟು ಹೋಗಿದ್ದಾರೆ. ಇವರ ಸೇವೆ ನಮಗೆ ಅತ್ಯಲ್ಪವಾಗಿ ಕಂಡರೂ ಇರ ಮಹತ್ವ ಹೆಚ್ಚಿನದು.
ಎಂ. ಚಿಕ್ಕಣ್ಣ ಬಿಎಸ್ಸಿ, ಕಂಬಾಳ್ : ದಿ.ಕಂಬಾಳ ಮಲ್ಲಯ್ಯನವರ ಪುತ್ರರಾಗಿ ಜನಿಸಿದರು. ಶ್ರೀ ಮಂಡಿಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಬಿ.ಎಸ್ ಸಿ ಪದವೀಧರರಾದರು. ನಂತರ ಮೈಸೂರು ರಾಜ್ಯದ ಕಂಟ್ರೋಲರ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿ, ೦೧-೦೪-೧೯೫೦ ರಲ್ಲಿ ಭಾರತದ ಸರ್ಕಾರದ ಅಕೌಂಟೆಂಟ್ ಜನರಲ್ ಆಫೀಸು ಬೆಂಗಳೂರು ಇಲ್ಲಿ ತಾವು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಿದರು. ನಮ್ಮ ಸಂಘದ ಅಭಿವೃದ್ಧಿಗಾಗಿ ಈಗ ಹಲಿ ಇರುವ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಅವರು ಸಲ್ಲಿಸಿದ ಸೇವೆ ಅಪಾರ, ಸಂಘದ ಕೆಲಸಕ್ಕಾಗಿ ಹಣ ಶೇಖರಿಸುವುದರಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಆದಿಯಿಂದಲೂ ಸಂಘದ ಲೆಕ್ಕ ಪತ್ರಗಳನ್ನು ಪರಿಶೀಲಿಸಿ ಸರಿಯಾದ ರೀತಿಯಲ್ಲಿ ಲೆಕ್ಕವಿಟ್ಟು ಸಂಘದ ಚಟುವಟಿಕೆಗಳು ಸುಗಮವಾಗಿ ನಡೆಯಲು ನೆರವಾದರು. ಸಂಘದ ಕಾರ್ಯಕಾರಿ ಸಮಿತಿಯಲ್ಲಿದ್ದುಕೊಂಡು ಸೂಕ್ತ ಸಲಹೆ ಕೊಡುತ್ತಿದ್ದರು. ೧೯೮೩ ರಲ್ಲಿ ಸಂಘದ ಉಪಾಧ್ಯಕ್ಷರಾಗಿಯೂ ಸಹ ಕೆಲಸ ಮಾಡಿದ್ದಾರೆ.
ಎಂ. ವೆಂಕಟಪ್ಪ , ಬೆಂಗಳೂರು :ಶ್ರೀಮತಿ ನರಸಮ್ಮ ಮತ್ತು ಸಂಜೀವಪ್ಪನವರ ಮಗನಾಗಿ ೦೪-೦೭-೧೯೧೫ ರಲ್ಲಿ ಮಾದನಹಳ್ಳಿಯಲ್ಲಿ ಜನಿಸಿದರು. ಶ್ರೀ ಮಂಡಿಹರಿಯಣ್ಣ ನವರ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡಿ ೧೯೩೯ ಇಂಜನಿಯರಿಂಗ್ ಡಿಪ್ಲೋಮಾ ಪಡೆದರು. ಹಿಂದೂಸ್ಥಾನ್ ವಿಮಾನ ಕಾರ್ಖಾನೆಯಲ್ಲಿ ಸೇರಿ ಸೇವೆ ಸಲ್ಲಿಸಿ ೧೯೭೫ ರಲ್ಲಿ ನಿವೃತ್ತಿ ಹೊಂದಿದರು. ನಮ್ಮ ಸಂಘದ ಅಭೀವೃದ್ಧಿಗೆ ಸತತವಾಗಿ ದುಡಿದು ಸೇವೆ ಸಲ್ಲಿಸಿದ್ದಾರೆ.೧೯೩೪ ರಲಲಿ ಸಾದು ಮತದ ಯುವಕ ಸೇವಾ ಸಮಾಜವನ್ನು ಸ್ಥಾಪಿಸಿದರು. ದಿ. ಶ್ರೀಮಾನ್ ಎಂ.ಜೆ ಲಿಂಗಣ್ಣನವರು ಅಧ್ಯಕ್ಷರಾಗಿಯೂ ಶ್ರೀ. ಕೆ. ಶ್ರೀ ಕಂಠಪ್ಪನವರು ಉಪಾರ್ಧಯಕ್ಷರಾಗಿಯೂ ಶ್ರೀಮಾನ್ ವೆಂಕಟಪ್ಪ ಹಾಗೂ ಶ್ರೀ. ಎಂ.ಎಸ್ ಮಲ್ಲಯ್ಯನವರು ಕಾರ್ಯದರ್ಶಿಗಳಾಗಿದ್ದುಕೊಂಡು ಸಂಘದ ಹಿರಿಯರು ಕೈಗೊಳ್ಳುವ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶವನ್ನು ಈ ಯುವಕ ಸೇವಾ ಸಮಾಜದ ಗುರಿಯನ್ನಾಗಿಟ್ಟುಕೊಂಡಿತ್ತು.
ಆರ್ ಚಿಕ್ಕಣ್ಣ :
ಎಂ.ಕಪ್ಪಣ್ಣ ಎಂ.ಎಸ್ಸಿ, ಮಾದನಹಳ್ಳಿ : ದಿ. ಶ್ರೀಮತಿ ಸಂಜೀವಮ್ಮ ಮತ್ತು ದಿ. Wಮ್ಮಪ್ಪನವರ ಮಗನಾಗಿ ೧೯೧೯ ರಲ್ಲಿ ಮಾದನಹಳ್ಳಿಯಲ್ಲಿ ಜನಿಸಿದರು. ಶ್ರೀ. ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ೧೯೪೬ ರಲ್ಲಿ ಬಿ.ಎಸ್ಸಿ ಅನರ‍್ಸ್ ಪದವೀಧರರಾದರು. ೧೯೪೭ ರಲ್ಲಿ ಲೆಕ್ಚರರ್ ಆಗಿ ಸೇರಿ ೧೯೫೪ ರಲ್ಲಿ ಎಂ.ಎಸ್.ಸಿ ಪದವೀಧರರಾದರು. ನಂತರ ೧೯೬೯ ರಲ್ಲಿ ಪಿ.ಇ.ಎಸ್ ಕಾಲೇಜು ಮಂಡ್ಯದಲ್ಲಿ ಪ್ರಿನ್ಸಿಪಾಲರಾಗಿ ೧೯೭೫ ರವರೆಗೂ ಸೇವೆ ಸಲ್ಲಿಸಿದರು. ೧೯೭೫ ರಿಂದ ೮೨ ರವರೆಗೂ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ೧೯೮೨ -೮೩ ರವರೆಗೂ ವಿವೇಕಾನಂದ ಕಾಲೇಜು ಬೆಂಗಳೂರು. ಇಲ್ಲಿ ಕೆಲಸ ಮಾಡಿ ನಿವೃತ್ತರಾದರು. ಶ್ರೀ ಮಂಡಿ ಹರಿಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಭಿವೃದ್ಧಿಗೆ ಶ್ರಮಿಸಿದರು. ೧೯೮೩ ರಲ್ಲಿ ನಿಧನರಾದರು.
ಪ್ರೋ.ಜಿ ರಂಗಣ್ಣ ಬೆಂಗಳೂರು :
ಬಿ.ಎಂ. ಅಪ್ಪಾಜಿ ಬೆಂಗಳೂರು :ಶ್ರೀಮತಿ ಗೌರಮ್ಮ ಮತ್ತು ಶ್ರೀ ಮುದ್ದಪ್ಪನವರ ಮಗನಾಗಿ ೧೩-೦೪-೧೯೨೯ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ೧೯೫೨ ರಲ್ಲಿ ಬಿ.ಎಸ್ಸಿ ಪದವಿಧರರಾದರು. ನಮ್ಮ ಜನಾಂಗದಲ್ಲಿ ಪತ್ರಿಕೋದ್ಯಮದಲ್ಲಿ ಕೈಯಾಡಿಸಿದವರು ಇವರೇ ಮೊದಲಿಗರು. ಡೆಕ್ಕನ್‌ಹೆರಾಲ್ಡ್ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇರಿ ಸುದ್ದಿ ಸಂಪಾದಕರಾಗಿ ೧೯೯೧ ರಲ್ಲಿ ನಿವೃತ್ತರಾದರು.
ಸಾ.ನ. ಲಕ್ಷ್ಮಣಗೌಡ ಎಂ.ಎ. ಮಂಚೇನಹಳ್ಳಿ : ಗೌರಿಬಿದನೂರು ತಾಲ್ಲೂಕು ಸಾದಾರ‍್ಲಳ್ಳಿಯಲ್ಲಿ ದಿ. ಶ್ರೀ ನಂಜುಂಡಗೌಡರ ತೃತೀತ ಪುತ್ರರಾಗಿ ೧೯೩೭ ರಲ್ಲಿ ಜನಿಸಿದರು. ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಕಾರ್ಯದರ್ಶಿಯಾಗಿ ಹಾಗೂ ಮಂಚೇನಹಳ್ಳಿ ಕಿರಿಯ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕವನ, ಹರಟೆ, ವಿಮರ್ಶೆ ಲೇಖನಗಳು ಹಾಗೂ ಇಂಗ್ಲೀಷಿನಿಂದ ತೆಲುಗು ಮತ್ತು ಹಿಂದಿಯಿಂದ ಅನುವಾದಿಸಲ್ಪಟ್ಟ ಲೇಖನಗಳು ಅಪಾರ ಮನ್ನಣೆಪಡೆದಿದೆ. ಅವರ “ತರಲೆ ಹರಟೆ” ಗೆ ಅಖಿಲ ಕರ್ನಾಟಕ “ಹರಟೆ”ಗಳ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಬಂದಿದೆ. ಅನಿರೀಕ್ಷಿತ ಎಂಬ ಕತೆಯನ್ನು ಬರೆದಿರುವ ಇವರು “ಗಾಂಧಿ”, “ಓ”, ಎಸ್.ಎಸ್.ಸಿ. ವಿದ್ಯಾರ್ಥಿ “ನಲ್ಲ ನಲ್ಲೆಯ ಸಂವಾದ”,“ಕೊಡಗೂಸಿ ಗೆಳೆಯನಿಗೆ”ಇವು ಕನ್ನಡದಲ್ಲಿ ಇವರು ಬರೆದಿರುವ ಕವನಗಳು.
ಬಿ.ಜಿ. ಅಣ್ಣಯ್ಯನವರು. ಬಿ.ಎ, ಎಲ್.ಎಲ್.ಬಿ. ಬೆಂಗಳೂರು : ದಿ. ಶ್ರೀ ಬೊಮ್ಮಲಿಂಗಣ್ಣ ಮತ್ತು ದಿ. ಶ್ರೀಮತಿ ಬಸಮ್ಮನವರ ಪುತ್ರರಾಗಿ ೧೯೧೯ ರಲ್ಲಿ ಜನಿಸಿದರು. ೧೯೪೩ ರಲ್ಲಿ ಬಿ.ಎ. ಪದವೀಧರರಾಗಿ ೧೯೪೫ ರಲ್ಲಿ ಕಾಶಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ನಮ್ಮ ಜನಾಂಗದ ಮೊದಲನೇ ಕಾನೂನು ಪದವೀಧರರು. ೧೯೪೭ ರಿಂದ ೧೯೫೮ ವರೆಗೆ ವಕೀಲರಾಗಿದ್ದು ೧೯೫೯ ರಲ್ಲಿ ಮೈಸೂರು ರಾಜ್ಯದ ಶ್ರೇಷ್ಠ ನ್ಯಾಯಾದೀಶರಿಗೆ ಆಪ್ತಕಾರ್ಯದರ್ಶಿಯಾದರು. ೧೯೬೨ ರಲ್ಲಿ ಶ್ರೇಷ್ಠ ನ್ಯಾಯಾಲಯದಲ್ಲಿ ಡೆಪ್ಯೂಟಿ ರಿಜಿಸ್ಟರ್ ಆಗಿ ೧೯೭೪ ರಲ್ಲಿ ನಿವೃತ್ತಿ ಹೊಂದಿದರು. ನಮ್ಮ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸಮಾಡಿ ಸಂಘದ ಸರ್ವತೋಮುಖ ಏಳಿಗೆಗಾಗಿ ದುಡಿದಿದ್ದಾರೆ.
ಸೋಮರಾಜು ಬಿ.ಎ, ಎಂ.ಬಿ.ಎ : ದಿ. ಶ್ರೀ ಗಂಗಣ್ಣ ನವರ ಪುತ್ರರಾಗಿ ೧೯೪೮ ರಲ್ಲಿ ಗುಡೇಮಾರನಹಳ್ಳಿಯಲ್ಲಿ ಜನಿಸಿದರು. ಮೆಕಾನಿಕಲ್ ಡಿಪ್ಲೋಮಾ ಪಡೆದು ನಂತರ ಬಿ.ಇ ಡಿಗ್ರಿ ಪಡೆದು ನಂತರ ಬಿ.ಇ ಡಿಗ್ರಿ ಪಡೆದು ಬಿ.ಇ.ಎಲ್ ನಲ್ಲಿ ಕೆಲಸಕ್ಕೆ ಸೇರಿದರು. ಅದೇ ಸಮಯದಲ್ಲಿ ಎಂ.ಬಿ,ಎ ಮಾಡಿ ಹಂತ ಹಂತವಾಗಿ ಬಡ್ತಿ ಹೊಂದಿ ಈಗ ಬಿ.ಇ.ಎಲ್‌ನ ಪಂಚಕುಲ (ಹರಿಯಾಣ) ಶಾಖೆಯಲ್ಲಿ ಕಂಪ್ಯೂಟರ್ ಸೆಂಟರ್‌ನ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಎಂ.ಸಿ ಚೌಡಪ್ಪ, ಬೆಂಗಳೂರು : ಶ್ರೀಮತಿ ಸಿದ್ದಮ್ಮ ಮತ್ತು ಮಠದ ಚೌಡಪ್ಪವರವ ಪುತ್ರರಾಗಿ ೧೬-೩-೧೯೧೭ ರಂದು ಜನಿಸಿದರು. ದಿ.ಶ್ರೀ ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿದರು. ಮೈಸೂರು ಸರ್ಕಾರದ ಇನ್ಸೂರೆನ್ಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿ ೧೯೫೬ ರಲ್ಲಿ ಎಲ್.ಐ.ಸಿಗೂ ವರ್ಗವಾಗಿ ನಿವೃತ್ತಿ ಹೊಂದುವವರೆಗೂ ಅಲ್ಲಿ ಸೇವೆ ಸಲ್ಲಿಸಿದ್ದರು. ನಮ್ಮ ಸಂಘದ ಉನ್ನತಿಗಾಗಿ ಮೊದಲಿನಿಂದಲೂ ದುಡಿದವರಲ್ಲಿ ಇವರೂ ಒಬ್ಬರು. ಮತ್ತು ಸಂಘದ ಖಜಾಂಚಿಯಾಗಿ ೧೯೭೯-೮೦, ಜಂಟಿಕಾರ್ಯದರ್ಶಿಯಾಗಿ ೧೯೮೧-೮೨ ಮತ್ತೆ ಖಜಾಂಚಿಯಾಗಿ ೧೯೮೩-೮೪ ಮತ್ತು ಕಾರ್ಯದರ್ಶಿಯಾಗಿ ೧೯೮೫ ರಿಂದ ೧೯೮೭ರವರೆಗೂ ಸೇವೆ ಸಲ್ಲಿಸಿದ್ದಾರೆ. ೧೯೯೩ ರಲ್ಲಿ ದೈವಾಧೀನರಾದರು.
ಎ.ಎಸ್.ಹನುಮಂತರಾಯಪ್ಪ, ಬಿ.ಎಸ್ಸಿಅರಸಾಪುರ : ಕೊರಟಗೆರೆ ತಾಲ್ಲೂಕು ಅರಸಾಪುರ ಗ್ರಾಮದಲ್ಲಿ ದಿ. ಶ್ರೀಮತಿ ಸಾಕಮ್ಮ ಮತ್ತು ದಿ. ಶ್ರೀ ಸಂಜೀವಗೌಡರವರ ಮಗನಾಗಿ ೧೯೨೨ರಲ್ಲಿ ಜನಿಸಿದರು. ದಿ.ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗಮಾಡಿ, ಬಿ.ಎಸ್ಸಿ ಪದವೀಧರರಾದರು.೧೯೪೯ ರಲ್ಲಿ ಅಕೌಂಟೆಂಟ್ ಜನರಲ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿ ೧೯೮೦ರಲ್ಲಿ ನಿವೃತ್ತಿ ಹೊಂದಿದರು. ನಮ್ಮ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸತತವಾಗಿ ಭಾಗವಹಿಸುತ್ತಿರುವವರು.ಸುಮಾರು ಹತ್ತು ವರ್ಷಗಳ ಕಾಳ ೧೯೮೧ರಿಂದ೧೯೯೦ರವರೆವಿಗೂ ಸಂಘದ ಲೆಕ್ಕ ಪರಿಶೋಧಕರಾಗಿ ಕೆಲಸ ಮಾಡಿದ್ದಾರೆ.
ಜಿ,ರಾಮಚಂದ್ರ ಎಮ್.ಎಸ್ಸಿ, ಶ್ರಾವಂಡನಹಳ್ಳಿ : ಇವರು ಶ್ರಾವಂಡನಹಳ್ಳಿ ದಿ.ಗಂಗೇಗೌಡರ ಪುತ್ರರಾಗಿ ಜನಿಸಿದರು.ದಿ.ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗಮಾಡಿ ಎಮ್.ಎಸ್ಸಿ ಪದವೀಧರರಾದರು. ಸೆಂಟ್ರಲ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಸೇರಿ ನಿವೃತ್ತರಾಗುವ ಮುಂಚೆ ರೀಡರ್ ಆಗಿ ಬಡ್ತಿ ಹೊಂದಿದರು. ಸಂಘದ ಕಾರ್ಯಕಲಾಪಗಳಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡಿದವರು.
ಕಾಕಿ ಮಲ್ಲಯ್ಯ ಕಾಕಿ : ದಿ.ಕಾಕಿಮಲ್ಲಯ್ಯ ಮತ್ತು ಚೌಡಮ್ಮನವರ ಪುತ್ರರಾಗಿ ೧೯೦೨ರಲ್ಲಿ ಕೊರಟಗೆರೆಯಲ್ಲಿ ಜನಿಸಿದರು. ಕೊರಟಗೆರೆ ಪುರಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಮ್ಮ ಜನಾಂಗದ ಏಳ್ಗೆಗೆ ಕೊರಟಗೆರೆ ತಾಲ್ಲೂಕಿನಲ್ಲಿ ದುಡಿದು ಅಲ್ಲಿ ಚಿರಪರಿಚಿತರಾದ ವ್ಯಕ್ತಿ ೧೧-೧೨-೧೯೮೯ ರಲ್ಲಿ ದೈವಾಧೀನರಾದರು. ಇವರು ಸುಜ್ಞಾನ ನಿಕೇತನವೆಂಬ ಶಾಲೆಯನ್ನು ಸ್ಥಾಪಿಸಿ ಸಮಾಜಸೇವೆಯಲ್ಲಿ ನಿರತರಾಗಿದ್ದು. ೧೧-೧೨-೧೯೮೯ ರಲ್ಲಿ ದೈವಾಧೀನರಾದರು.
ಗಂಗಾಧರಯ್ಯ, ಪಿ.ಹೆಚ್.ಡಿ : ಕೊರಟಗೆರೆ ತಾಲ್ಲೂಕು ಆಳ್ಳಾಲ ವೆಂಕಟಾಪುರ ಗ್ರಾಮದಲ್ಲಿ ದಿ.ತಿಮ್ಮಪ್ಪನವರ ಪುತ್ರರಾಗಿ ಜನಿಸಿದರು. ದಿ.ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ಬಿ.ಇ ಪದವೀಧರರಾದರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಇಂಜಿನಿಯರಾಗಿ ಕೆಲಸ ಮಾಡಿ ನಂತರ ಟಾಡಾ ಇನ್ಸ್‌ಟಿಟ್ಯೂಟ್‌ನಲ್ಲಿ ಎಂ.ಇ. ಮತ್ತು ಪಿ.ಹೆಚ್ ಡಿ ಪದವಿ ಐ.ಐ.ಟಿ ಕಾಸ್ಪುರದಲ್ಲಿ ಲೆಕ್ಚರರಾಗಿ ಸೇರಿದರು. ಸದ್ಯದಲ್ಲಿ ಕಾನ್ಪುರ ಇನ್ಸ್‌ಟಿಟ್ಯೂಟ್‌ನಲ್ಲಿ ಪ್ರೋಫೆಸರಾಗಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ಪತ್ರಪ್ಪ ನೀಲಕಂಠಯ್ಯ ಬಿ.ಇ (ಸಿವಿಲ್) ಎಂಇ(ಪಿಹೆಚ್) ಎಮ್‌ಎಎಸ್‌ಸಿಇ. : ಇವರು ಲೆ||. ಶ್ರೀ ಪತ್ರಪ್ಪ ಮತ್ತು ಶ್ರೀಮತಿ ಅಕ್ಕಯ್ಯಮ್ಮನವರ ಎರಡನೇ ಪುತ್ರರಾಗಿ ಅತ್ತಿಬೆಲೆಯಲ್ಲಿ ಜನಿಸಿದರು. ಇವರು ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರು ಬೆಂಗಳೂರಿನ ಸಿಟಿ ಕಾರ್ಪೊರೇಷನ್‌ನಲ್ಲಿ ಜೂನೀಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡರು.
ಪಿ.ರಾಮಯ್ಯ, ಐ.ಡಿ.ಡಿ, ಬೆಂಗಳೂರು : ದಿ. ಶ್ರೀ ಎಂ.ಪಾಪಯ್ಯನವರ ಪುತ್ರರಾಗಿ ೧೯೨೯ ರಲ್ಲಿ ಜನಿಸಿದರು. ಇಂಡಿಯನ್ ಡೈರಿ ಡಿಪ್ಲಮಾ ಪಡೆದು ನ್ಯಾಷನಲ್ ಡೈರಿ ರೀಸರ‍್ಟ್ ಇನ್‌ಸ್ಟಿಟ್ಯೂಟ್ ನಲ್ಲಿ ವಿಶೇಷ ತರಬೇತಿ ಪಡೆದು, ನ್ಯಾಷನಲ್ ಡೈರಿ ರೀಸರ‍್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಟೆಕಿಕಲ್ ಆಗಿ ೧೯೮೯ ರವರೆಗೂ ಸೇವೆಸಲ್ಲಿಸಿದ್ದಾರೆ. ಇವರು ಉತ್ತಮ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ರಾಷ್ಟಾಧ್ಯಕ್ಷರ ಪದಕವನ್ನು ಕೊಟ್ಟು ಗೌರವಿಸಿದ್ದಾರೆ.
ಎಮ್. ಸಂಜೀವಯ್ಯನವರು, ಬಿ.ಎ, ಪುಟ್ಟಯ್ಯನಗ್ಹಾರ : ಇವರು ೧೯೦೦ ಇಸ್ವಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಪುಟ್ಟಯ್ಯನ ಅಗ್ರಹಾರದಲ್ಲಿ ಜನಿಸಿದರು. ದಿ. ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡಿ ಬಿ.ಎ ಪದವೀಧರರಾಗಿ ಮೈಸೂರು ಜಿಲ್ಲಾ ಬೋರ್ಡ ಕಛೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆಸಲ್ಲಿಸಿದ್ದಾರೆ. ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಎನ್ ರೇವಣ್ಣ, ಬಿಸ್ಕೂರು : ಮಾಗಡಿ ತಾಲ್ಲೂಕು ಬಿಸ್ಕೂರು ಗ್ರಾಮದ ದಿ. ಶ್ರೀಮತಿ ನಂಜಮ್ಮ ಮತ್ತು ಚಿಕ್ಕಣ್ಣನವರ ಪುತ್ರರಾಗಿ ೧೯೨೩ರಲ್ಲಿ ಜನಿಸಿದರು. ದಿ. ಶ್ರೀ.ಮಂಡಿಹರಿಯಣ್ಣನವರ ವಿದ್ಯಾರ್ಥಿ ೦ ನಿಲಯದಲ್ಲಿದ್ದುಕೊಂಡು ವಿದ್ಯಾರ್ಜನೆ ಮಾಡಿದರು. ; ೧೯೪೮ರಲ್ಲಿ ರಾಜ್ಯದ ಅಕೌಂಟ್ಸ್ ಡಿಪಾರ್ಟಮೆಂಟ್‌ನಲ್ಲಿ ಜೂನಿಯರ್ ಆಡಿಟರ್ ಆಗಿ ಕೆಲಸಕ್ಕೆ ಅಕೌಂಟ್ಸ್ ಸೂಪರಿಡೆಂಟ್ ಆಗಿ ನಿವೃತ್ತಿ ಹೊಂದಿದರು. ನಮ್ಮ ಸಂಘದ ಚಟುವಟಿಕೆಗಳಲ್ಲಿಯೂ ಸತತವಾಗಿ ಭಾಗವಹಿಸುತ್ತಾ ಬಂದಿದ್ದಾರೆ. ೧೯೭೯ -೮೦ ಲ್ಲಿ ಕಾರ್ಯದರ್ಶಿಯಾಗಿಯೂ, ೧೯೮೪-೮೯-೯೦ರಲ್ಲಿ ಕೋಶಾಧ್ಯಕ್ಷರಾಗಿಯೂ, ಮತ್ತು ಅನೇಕ ವರ್ಷಗಳ ಕಾಲ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ, ಈಗಲೂ ಸಹ ಸಂಘದ ಎಲ್ಲಾ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಕೆ.ಸಿ ರಾಮಯ್ಯ. ಕುಂದಿಹಳ್ಳಿ : ಗೌರಿಬಿದನೂರು ತಾಲ್ಲೂಕು ಕುಂದಿಹಳ್ಳಿ ಗ್ರಾಮದ ದಿ. ಶ್ರೀ ಚಿಕ್ಕೇಗೌಡ ಮತ್ತು ದಿ.ಶ್ರೀಮತಿ ಗೌರಮ್ಮನವರ ಪುತ್ರರಾಗಿ ೧೯೨೦ ರಲ್ಲಿ ಜನಿಸಿದರು. ದಿ.ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ನ್ಯಾಷನಲ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡಿ ಬಿ.ಟಿ.ಎಸ್ ಸಂಸ್ಥೆಯಲ್ಲಿ ಸೇರಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ಇಲಾಖೆಯಲ್ಲಿ ಖ್ಯಾತಿ ಪಡೆದರು. ೧೯೮೧ ರಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಸೂಪರಿಡೆಂಟೆಂಟ್ ಆಗಿ ನಿವೃತ್ತಿ ಹೊಂದಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ೧೯೪೨ ನೇ ‘ಛಲೇಜಾವ್ ‘ ಚಳುವಳಿಯಲ್ಲಿ ಭಾಗವಹಿಸಿದ್ದರು. ನಮ್ಮ ಸಂಘದ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಸಂಘದ ಕಾರ್ಯದರ್ಶಿಯಾಗಿ (೧೯೮೪) ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಈಗಲೂ ಸಂಘದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಡಾ. ಕಾಂತರಾಜು, ಬಿ,ಎಸ್ಸಿ, ಕಾಮರಾಜನಹಳ್ಳಿ : ಡಾ.ಕಾಂತರಾಜುರವರು ದಿ. ಶ್ರೀಮತಿ ಪುಟ್ಟತಾಯಮ್ಮ ಮತ್ತು ದಿ. ಶ್ರೀ ರಂಗಪ್ಪನವರ ಪುತ್ರರಾಗಿ ಕೊರಟಗೆರೆ ತಾಲ್ಲೂಕು ಕಾಮರಾಜನಹಳ್ಳಿಯಲ್ಲಿ ಜನಿಸಿದರು. ೧೯೬೨ ರಲ್ಲಿ ಮೈಸುರು ವಿಶ್ವವಿದ್ಯಾಲಯದ ವೆಟರಿನರಿ ಪಧವೀಧರರಾದರು. ೧೯೬೨ ರಲ್ಲಿ ಇಲಾಖೆಯಲ್ಲಿ ಸೇರಿ ಕಾಲ ಕಾಲಕ್ಕೆ ಬಡ್ತಿಗಳನ್ನು ಹೊಂದಿದ್ದಲ್ಲದೆ ೧೯೭೩ ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿಶ್ವಸಂಸ್ಥೆಯ ವಿದ್ಯಾರ್ಥಿವೇತನದ ಮೇಲೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಉನ್ನತ ಪದವಿಯೋತ್ತರ ವ್ಯಾಸಂಗ ಮಾಡಿದರು.೧೯೭೬ ರಲ್ಲಿ ಭಾರತ ಸರ್ಕಾರದವರು ಇವರನ್ನು ಪಶುಸಂಗೋಪನಾ ಪರಿಣಿತರನ್ನಾಹಿ ಆರಿಸಿ ಶ್ರೀಲಂಕಾ ದೇಶಕ್ಕೆ ಕಳಿಸಲಾಗಿ ೧೯೭೮ ರವರೆಗೆ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ವಿಭಾಗೀಯ ಜಂಟೀ ನಿರ್ದೇಶಕರ ಹುದ್ದೆಯಲ್ಲಿ ಸೇವೆಸಲ್ಲಿಸಿದ್ದಲ್ಲದೆ ೧೯೯೩ ನೇ ಮೇ ತಿಂಗಳಲ್ಲಿ ನಿರ್ದೇಶಕರ ಹುದ್ದೆಗೆ ನೇಮಿಸಲ್ಪಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪರೋಭಿವೃದ್ಧಿಗೆ ಶ್ರಮಿಸಿದ್ದಾರೆ.
ಡಾ. ಅನಂತ್ ಎಂ.ವಿ.ಎಸ್ಸಿ, ಎಸ್, ಆರ್,ವಿ,ಸಿ, ಎಸ್, ಸ್ವೀಡನ್ : ಡಾ. ಅನಂತ್ ರವರು ಚಾಮರಾಜಪೇಟೆ ಮರಿಯಪ್ಪ ನವರ ಮಕ್ಕಳಾಗಿ ಜನಿಸಿದರು. ಇವರು ೧೯೬೦ ರಲ್ಲಿ ಮದ್ರಾಸಿನ ವೆಟರಿನರಿ ಕಾಲೇಜಿನಲ್ಲಿ ಪಧವೀಧರರಾಗಿದ್ದರು. ೧೯೬೮ರಲ್ಲಿ ಅನಿಮಲ್ ಫಥಾಲಜಿಯಲ್ಲಿ ಎಂ.ಡಿ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. ೧೯೬೩ ರಲ್ಲಿ ಎಸ್ ಆರ್ ವಿ.ಸಿ ಯಲ್ಲಿ ಸ್ನಾತಕೋತ್ತರ ಪಡೆದರು. ಡಾ.ಅನಂತರವರು ರಾಜ್ಯ ಸರ್ಕಾರದಲ್ಲಿ ಪ್ರೊಬೇಷನರಿ ಆಯ್ಕೆಗೊಂಡ ಮೇಲೆ ಜಾನುವಾರು ಆರೋಗ್ಯ ಮತ್ತು ಲಸಿಕ ತಯಾರಿಕಾ ಸಂಸ್ಥೆಯಲ್ಲಿ ಸೇವೆಗೆ ಸೇರಿ ಅಲ್ಲಿ ಉಪ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿ ೧೯೯೩ g ಜನವರಿಯಲ್ಲಿ ನಿವೃತ್ತರಾದರು, ಡಾ. ಅನಂತ್ ರವರ ಲಸಿಕಾ ತಯಾರಿಕಾ ವಿಜ್ಷಾನದಲ್ಲಿ ಪರಿಣಿತೆಯನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ಅವರನ್ನು ಗುತ್ತಿಗೆ ವೇತನದ ಮೇಲೆ ಮತ್ತೆ ಕಾರ್ಯಕ್ಕೆ ತೊಡಗಿಸಿಕೊಂಡಿತು.
ಡಿ.ರಾಮಯ್ಯ ನವರು ಹೊಳಕಲ್ಲು : ತುಮಕೂರು ಜಿಲ್ಲೆ ಮಧುಗಿರಿ ತಾಲ್ಲಕು ಗಂಕಾರನಹಳ್ಳಿಯಲ್ಲಿ ಶ್ರೀ ದೊಡ್ಡಯ್ಯ ಮತ್ತು ರ್ಶರೀಮತಿ ನಂಜಮ್ಮ ನವರ ಪುತ್ರರಾಗಿ ೧೯೩೬ ರಲ್ಲಿ ಜನಿಸಿದರು. ನಮ್ಮ ಸಂಘದ ಸದಸ್ಯರಾಗಿಯೂ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡುತ್ತಿದ್ದಾರೆ. ತುಮಕೂರು ವಿದ್ಯಾರ್ಥಿನಿಲಯದ ಹೊಸ ಕಟ್ಟಡವನ್ನು ನಿರ್ಮಿಸುವಲ್ಲಿ ತುಂಬಾ ಆಸಕ್ತಿವಹಿಸಿ ಕೆಲಸ ಪೂರೈಸಿದ್ದಾರೆ, ಅಲ್ಲದೆ ಇವರು ಅಲ್ಲದೆ ಇವರು ತುಮಕೂರು ಜಿಲ್ಲಾ ಕೇಂದ್ರ ಬ್ಯಾಂಕಿನ ಡೈರೆಕ್ಟರಾಗಿ ಹಾಗೂ ಹೊಳಕಲ್ಲು ಗ್ರಾಮದ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಜಿ.ವಿ ವೆಂಕಟರಮಣಗೌಡರು ವೀರಂಡನಹಳ್ಳಿ : ಗೌರಿಬಿದನೂರು ಕಸಬ ಪಟೇಲ್ ದಿ. ಪಿ,ವಿ, ಆಚಿಜನೇಯ ಗೌಡರ ಮಕ್ಕಳಾದ ಇವರು ನಮ್ಮ ಸಂಘದ ಏಳಿಗೆಗಾಗಿ ಶ್ರಮಿಸಿದವರಲ್ಲಿ ಒಬ್ಬರು. ತಮ್ಮ ತಂದೆ ದಿ,ಆಚಿಜನೇಯಗೌಡರು ಆಗಿನ ಕಾಲದಲ್ಲಿ ಜನಾನುರಾಗಿಗಳಾಗಿ ಜೀವನ ನಡೆಸಿ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದವರ ಸವಿನೆನಪಿಗಾಗಿ ಗೌರಿಬಿದನೂರು ಟೌನ್‌ನಲ್ಲಿ ನಮ್ಮ ಸಂಘದ ವಿದ್ಯಾರ್ಥಿ ನಿಲಯ ಕಟ್ಟಲು ೦೨೦ ಗುಂಟೆ ಜಮೀನನ್ನು ದಾನವಾಗಿ ಕೊಟ್ಟಿದ್ದಾರೆ.
ಬಿ.ಕೆ ಚಿಕ್ಕಣ್ಣನವರು. ತುಮಕೂರು :ತುಮಕೂರಿನ ಪ್ರಮುಖ ವರ್ತಕರು ಮಂಜುನಾಥ್ ರೈಸ್‌ಮಿಲ್ ಮಾಲೀಕರು. ತುಮಕೂರು ವಿದ್ಯಾರ್ಥಿನಿಲಯದದ ಅಭ್ಯುದಯಕ್ಕಡ ಕಾರಣಕರ್ತರು, ಸಂಘದ ಚಟುವಟಿಕೆಯಲ್ಲಿ ಯಾವಾಗಲೂ ಭಾಗವಹಿಸಿ ತುಂಬಾ ಸಹಾಯ ಮಾಡಿ ತುಮಕೂರು ಹಾಸ್ಟೆಲ್ ನ್ನು ಅಭಿವೃದ್ಧಿಗೊಳಿಸಲು ತುಂಬಾ ಕಳಕಳವುಳ್ಳವರಾಗಿದ್ದಾರೆ.
ಚಂದ್ರಶೇಖರ್ (ಮುಖ್ಯಮಂತ್ರಿ ಚಂದ್ರು) : ನೆಲಮಂಗಲ ತಾಲ್ಲೂಕು ಹೊನ್ನಸಂದ್ರದಲ್ಲಿ ಶ್ರೀ ನರಸಿಹಯ್ಯನವರ ಪಪುತ್ರರಾಗಿ ಜನಿಸಿದರು. ಬಿ.ಎ ಪಧವೀಧರರಾದ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದರು ಕಲಾ ವಿಭಾಗದಲ್ಲಿ ಆಸಕ್ತಿ ಹೊಂದಿ ತನ್ನ ಪ್ರತಿಭೇಯನ್ನು ವ್ರದ್ಧಿಸಿಕೊಂಡು ನಾಟಕರಂಗದಲ್ಲಿ ಮತ್ತು ಸಿನಿಮಾರಂಗದಲ್ಲಿ ಹೆಸರುಗಳಿಸಿದ್ದಾರೆ. ಆನತಾ ಪಕ್ಷದ ಸದಸ್ಯರಾಗಿ ಆಯ್ಕೆಗೊಂಡು ಕೆಲಸ ಮಾಡಿದ್ದಾರೆ. ನಮ್ಮ ಸಂಘದ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇರುವ ರಿವರು ಸಂಘದ ಅಭಿವೃದ್ಧಿಗೆ ಶ್ರಮಿಸುವವರಲ್ಲಿ ಇವರೂ ಒಬ್ಬರು,
ಜಿ. ತಿಮ್ಮರೆಡ್ಡಿಯವರು ಶಿವರ : ದಿ. ಶ್ರೀ ಗೋವಿಂದಣ್ಣ ಮತ್ತು ದಿ. ಶ್ರೀಮತಿ ಮುದ್ದಮ್ಮ ಇವರ ಪುತ್ರರಾಗಿ ೧೯೪೯ ರಲ್ಲಿ ಮಡಕಶಿರಾ ತಾಲ್ಲೂಕು ಶಿವರದಲ್ಲಿ ಜನಿಸಿದರು. ನಮ್ಮ ತುಮಕೂರು ಹಾಸ್ಟೆಲಿನ ವಿದ್ಯಾರ್ಥಿಯಾಗಿ ಬಿ.ಎಸ್ಸಿ ಪದವೀಧರರಾದರು. ತುಮಕೂರು ನಾನಾ ಕೈಗಾರಿಕಾ ಘಟಕಗಳಲ್ಲಿ ಷೇರುದಾರರಾಗಿ ಪಾರ್ಟಿನರ್ ಆಗಿ ಇದ್ದುಕೊಂಡು ನಮ್ಮ ಸಂಘದ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುತ್ತಿರುವ ಯುವ ಪೀಳಿಗೆಯವರು.
ಪಿ. ಹೊನ್ನಪ್ಪನವರ : ಮಾಗಡಿ ತಾಲ್ಲೂಕು ಮುತ್ಸಾಗರ ಗ್ರಾಮದಲ್ಲಿ ದಿ. ಶ್ರೀಮತಿ ಮಲ್ಲಮ್ಮ ಮತ್ತು ದಿ.ಶ್ರೀ ಪುಟ್ಟಹೊನ್ನಯ್ಯನವರ ಪುತ್ರರಾಗಿ ೦೪-೦೬-೧೯೦೪ ರಲ್ಲಿ ಜನಿಸಿದರು. ದಿ, ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡಿ ಪದವೀಧರರಾಗಿ ೧೯೩೦ರಲ್ಲಿ ಆಗಿನ ಮೈಸೂರು ರಾಜ್ಯ ಸರ್ಕಾರದ ಸೆಕ್ರೇಟರಿಯೇಟ್ ನಲ್ಲಿ ಸಹಾಯಕರಾಗಿ ಸೇರಿದರು. ಅಸಿಸ್ಟೆಂಟ್ ಸೆಕ್ರೇಟರಿ ಹುದ್ದೆಗೆ ಬಡ್ತಿ ಹೊಂದಿದ ನಂತರ ಸರ್ಕಾರದ ನಾನಾ ಇಲಾಖೆಯಲ್ಲಿ ಅಂದರೆ ಟ್ರಾಫಿಕ್ ಬೋರ್ಡ್ ಕಾರ್ಯದರ್ಶಿಯಾಗಿ ಸರ್ಕಾರದ ರಾಜ್ಯ ಸಾರಿಗೆ ವಿಭಾಗ, ಕಾರ್ಮಿಕ ವಿಭಾಗ, ಸಾಮಾನು ಖರೀದಿ ವಿಭಾಗ, ಹಣಕಾಸು ಇಲಾಖೆಯಲ್ಲಿ ಕೆಲಸ ನಿರ್ವಹಿಸಿದರು. ದಸರಾ ಮಹೋತ್ಸವದ ವಿಶೇಷ ಅಧಿಕಾರಿಯಾಗಿಯೂ, ಆಗಿನ ವಿಧಾನ ಸಭೆಯ ಅಧಿಕಾರಿಯಾಗಿಯೂ ಕೆಲಸ ಮಾಡಿದರು. ೧೯೫೬ ರಲ್ಲಿ ಉಪಕಾರ್ಯದರ್ಶಿಯಾಗಿ ಬಡ್ತಿ ಹೊಂದಿ ೧೯೫೬ ರಲ್ಲಿ ನಿವೃತ್ತಿ ಹೊಂದಿದರು. ಇವರು ಕೆಲಸದಲ್ಲಿದ್ದಾಗಲೂ ಸಹ ನಮ್ಮ ಸಂಘದ ಚಟುವಟಿಕೆಗಳಲ್ಲಿ ತುಂಬಾ ಮುತುವರ್ಜಿವಹಿಸಿ ದಿ. ಮಂಡಿಹರಿಯಣ್ಣ ನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ೧೯೩೦ ರಿಂದಲೂ ಇವರು ಮತ್ತು ದಿ. ಶ್ರೀ ಎ. ಮರಿಯಪ್ಪನವರು ಗೌರವ ಕಾರ್ಯದರ್ಶಿಗಳಾಗಿ ಕೆಲಸ ಮಾಡಿ ನಮ್ಮ ಸಂಘದ ಅಸ್ತಿತ್ವಕ್ಕೆ ಒಂದು ಒಳ್ಳೆಯ ಅಡಿಪಾಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು. ನಮ್ಮ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಮಹನೀಯರು ಫೆಬ್ರವರಿ ೧೯೬೩ ರಲ್ಲಿ ದೈವಾಧೀನರಾದರು.
ಜಿ.ವಿ ಶಾಂತರಾಜು ಬಿಎಸ್ಸಿ, ಬಿ.ಎಲ್ ಬೆಂಗಳೂರು : ಶ್ರೀಮತಿ ಲಕ್ಷ್ಮಮ್ಮ ಮತ್ತು ದಿ. ಓದಪ್ಪನವರ ಮಗನಾದ ೧೯೩೨ ರಲ್ಲಿ ಗೊಟಕಣಾಪುರದಲ್ಲಿ ಜನಿಸಿದರು. ನಮ್ಮ ಜನಾಂಗದಲ್ಲಿ ಇವರು ಖ್ಯಾತ ವಕೀಲರು. ನಮ್ಮ ಸಂಘದ ಅಧ್ಯಕ್ಷರಾಗಿ ೧೯೭೧ ರಿಂದ ೧೯೭೮ ರವರೆವಿಗೂ ಮತ್ತು ೧೯೮೧ ರಿಂದ ೧೯೮೮ ರವರೆಗೂ ಸೇವೆಸಲ್ಲಿಸಿದ್ದಾರೆ. ಇವರು ಅಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಸಂಘವು ತನ್ನ ಸ್ವಂತ ಕಟ್ಟಡ ಹೊಂದಲು ಶ್ರಮವಹಿಸಿದರು. ಇವರು ಈ ಬಗ್ಗೆ ತೋರಿಸಿದ ಆಸಕ್ತಿ ಸ್ಮರಣೀಯ. ನಮ್ಮ ಸಂಘದ ಸರ್ವತೋಮುಖ ಏಳಿಗೆಗೆ ಶ್ರಮಿಸಿದರು. ಪ್ರಮುಖರಲ್ಲಿ ಇವರು ಅಗ್ರಗಣ್ಯರು. ಈಗಲೂ ಸಂಘದ ಅಭಿವೃದ್ಧಿಗೆ ಇವರು ಸಲ್ಲಿಸುತ್ತಿರುವ ಸೇವೆ ಅಪಾರ.
ಜಿ. ನಂಜುಂಡಪ್ಪ ಬಿ.ಎಸ್ಸಿ, (ಹಾನ್ಸ್) ಮಾಗೋಡು : ದಿ. ಶ್ರೀಮತಿ ನರಸಮ್ಮ ಮತ್ತು ರಂಪ್ಪನವರ ಮಗನಾಗಿ ೧೯೦೯ ರಲ್ಲಿ ಮಾಗೋಡಿನಲ್ಲಿ ಜನಿಸಿದರು. ಮಡಕಶಿರಾ ತಾಲ್ಲೂಕು ಅಗಳಿ ಮತ್ತು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದರು. ದಿ. ಶ್ರೀ ಮಂಡಿಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಬಿ.ಎಸ್ಸಿ ಅನರ‍್ಸ್ ಪದವೀಧರರಾದರು.ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಆಗಿನ ಮೈಸೂರು ಸರ್ಕಾರದ ಲೆಕ್ಕಪತ್ರದ ಇಲಾಖೆಯಲ್ಲಿ ಸೇರಿ, ನಂತರ ಭಾರತ ಸರ್ಕಾರದ ಲೇಖಪಾಲನ ಕಛೇರಿ ಬೆಂಗಳೂರಲ್ಲಿ ತೆರೆದಾಗ ತಮ್ಮ ಉಳಿದ ಸೇವಾ ಅವಧಿಯಲ್ಲಿ ಭಾರತ ಸರ್ಕಾರದ ಸೇವೆಯಲ್ಲಿ ಕಳೆದು ೧೯೬೭ ರಲ್ಲಿ ನಿವೃತ್ತರಾದರು. ಸರ್ಕಾರದ ಸೇವೆಯಲ್ಲಿ ದಕ್ಷತೆ ಮತ್ತು ನಿಸ್ಪ್ರಹತೆಯಿಂದ ಸೇವೆ ಸಲ್ಲಿಸಿದ ನಮ್ಮವರಲ್ಲಿ ಇವರೂ ಒಬ್ಬರು. ನಮ್ಮ ಸಂಘದ ಕಾರ್ಯ ಚಟುವಟಿಕೆಯಲ್ಲಿ ಮೊದಲಿನಿಂದಲೂ ಆಸಕ್ತಿ ವಹಿಸಿ ಸೇವೆ ಸಲ್ಲಿಸಿದ್ದಾರೆ. ೧೯೭೯ -೮೦ ರಲ್ಲಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ೩೦-೦೮-೧೯೮೬ ರಲ್ಲಿ ದೈವಾಧೀನರಾದರು.
ಪಿ. ವೀರಣ್ಣನವರು, ಪೋತೇನಹಳ್ಳಿ : ೧೯೮೯ರಲ್ಲಿ ಗೌರಿಬಿದನೂರು ತಾಲ್ಲೂಕು ಪೋತೇನಹಳ್ಳಿ ಗ್ರಾಮದಲ್ಲಿ ಜನಿಸಿದರು. ದಿ.ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದ ಮೊದಲನೇ ವಾರ್ಡನ್ ಆಗಿದ್ದರು. ೧೯೩೧ ರಿಂದಲೂ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ೧೯ಜ೩೪ ರಲ್ಲಿ ಮಧುಗಿರಿಯಲ್ಲಿ ನಡೆದ ಮತಭಾಂದವರ ಸಭೆಯ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಕೆ.ಪಿ. ರಂಗಶ್ಯಾಮಿ ಗೌಡರು, ಕೊರಟಗೆರೆ :ದಿ. ಶ್ರೀ ಪುಟ್ಟರಂಗಪ್ಪ ಮತ್ತು ದಿ. ಶ್ರೀಮತಿ ಪಾರ್ವತಮ್ಮನವರ ಪುತ್ರರಾಗಿ ೧೯೧೪ ರಲ್ಲಿ ಕೊರಟಗೆರೆ ತಾಲ್ಲೂಕು ಕಾಮರಾಜನಹಳ್ಳಿಯಲ್ಲಿ ಜನಿಸಿದರು. ಉಪಾಧ್ಯಾಯರಾ ವೃತ್ತಿ ಅವಲಂಬಿಸಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರಿನ ಪಟೇಲರಾಗಿ ಕೆಲಸಮಾಡಿ ಸುತ್ತ ಮುತ್ತಲ ಗ್ರಾಮಗಳಲ್ಲಿ ತುಂಬ ಜನಾನುರಾಗಿಯಾಗಿದ್ದರು. ನಮ್ಮ ಸಂಘದ ಅಭಿವೃದ್ಧಿಗೆ ದುಡಿದವರು. ಕೇಂದ್ರ ಸಂಘದ ಪದಾಧಿಕಾರಿಯಾಗಿಯೂ ಮತ್ತು ತಾಲ್ಲೂಕು ಸಮಿತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದರು. ೧೯೮೧ ರಲ್ಲಿ ದೈವಾಧೀನರಾದರು.
ಕೆ. ನಂಜುಂಡಪ್ಪನವರು, ಬೆಂಗಳೂರು : ಕುದೂರು ಕಾಳಪ್ಪನವರ ಮಕ್ಕಳಾದ ಕೆ. ನಂಜುಂಡಪ್ಪನವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿ ಕಾರ್ಯದಲ್ಲಿ ದಿ. ಎಮ್. ಎಸ್ ಮಲ್ಲಯ್ಯನವರ ಜೊತೆಯಲ್ಲಿ ಪಾಲ್ಗೊಂಡು ಕೆಲಸ ಮಾಡಿದರು. ಸಂಘದ ಖಜಾಂಚಿಯಾಗಿ ೧೯೭೨-೭೬ ರವರಗೆ ಸೇವೆ ಸಲ್ಲಿಸಿ ೧೯೭೯ ರಲ್ಲಿ ದೈವಾಧೀನರಾದರು.
ಕೊಡಪಿ ಚೌಡಯ್ಯನವರು. ಇಡಗೂರು : ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ದಿ. ಶ್ರೀ ಎಸ್ ಕೊಡಪಿ ಚೌಡಯ್ಯನವರು, ದಿ. ಶ್ರೀ. ಸಂಕಪ್ಪ ಮತ್ತು ಶ್ರೀಮತಿ ನಂಜಮ್ಮನವರ ಪುತ್ರರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ೧೯೪೭ ರಲ್ಲಿ ತುರಂಗವಾಸ ಅನುಭವಿಸಿದರು. ರಾಜಕೀಯ ಸಂತ್ರಸ್ತರ ಮಾಸಾಶನ ಪಡೆದರು. ನಮ್ಮ ಸಂಘದ ಗೌರಿಬಿದನೂರು ಶಾಖೆಯ ಅಧ್ಯಕ್ಷರಾಗಿ ದುಡಿದರು. ಅಲ್ಲಿ ವಿದ್ಯಾರ್ಥಿ ನಿಲಯ ಕಟ್ಟುವ ಕೆಲಸಕ್ಕೆ ಶ್ರಮಿಸಿ ಹಣ ಕ್ರೋಡಿಕರಿಸಿದರು. ೧೯೭೪ ರಲ್ಲಿ ದೈವಾಧೀನರಾದರು.
ಪಿ. ಜಯರಾಮೇಗೌಡರು. ಪೂತೇನಹಳ್ಳಿ :ಪೋತೇನಹಳ್ಳಿ ಗ್ರಾಮದಲ್ಲಿ ನಂಜುಂಡೇಗೌಡರ ಪುತ್ರರಾಗಿ ೧೯೧೮ ರಲ್ಲಿ ಜನಿಸಿದರು. ೧೯೪೫ ನೇ ಇಸವಿಯಲ್ಲಿ ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗಿ ಸೇವೆ ಸಲ್ಲಿಸಿದರು. ೧೯೭೭ ರಲ್ಲಿ ದೈವಾಧೀನರಾದರು.
ದೊಡ್ಡವೀರಯ್ಯನವರು ಎನ್, ಹೊನ್ನಸಂದ್ರ :ನೆಲಮಂಗಲ ತಾಲ್ಲೂಕು ಹೊನ್ನಸಂದ್ರ ಗ್ರಾಮದ ದಿ. ನರಸೇಗೌಡರ ಪುತ್ರರು. ದಿ. ನರಸೇಗೌಡರು ೧೯೩೪ ರಿಂದಲೇ ಸಂಘದ ಕಾರ್ಯ ಚಟುವಟೆಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ತಮ್ಮ ತಂದೆಯವರ ಮೇಲ್ಪಂಕ್ತಿಯನ್ನನುಸರಿಸಿ ಎನ್. ದೊಡ್ಡವೀರಯ್ಯನವರು ಸಂಘದ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ ೧೯೫೭ ರಿಂದ ೫೬ ರವರೆಗೆ ಡಿಸ್ಟಿಕ್ಟ್ ಬೋರ್ಡ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೭೩ ರಲ್ಲಿ ದೈವಾಧೀನರಾದರು.
ಶ್ರಾವಂಡಳ್ಳಿ ಗಂಗೇಗೌಡರು : ಶ್ರೀ ಶ್ರಾವಂಡಳ್ಳಿ ಗಂಗೇಗೌಡರು ನಮ್ಮ ಸಂಘಕ್ಕೆ ಮೊದಲಿನಿಂದಲೂ ದುಡಿದವರು. ದಿ. ಮಂಡಿ ಹರಿಯಣ್ಣನವರ ನಿಲಯದಲ್ಲಿದ್ದುಕೊಂಡು, ಬೆಂಗಳೂರು ಕೃಷಿ ವಿದ್ಯಾಲಯದಲ್ಲಿ ಡಿಪ್ಲೋಮ ಪಡೆದುಕೊಂಡು, ಸರ್ಕಾರಿ ಕೆಲಸಕ್ಕೆ ಸೇರದೆ ತಮ್ಮ ಸ್ವಂತ ಊರಿನಲ್ಲಿ ಕೊಂಡು ವ್ಯವಸಾಯವನ್ನು ಅಭಿವೃದ್ಧಿ ಪಡಿಸುತ್ತಾ ನಮ್ಮ ಸಂಘದ ಎಲ್ಲಾ ಚಟುವಟಿಕರಗಳಲ್ಲಿ ಭಾಗವಹಿಸಿ ಸಂಘದ ಏಳಿಗೆಗಾಗಿ ಶ್ರಮಿಸಿದ್ದಾರೆ.
ಶ್ರೀ ಲಕ್ಷ್ಮೀನರಸಿಂಹಯ್ಯನವರು ತುಮಕೂರು :ದಿ. ಶ್ರೀಮತಿ ಸಾಕಮ್ಮ ಮತ್ತು ತಂದೆ ದಿ. ಶ್ರೀ ಚೌಡಪ್ಪನವರ ಪುತ್ರರಾಗಿ ಚೌಡಯ್ಯನಪಾಳ್ಯದಲ್ಲಿ ೦೭-೧೧-೧೯೩೫ ರಲ್ಲಿ ಜನಿಸಿದರು. ಇಂಜಿನಿಯರಿಂಗ್ ಡಿಪ್ಲೋಮ (ಎಲೆಕ್ಟ್ರಿಕಲ್) ಪಡೆದಿದ್ದಾರೆ. ಓದುವಾಗಲಿಂದಲೂ ರಾಜಕೀಯದಲ್ಲಿ ಆಸಕ್ತಿವುಳ್ಳವರಾಗಿದ್ದರು. ತುಮಕೂರು ಜಿಲ್ಲೆಯ ಜನತಾ ಪಕ್ಷದ ಅಧ್ಯಕ್ಷರಾಗಿ ಸುಮಾರು ಆರೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಒಂದು ವರ್ಷಕ್ಕೂ ಮೇಲ್ಪಟ್ಟು ಜೈಲುವಾಸ ಅನುಭವಿಸಿ ಜೈಲಿನಲ್ಲಿದ್ದ ರಾಜ್ಯ ಹಾಗೂ ರಾಷ್ಟ್ರ ನಾಯಕರ ನಿಕಟವರ್ತಿಯಾಗಿದ್ದರು. ತುಮಕೂರಿನಿಂದ ವಿಧಾನ ಸಭೆಗೆ ೧೯೮೩ ರಲ್ಲಿ ಆಯ್ಕೆಯಾಗಿ ವಿಧಾನ ಮಂಡಲದ ಡೆಪ್ಯೂಟಿ ಸ್ಪೀಕರಾಗಿ ಕೆಲಸ ನಿರ್ವಹಿಸಿದರು. ಎರಡನೇಯ ಭಾರಿ ೧೯೮೫ ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿ ವಿದ್ಯುತ್ ಖಾತೆ ರಾಜ್ಯ ಸಚಿವರಾಗಿ ಹಾಗೂ ಸಂಪುಟ ದರ್ಜೆ ಸಚಿವರಾಗಿಯೂ ಕೆಲಸ ನಿರ್ವಹಿಸಿದರು. ನಮ್ಮ ಮತದವರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿ ಮೊದಲ ಬಾರಿಗೆ ಮಂತ್ರಿಯಾದವರು. ಯಾವ ಕೆಲಸ ಮಾಡಿದರೂ ಬಹಳ ಆಸಕ್ತಿವಹಿಸಿ ಮಾಡುವರು. ನಮ್ಮ ಸಂಘದ ಕೆಲಸ ಕಾರ್ಯಗಳಲ್ಲಿ ಮೊದಲಿನಿಂದಲೂ ಮುತುವರ್ಜಿವಹಿಸಿ ಕೆಲಸ ಮಾಡಿದರು. ೧೯೭೨ ರಿಂದ ೧೯೭೮ ರವರೆಗೆ ಸಂಘದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ತುಮಕೂರಿನಲ್ಲಿಯ ಹಾಸ್ಟಲು ಕಟ್ಟಡದ ಬಡಾವಣೆ ಮಾಡುವಲ್ಲಿ ಇವರು ತುಂಬಾ ಸಹಾಯ ಮಾಡಿ ಹೆಚ್ಚಿನ ಸ್ಥಳಾವಕಾಶವನ್ನು ಒದಗಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲ ಮಾಡಿದ್ದಾರೆ. ನಮ್ಮ ಸಂಘದ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ.
ಎಸ್ ನಾರಾಯಣರೆಡ್ಡಿಯವರು ಪಾಪಿರೆಡ್ಡಿಪಲ್ಲಿ :ದಿ. ಶ್ರೀ ಗೋವಿಂದರೆಡ್ಡಿಯವರ ಪುತ್ರರಾಗೊ ೧೯೭೨ ರಲ್ಲಿ ಪೆನಗೊಂಡೆ ತಾಲ್ಲೂಕು ಸೋಮಂದೇಪಲ್ಲಿಯಲ್ಲಿ ಜನಿಸಿದರು. ದಿ. ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಜನೆ ಮಾಡಿದರು. ನಂತರ ಸ್ವಂತ ಊರಿನಲ್ಲಿ ನೆಲೆಸಿ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಂಚಾಯ್ತಿ ಬೋರ್ಡ್ ಅಧ್ಯಕ್ಷರಾಗಿ ಮತ್ತು ಆಂದ್ರ ಪ್ರದೇಶದ ಲ್ಯಾಂಡ್ ಮಾರ್ಟಿಗೇಜ್ ಬ್ಯಾಂಕಿನ ಡೈರೆಕ್ಟರಾಗಿ ದೀರ್ಘಕಾಲಸೇವೆ ಸಲ್ಲಿಸಿದರು. ತದನಂತರ ೧೯೭೩ ರಿಂದ ೧೯೮೩ ರವರೆಗೆ ಆಂದ್ರಪ್ರದೇಶದ ಪೆನುಗೊಂಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡು ಕೆಲಸ ಮಾಡಿದ್ದಾರೆ. ಆಂದ್ರಪ್ರದೇಶದ ಮೀಟ್ ಅಂಡ್ ಪೌಲ್ಟಿ ಡೆವಲಪ್‌ಮೆಂಟ್ ಕಾರ್ಪೋರೇಷನ್ ಅಧ್ಯಕ್ಷರಾಗಿಯೂ ಕೆಲಸಮಾಡಿದರು. ೧೯೮೦ ರಲ್ಲಿ ದೈವಾಧೀನರಾದರು.
ಡಿ. ನರಸೇಗೌಡರು ಚಿಕ್ಕದಾಳವಾಟ :೨೬-೦೩-೧೯೦೩ ರಲ್ಲಿ ಮಧುಗಿರಿ ತಾಲ್ಲೂಕು ಚಿಕ್ಕದಾಳವಾಟದಲ್ಲಿ ಜನಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಅನೇಕ ಸಾರಿ ಕಾರಾಗ್ರಹವಾಸ ಅನುಭವಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದಿದ್ದಾರೆ. ಎಇವರ ಸಮಾಜ ಸೇವೆಯನ್ನು ಮನ್ನಿಸಿ ಸರ್ಕಾರವು ಸ್ವಾತಂತ್ರ್ಯ ಯೋಧರ ಪೊಂಚಣಿಯನ್ನು ಮಂಜೂರುಮಾಡಿದೆ.
ಪಿ.ಕೆ ನಂಜುಂಡಯ್ಯನವರು ಮಧುಗಿರಿ : ಮಧುಗಿರರಿಯಲ್ಲಿ ಶ್ರೀಮತಿ ಪುಟ್ಟಮ್ಮ ಮತ್ತು ಕಪ್ಪಣ್ಣನವರ ಪುತ್ರರಾಗಿ ಜನಿಸಿದರು. ಇವರು ಮಧುಗಿರಿ ಪುರಸಭೆಯಲ್ಲಿ ಅಧ್ಯಕ್ಷರಾಗಿ ಅನೇಕ ಜನಹಿತ ಕಾಐಗಳನ್ನು ಮಾಡಿದ್ದಾರೆ. ೧೯೩೪ ರಲ್ಲಿ ನಮ್ಮ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡು ಸೇವೆ ಸಲ್ಲಿಸಿದ್ದಾರೆ. ನಮ್ಮ ಮತಬಾಂಧವರ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಹಾಸ್ಟೆಲ್ ನಡೆಸಲು ತಾವು ವಾಸವಾಗಿದ್ದ ಮನೆಯನ್ನೇ ದಾನವಾಗಿ ಕೊಟ್ಟಿರುತ್ತಾರೆ. ಹಾಗೂ ತಾವು ಜೀವಂತರಾಗಿರುವವರೆಗೂ ನಮ್ಮ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು.
ಗುಟ್ಟೆ ವೀರಪ್ಪನವರು : ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಗುಟ್ಟೆ ಗ್ರಾಮದಲ್ಲಿ ಜನಿಸಿದರು. ನಮ್ಮ ಮತಬಾಂಧವರ ವಿದ್ಯಾರ್ಥಿನಿಲಯದ ಶ್ರೇಯೋಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮವಹಿಸಿ ತಾಲ್ಲೂಕಿನಾದ್ಯಂತ ಸಂಚಾರ ಮಾಡಿ ಮಧುಗಿರಿ ವಿದ್ಯಾರ್ಥಿನಿಲಯದಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರಮಿಸಿದ್ದಾರೆ. ೧೯೬೯೧೯- ೭೧೭೧ ಕೇಂದ್ರ ಕಾರ್ಯಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಂ.ಎನ್ ಬಸಪ್ಪನವರು ಮಧುಗಿರಿ : ದಿ.ಪಿ.ಕೆ ನಂಜುಂಡಯ್ಯನವರ ಜೇಷ್ಠ ಪುತ್ರ ಎಂ.ಎನ್ ಬಸಪ್ಪನವರು, ನಮ್ಮ ತಂದೆಯವರು ಸ್ಥಾಪಿಸಿದ ವಿದ್ಯಾರ್ಥಿನಿಲಯದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.
ಎಂ.ಎನ್ ಕಪ್ಪಣ್ಣನವರು ಮಧುಗಿರಿ : ದಿ.ಪಿ.ಕೆ ನಂಜುಂಡಯ್ಯನವರ ಹಿರಿಯ ಮಗ ಬಸಪ್ಪನವರು ದೈವಾಧೀನರಾದನಂತರ, ಮಧುಗಿರಿ ವಿದ್ಯಾರ್ಥಿನಿಲಯದ ಅಧ್ಯಕ್ಷರಾಗಿ ತಮ್ಮ ತಂದೆ ಮತ್ತು ಅಣ್ಣನವರ ಮೇಲ್ಪಂಕ್ತಿಯಲ್ಲಿ ನಮ್ಮ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಎಂ.ಎಸ್ ಗೋವಿಂದಪ್ಪನವರು, ಮಧುಗಿರಿ : ಮಧುಗಿರಿ ತಾಲ್ಲೂಕು ತೊಣಚಗೊಂಡನಹಳ್ಳಿ ಜನಸಿದರು. ನಮ್ಮ ಜನಾಂಗದ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಬಹಳ ಶ್ರಮಿಸಿದ್ದಾರೆ. ಮಧುಗಿರಿ ವಿದ್ಯಾರ್ಥಿನಿಲಯದಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಲು ಶ್ರಮಿಸಿದ್ದಾರೆ.
ಉಡುಕುಂಟೆ ಚನ್ನಪ್ಪನವರು ಕಲ್ಯ : ಶ್ರೀಯುತ ಚನ್ನಪ್ಪನವರು ೧೦-೨-೧೯೨೯ ರಂದು ಮಾಗಡಿ ತಾಲ್ಲೂಕು ಕಲ್ಯಾ ಗ್ರಾಮದ ದಿ. ಶ್ರೀ ತಿಮ್ಮಪ್ಪನವರ ಧರ್ಮಪತ್ನಿ ಶ್ರೀಮತಿ ಮಾಗಡಮ್ಮನವರ ಪುತ್ರರಾಗಿ ಜನ್ಮ ತಾಳಿದರು. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದು ಕೊಂಡಿದ್ದರಿಂದ ತಾಯಿಯವರ ಆಶ್ರಯದಲ್ಲಿ ಬೆಳೆದು ತ್ಯಾಮಗೊಂಡ್ಲು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಉಪಾಧ್ಯಾಯರಾಗಿ ಜೀವನವನ್ನು ಪ್ರಾರಂಭಿಸಿದರು. ತಮ್ಮ ೩೭ ವರ್ಷದ ಸರ್ಕಾರಿ ಸೇವಾ ವೃತ್ತಿಯಲ್ಲಿ ಗ್ರಾಮಾಂತರ ಮಕ್ಕಳ ಅಅಭಿವೃದ್ಧಗೆ ಶ್ರಮಿಸಿ ಆದರ್ಶ ಗುರುಗಳೆನಿಸಿದ್ದರು. ಸಮಾಜದ ಜನಮನದಿಂದ ಪಡೆದ ಮನ್ನಣೆ, ಸರ್ಕಾರ ಕೊಡುವ ಪ್ರಶಸ್ತಿಗಿಂತಲೂ ಉತ್ತಮವೆಂದು ತಿಳಿದಿದ್ದರು. ಆದ್ದರಿಂದ ಒಮ್ಮೆ ಸರ್ಕಾರವು ಕೊಡಲು ಇಚ್ಚಿಸಿದ ಮನ್ನಣೆಯನ್ನು ತಿರಸ್ಕರಿಸಿದರು. ವಿದ್ಯೆಗೆ ಮೀರಿದ ವಿದ್ವತ್ವವನ್ನು ಸಂಪಾದಿಸಿದ್ದರು. ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿದವರು ಮತ್ತು ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದರು. ಮತ್ತು ಶ್ರೀ ಸಚ್ಚಿದಾನಂದ ಜನಸೇವಾ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಶ್ರೀಯುತರು ೧೪-೦೭-೧೯೯೩ ರಂದು ತಾವು ಸಾರ್ವಜನಿಕ ಸೇವೆ ಮಾಡುತ್ತಿರುವಾಗಲೇ ದೇಹತ್ಯಾಗ ಮಾಡಿದರು.
ಪಟೇಲ್ ತಿಮ್ಮೇಗೌಡರು. ಸೊನಗಾನಹಳ್ಳಿ : ಇವರು ಸೊನಗಾನಹಳ್ಳಿ ದಿ. ಶ್ರೀಮತಿ ಸಂಜೀವಮ್ಮ ಮತ್ತು ದಿ. ಶ್ರೀ ಆಚಿಜನೇಯ ಗೌಡರ ಪುತ್ರರಾಗಿ ಜನಿಸಿದರು. ನಮ್ಮ ಜನಾಂಗದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ೧೯೩೧ ರಿಂದಲೂ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಉದಾರ ಮನಸ್ಸಿನ ಇವರು ತಮ್ಮ ಮನೆಯಲ್ಲೇ ಅನೇಕ ವಿದ್ಯಾರ್ಥಿಗಳಿಗೆ ಅನ್ನದಾನ ಮಾಡಿ ನಮ್ಮ ಮತದ ಮಕ್ಕಳ ವಿದ್ಯಾಭಿವೃದ್ಧಿಗೆ ಉತ್ತೇಜನ ಕೊಟ್ಟಿದ್ದಾರೆ. ಇಂಥವರ ಜೀವನ ಶೈಲಿ ಅನುಕರಣೀಯ.
ಡಿ.ಆರ್ ಮುದ್ದಪ್ಪನವರು, ತುಮಕೂರು : ದಿ. ಶ್ರೀರಾಮಯ್ಯನವರ ಪುತ್ರರಾಗಿ ಮಧುಗಿರಿ ತಾಲ್ಲೂಕು ದೊಡ್ಡ ಬ್ಯಾಲ್ಯಾದಲ್ಲಿ ೧೯೧೧ ನೇ ಇಸ್ವಿಯಲ್ಲಿ ಜನಿಸಿದರು. ಬಾಲ್ಯದಲ್ಲೆ ತಂದೆ ತಾಯಿಯನ್ನು ಕಳೆದುಕೊಂಡು ಅಣ್ಣನೊಂದಿಗೆ ದಾವಣೆಗೆರೆ ಸೇರಿ ೯ ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೋಂಡು ಯಶಸ್ವಿ ಚಳುವಳಿಗಾರನೆನಿಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರಾದ ದಿ. ಶ್ರೀ ತಾಳಕೆರೆ ಸುಬ್ರಮಣ್ಯಂ, ಶ್ರೀ ಹುಚ್ಚುಮಾಸ್ತಿ ಗೌಡ ದಿ. ಶ್ರೀ ಕೆಂಗಲ್ ಹನುಮಂತಯ್ಯ ದಿ.ಶ್ರೀ ಮೂಡ್ಲಿಗಿರಿಗೌಡ ಇವರ ಸಹಪಾಠಿಗಳಾಗಿದ್ದು ಬ್ರಿಟೀಷ್ ಸರ್ಕಾರದ ವಿರುದ್ದ “ಗುಡುಗು” ಎಂಬ ಸಣ್ಣ ಪತ್ರಿಕೆಯನ್ನು ಪ್ರಕಟಿಸಿ ಸ್ವಾತಂತ್ರ್ಯ ಚಳುವಲಿಗೆ ಇಂಬು ಕೊಟ್ಟಿದ್ದರು. ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ತುಮಕೂರು ಜಿಲ್ಲೆಯ ಹೋರಾಟ ಸಮುದಾಯದ ಮುಂದಾಳುಗಳಲ್ಲಿ ಒಬ್ಬರು. ಸ್ವಾತಂತ್ರ್ಯ ನಂತರ ತುಮಕೂರು ಸಾರ್ವಜನಿಕ ಆಸ್ಪತ್ರೆಯ ಕ್ಷೇಮಾಭಿವೃದ್ಧಿ ಸದಸ್ಯರಾಗಿ, ಆರ್ ಟಿ ಒ ಕಮಿಟಿಯ ಎ.ಐ.ಸಿ.ಸಿ ಸದಸ್ಯರಾಗಿ ರೆಡ್ ಕ್ರಾಸ್ ಸಮಿತಿಯ ಸೇವೆ ಸಲ್ಲಿಸಿದ್ದಾರೆ. ಆನ ಪ್ರಗತಿ ಎಂಬ ಸ್ಥಳೀಯ ವರ್ತಮಾನ ಪತ್ರಿಕೆಯ ಸಂಪಾದಕರಾಗಿ ಪತ್ರಿಕೋದ್ಯಮದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಸೇವೆಯ ಭರದಲ್ಲಿ ಸಮಾಜಸೇವೆಯನ್ನು ಮರೆಯಲಿಲ್ಲ. ನಮ್ಮ ಸಮಾಜದ ಜನರನ್ನು ಸಂಘಟಿಸುವಲ್ಲಿ ತುಂಬ ಶ್ರಮವಹಿಸಿದರು. ೧೯೬೯ ರಿಂದ ೧೯೭೧ ರವರೆಗಿನ ನಮ್ಮ ಸಂಘದ ಉಪಾಧಿಕ್ಷರಾಗಿ ಕೆಲಸ ಮಾಡಿದ್ದಾರೆ. ತುಮಕೂರಿನಲ್ಲಿ ಸಂಘದ ಸ್ಥಾಪನೆ ಮತ್ತು ಸಂಘದ ವಿದ್ಯಾರ್ಥಿನಿಲಯವನ್ನು ಉತ್ತಮ ರೂಪಕ್ಕೆ ತಂದು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರಿಂದ ಉದ್ಗಾಟನೆ ಮಾಡಿಸಿ, ಸಂಘವು ಅಭಿವೃದ್ಧಿಗೊಳ್ಳುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ತುಮಕೂರಿನ ಬಟವಾಡೆ ಬಟವಾಡೆ ಗ್ರಾಮದಲ್ಲಿ ನಿವೇಶನಕೊಳ್ಳುವಲ್ಲಿ ಇವರ ಪಾತ್ರ ಸ್ಮರಣೀಯ. ಭಾರತ ಸರ್ಕಾರವು ಇವರನ್ನು ಉತ್ತಮ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಿ ತಾಮ್ರ ಪತ್ರವನ್ನು ದಯಪಾಲಿಸಿ ಗೌರವಿಸಿದರು. ರಾಜಕೀರ ಸಂತ್ರಸ್ತರ ವಿಶ್ರಾಂತಿ ವೇತನವನ್ನು ಕೊಟ್ಟು ಗೌರವಿಸಿದರು. ೧೯೯೨ ರಲ್ಲಿ ದೈವಾದೀನರಾದರು.
ಶ್ರೀಮತಿ ಗೌರಮ್ಮನವರು, ಗಂಗಸಂದ್ರ : ಶ್ರೀಮತಿ ಗೌರಮ್ಮ ನವರು ೧೯೦೭ ನೇ ಇಸವಿಯಲ್ಲಿ ಗೌರಿಇದನೂರು ತಾಲ್ಲೂಕು ಗೊಟಕನಾಪುರ ಗ್ರಾಮದಲ್ಲಿ ಶ್ರೀ ಅಣ್ಣಯ್ಯಪ್ಪ ಮತ್ತು ಶ್ರೀಮತಿ ಅಕ್ಕಯ್ಯಮ್ಮನವರ ಎರಡನೇ ಪುತ್ರಿಯಾಗಿ ಜನಿಸಿದರು. ಭಾರತದ ಸ್ವಾತಂತ್ರ್ಯ ಕ್ಕೆ ಮುನ್ನ ತಮ್ಮ ಪತಿ ಶ್ರೀ ನಾರಾಯಣಗೌಡರು ಮತ್ತು ಅಣ್ಣನವರಾದ ಶ್ರೀ ವೆಂಕಟಶಾಮಿಗೌಡರ ಉತ್ತೇಜನದಿಂದ ತಮ್ಮ ಜೀವನವನ್ನು ಸಮಾಜಸೇವೆಗಾಗಿ ೧೯೪೫ ರಿಂದ ಮುಡುಪಾಗಿಟ್ಟಿದ್ದಾರೆ. ಇವರು ಖ್ಯಾತ ಸಮಾಜ ಸೇವಕಿ ದಿ.ಶ್ರೀಮತಿ ಯಶೋಧರ ದಾಸಪ್ಪನವರ ಮಾರ್ಗದರ್ಶನದಂತೆ, ಕಸ್ತೂರಿಬಾ ಗಾಂಧಿ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ಅರಸೀಕೆರೆಯಲ್ಲಿ ೯ ತಿಂಗಳ ತರಭೇತಿ ಪಡೆದು, ನಂತರ ಸ್ವಂತ ಗ್ರಾಮವಾದ ಗಂಗಸಂದ್ರ ಗ್ರಾಮದಲ್ಲಿ ೧೯೪೭ ರಲ್ಲಿ ಕಸ್ತೂರಿಬಾ ಕೇಂದ್ರವನ್ನು ತೆರೆದು ಹರಿಜನ ಸೇವೆಯನ್ನು ಪ್ರಾರಂಭಿಸಿದರು. ೧೯೪೮ ರಲ್ಲಿ “ನವಭಾರತ ಸಮಾಜ” ತೆರೆದು ಅದರ ಅಧ್ಯಕ್ಷಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೫೨ ರಲ್ಲಿ ಮಹಿಳಾ ಪಾಲಿಟೆಕ್ನಿಕ್ ಗೌರಿಬಿದನೂರಿನಲ್ಲಿ ಪ್ರಾರಂಭಿಸಲು ಶ್ರಮಿಸಿ ಇದರ ಸದಸಯರಾಗಿ ಕೆಲಸ ಮಾಡಿರುತ್ತಾರೆ. ಇವರ ಸೇವೆಯನ್ನು ಪ್ರಶಂಶಿಸಿ ೧೯೬೨ ರಲ್ಲಿ ಘನ ಮೈಸೂರು ಸರ್ಕಾರದವರು ಬೆಳ್ಳಿ ಪದಕವನ್ನಿತು ಗೌರವಿಸಿದ್ದಾರೆ. ಇವರು ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳಾ ಸ್ವಾತಂತ್ರ್ಯ ತಂಡದ ನಾಯಕಿಯಾಗಿ ಶ್ರೀಮತಿ ಕಮಲಾದೇವೆ ಚಟ್ಟೋಪಾಧ್ಯಾಯರ ಜೊತೆ ಭಾಗವಹಿಸಿದ್ದರು. ೧೯೮೪-೮೫ ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಇವರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇವೆಯನ್ನು ಪ್ರಶಂಶಿಸಿ “ ಉತ್ತಮ ಸಮಾಜ ಸೇಮಕಿ “ ಪ್ರಶಸ್ತಿ ಪತ್ರ ಹಾಗೂ ನಗದು ೫೦೦೦.೦೦ ರೂಪಾಯಿಗಳನ್ನಿತ್ತು ಸನ್ಮಾನಿಸಿತು. ೧೯೮೮ ರಲ್ಲಿ ನಲವತ್ತನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರ್ಕಾರವು ಶಾಲು ಹೊದ್ದಿಸಿ ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಿದೆ. ಹಾಗೂ ಘನ ಸರ್ಕಾರದವರು ಸ್ವಾತಂತ್ರ್ಯ ಹೋರಾಟಗಾರರ ವಿಶ್ರಾಂತಿ ವೇತನವನ್ನು ಕೊಟ್ಟು ಗೌರವಿಸಿದ್ದಾರೆ.
ಎನ್ ಆರ್ ಚಿಕ್ಕಣ್ಣ ನವರು, ರಾಯರೇಖನಹಳ್ಳಿ :ಇವರು ಗೌರಿಬಿದನೂರು ತಾಲ್ಲೂಕು ರಾಯರೇಖಲಹಳ್ಳಿಯಲ್ಲಿ ಜನಿಸಿದರು. ಇವರೂ ಸಹ ದಿ. ಶ್ರೀ ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರಾಗೃಹವಾಸ ಅನುಭವಿಸಿದ್ದಾರೆ. ೨೫,೪,೧೯೩೮ ರಲ್ಲಿ ವಿದುರಾಶ್ವತ್ಥದಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದ್ದರು. ೧೯೩೧ ರ ಲಾಗಾಯ ನಮ್ಮ ಸಂಘದ ಸಂಘದ ಸಂಘಟನೆಯಲ್ಲಿ ಆಸಕ್ತಿವಹಿಸಿ ಗ್ರಾಮಾಂತರ ಪ್ರದೇಶದಲ್ಲಿ ಸಂಚಾರ ಮಾಡಿ ಹಣ ವಸೂಲು ಮಾಡಲು ಶ್ರಮಿಸಿದವರಲ್ಲಿ ಒಬ್ಬರು. ಗೌರಿಬಿದನೂರು ತಾಲ್ಲೂಕು ಅಲಕಾಪುರದಲ್ಲಿ ನಡೆದ ಸಾದು ಮತದ ಸಂಘದ ಅಖಿಲ ಸದಸ್ಯರ ಸಭೆಗೆ ಅಧ್ಯಕ್ಷತೆ ವಹಿಸಿದ್ದರು. ಇವರು ನಮ್ಮ ಸಂಘದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಇವರು ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಪಡೆಯುತ್ತದ್ದರು. ೧೯೮೬ ರಲ್ಲಿ ದೈವಾದೀನರಾದರು.
ಪಿ. ತಮ್ಮಯ್ಯನವರು, ಪುರ: ದಿ. ಶ್ರೀ ನರಸಪ್ಪನವರ ಪುತ್ರರಾಗಿ ಗೌರಿಬಿದನೂರು ತಾಲ್ಲೂಕು ಪುರ ಗ್ರಾಮದಲ್ಲಿ ಜನಿಸಿದರು. ದಿ. ಶ್ರೀ ಮಂಡಿ ಹರಿಯಣ್ಣನವರ ವಿದ್ಯಾರ್ಥಿ ನಿಲಯದಲ್ಲಿದ್ದು ಕೊಂಡು ವಿದ್ಯಾರ್ಜನೆ ಮಾಡಿ ಇಂಟರ್ ಮೀಡಿಯೆಟ್ ವರೆಗೂ ಓದಿದರು. ೧೯೩೧ ರಿಂದ ನಮ್ಮ ಮತ ಬಾಂದವರ ಮಹಾಸಭೆಗಳು ಸಂಘದ ಮೀಟಿಂಗ್‌ಗಳಲ್ಲಿ ಪಾಲ್ಗೊಂಡು ಸಂಘದ ಪುರೋಭಿವೃದ್ಧಿಗೆ ಸತತವಾಗಿ ದುಡಿದಿದ್ದಾರೆ. ಬೆಂಗಳೂರಿನಲ್ಲಿ ಸಂಘದ ನಿವೇಶನ ಕೊಳ್ಳುವಲ್ಲಿ ಹಣ ಸಾಲದೆ ಬಂದಾಗ ಶ್ರೀ ವೆಂಕಟರಮಣಪ್ಪನವರು, ಎನ್ ಆರ್ ಚಿಕ್ಕಣ್ಣನವರು ಇತರರ ಜೊತೆಯಲ್ಲಿ ಗಾಡಿಯಲ್ಲಿ ಊರು ಊರು ಸಂಚರಿಸಿ ಹಣ ಶೇಖರಿಸಲು ನೆರವಾದರು.
ಪುಟ್ಟನರಸೇಗೌಡರು, ವಟದಹೊಸಹಳ್ಳಿ : ೧೯೦೦ ರಲ್ಲಿ ಪಟೇಲ್ ಚನ್ನೇಗೌಡರ ಪುತ್ರರಾಗಿ ಗೌರಿಬಿದನೂರು ತಾಲ್ಲೂಕು ವಾಟದಹೊಸಹಳ್ಳಿ ಜನಿಸಿದರು. ೧೯೩೫-೪೪ ರ ಅವಧಿಯಲ್ಲಿ ಕೋಲಾರ ಬೋಡ್ ಗಳಲ್ಲಿ ಅಯ್ಕೆಯಾಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ, ಹಾಗೂ ಮೈಸೂರು ಪ್ರಜಾಪ್ರಗತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ೧೯೩೫ ರಿಂದಲೂ ಸಂಘದ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಸಾದಾರ‍್ಲಳ್ಳಿ ನಂಜುಂಡೇಗೌಡರು :ಗೌರಿಬಿದನೂರು ತಾಲ್ಲೂಕು ಸಾದರ‍್ಲಳ್ಳಿಯಲ್ಲಿ ೧೯೦೬ ರಲ್ಲಿ ಜನಿಸಿದರು. ಶ್ರೀ ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿದರು. ಗೌರಿಬಿದನೂರು ತಾಲ್ಲೂಕಿನ ಕೆಲವೇ ನಮ್ಮ ಪ್ರಮುಖ ವ್ಯಕ್ತಿಯಲ್ಲಿ ಜನಾನುರಾಗಿಯಾಗಿ ಕೆಲಸ ಮಾಡಿದವರಲ್ಲಿ ಇವರೂ ಒಬ್ಬರು ನಮ್ಮ ಸಂಘದ ಪುರೋಭಿವೃದ್ಧಿಗೆ ಬಹಳವಾಗಿ ಶ್ರಮಿಸಿದವರು. ಗೌರಿಬಿದನೂರಿನಲ್ಲಿ ವಿದ್ಯಾರ್ಥಿನಿಲಯದ ನಿರ್ಮಾಣವಾಗಿ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಕನಸನ್ನು ಕಂಡು ಅದಕ್ಕಾಗಿ ಶ್ರಮಿಸಿದರು. ಅನೇಕ ವರ್ಷಕಾಲ ಪ್ರಧಾನ ಸಂಘಧ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಜೀವರೆಡ್ಡಿಯವರು, ಮಾನೇಪಲ್ಲಿ :ಮಾನಃಪಲ್ಲಿಯಲ್ಲಿ ದಿ. ಶ್ರೀ ಪಾಪಿರೆಡ್ಡಿಯವರ ಮಗನಾಗಿ ೧೯೦೧ ರಲ್ಲಿ ಮಾನಃಪಲ್ಲಿಯಲ್ಲಿ ಜನಿಸಿ ಪೆನಗೊಂಡ ಮತ್ತು ಅನಂತಪುರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಪಟೇಲರಾಗಿ ನಿಂತರು. ಇವರು ಒಬ್ಬ ಪ್ರಗತಿಪರ ರೈತರೂ, ಸ್ವಾತಂತ್ರಯ ಸಂಗ್ರಾಮದಲ್ಲಿ ತಾವೇ ಭಾಗವಹಿಸಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾಗಿ ಆಶ್ರಯ ಕೊಟ್ಟು ನಮ್ಮ ದೇಶ ಸೇವೆ ಸಲ್ಲಿಸಿದವರಲ್ಲಿ ಒಬ್ಬರು. ಇವರು ಸಮಕಾಲೀನರಲ್ಲಿ ಕೆಲವರನ್ನಾದರೂ ಹೆಸರಿಸಬಹುದು. ಕೊಲ್ಲೂರು ಸುಬ್ಬರಾಯ ಮತ್ತು ಮಾಜಿ ಅಧ್ಯಕ್ಷರಾದ ನೀಲಂ ಸಂಜೀವರೆಡ್ಡಿಯವರು ಇವರ ಆಪ್ತ ಸ್ನೇಹಿತರು. ನಮ್ಮ ಸಂಘದ ಪುರೋಭಿವೃದ್ಧಿಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು. ಆಂದ್ರ ಪ್ರದೇಶದಿಂದ ನಮ್ಮ ಸಂಘದ ಪ್ರತಿನಿಧಿಯಾಗಿ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಸಂಘದ ಪುರೋಭಿವೃದ್ಧಿಗೆ ದುಡುದಿದ್ದಾರೆ.
ಎ.ಎಂ ರಾಮಮೂರ್ತಿ, ಬೆಂಗಳೂರು : ಶ್ರೀ ದಿ. ಎ.ಮರಿಯಪ್ಪ ಮತ್ತು ಶ್ರೀಮತಿ ಸರೊಜಮ್ಮನವರ ಎರಡನೇ ಮಗನಾಗಿ ಬೆಂಗಳೂರುನಲ್ಲಿ ೧೯೩೫ ರಲ್ಲಿ ಜನಿಸಿದರು. ಅಗ್ರಿಕಲ್ಚರಲ್ ಪದವೀಧರರಾಗಿ ಸರ್ಕಾರದ ವ್ಯವಸಾಯ ಇಲಾಖೆ ಸೇರಿದರು. ನಿವೃತ್ತಿಯಾಗುವ ಮುನ್ನ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಅಗ್ರಿಕಲ್ಷರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ನಮ್ಮ ಸಂಘದ ೧೯೭೮-೮೦ ರಲ್ಲಿ ಸಹಕಾರ‍್ಯದರ್ಶಿಯಾಗಿ ೧೯೮೧,೮೨,೮೩ ರಲ್ಲಿ ಕಾರ್ಯದರ್ಶಿಯಾಗಿಯೂ ೧೯೮೪ ರಲ್ಲಿ ಉಪಾಧ್ಯಕ್ಷರಾಗಿಯೂ ೧೯೮೬-೮೭, ೮೮ ರಲ್ಲಿ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಹಾಲಿ ಇರುವ ಸಭಾಂಗಣ ಕಟ್ಟಡ ಕಟ್ಟುವಲ್ಲಿ ಬಹಳ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಈಗಲೂ ಸಂಘದ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ|| ನಾರಾಯಣ್, ಬೆಂಗಳೂರು : ಗೌರಿಬಿದನೂರು ತಾಲ್ಲೂಕು ಗೊಟಕನಾಪುರದ ನಂಜುಂಡೇಗೌಡ ಮತ್ತು ದಿ. ಶ್ರೀಮತಿ ಚೆನ್ನಮ್ಮನವರ ಪುತ್ರರಾಗಿ ಜನಿಸಿದರು. ದಿ.ಮಂಡಿ ಹರಿಯಣ್ಣನವರ ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಎಮ್ ಎಸ್ಸಿ, ಪದವೀಧರರಾದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದರು. ನಮ್ಮವರಲ್ಲಿ ಮೊದಲ ಬಾರಿಗೆ ಹೊರದೇಶಕ್ಕೆ ಹೋಗಿ ಇಂಗ್ಲೆಂಡಿನಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿಯೂ ಐದು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ನಮ್ಮ ಮತಬಾಂದವರ ಏಳಿಗೆಗಾಗಿ ೧೯೪೦ ರಿಂದಲೂ ಸಂಘದ ಸದಸ್ಯರಾಗಿ, ಸಂಘದ ಸರ್ವತೋಮುಖ ಏಳಿಗೆಗಾಗಿ ದುಡಿದಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಮ್ಮ ಮತಬಾಂದವರ ವಿದ್ಯಾರ್ಥಿಗಳ ವಿದ್ಯಾಭಿವೃದ್ಧೀಗೆ ಈಗಲೂ ಶ್ರಮಿಸುತ್ತಿರುವ ಹಿರಿಯರು.
|
ಶ್ರೀ ಡಿ. ರಾಮಯ್ಯನವರು ಮಹಾ ದಾನಿಗಳು ಮತ್ತು ಸಂಘದ ಮಹಾ ಪೋಷಕರು, ಒಳಕಲ್ಲು, ತುಮಕೂರು ಜಿಲ್ಲೆ,
|
ಶ್ರೀ ಡಿ. ರಾಮಯ್ಯನವರು, ಮಾಜಿ ಅಧ್ಯಕ್ಷರು, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ಇವರು ದಿನಾಂಕ ೨೪.೫.೧೯೩೪ ರಂದು ಮಧುಗಿರಿ ತಾಲ್ಲೂಕು, ಗಂಕಾರನಹಳ್ಳಿಯಲ್ಲಿ ಶ್ರೀಮತಿ ನಂಜಮ್ಮ ಮತ್ತು ಶ್ರೀ ದೊಡ್ಡಯ್ಯನವರ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಗಂಕಾರನಹಳ್ಳಿಯಲ್ಲಿ ಮುಗಿಸಿ, ಪ್ರೌಢಾಶಾಲೆ ಶಿಕ್ಷಣವನ್ನು ನಂದೀಗಾನಹಳ್ಳಿ ಮತ್ತು ಗೌರಿಬಿದನೂರು ತಾಲ್ಲೂಕಿನ ಅಲಕಾಪುರದ ಪ್ರೌಢಶಾಲೆಗಳಲ್ಲಿ ಮತ್ತು ಇಂಟರ್ ಮೀಡಿಯೆಟ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಶ್ರೀಯುತರು ೧೯೫೮ ರಲ್ಲಿ ಮಿಲಿಟರಿ ಸೇವೆಗೆ ಸೇರ್ಪಡೆಯಾಗಿ ನೌಕರಿಯಲ್ಲಿದ್ದುಕೊಂಡೇ ಬಿ.ಎ. ಪದವಿಯನ್ನು ಪಡೆದುಕೊಂಡಿರುತ್ತಾರೆ. ೧೯೬೬ರ ಮೇ ೨ನೇ ತಾರೀಖು ಶ್ರೀಮತಿ ಗಾಯಿತ್ರಿ ದೇವಿಯವರೊಂದಿಗೆ ವಿವಾಹವಾದರು. ಮಿಲಿಟರಿಯಲ್ಲಿ ಸುಬೇದಾರ್ ಹಂತದಲ್ಲಿ ಕಾರ್ಯನಿರ್ವಹಿಸಿ ೧೯೭೫ರಲ್ಲಿ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡರು. ನಿವೃತ್ತಿಯ ನಂತರ ತುಮಕೂರು ಜಿಲ್ಲೆ ಒಳಕಲ್ಲು ಗ್ರಾಮದಲ್ಲಿ ನೆಲಸಿ ಸಮಾಜ ಸೇವಾಕರ್ತರಾಗಿ ಸೇವೆ ಸಲ್ಲಿಸುತ್ತಾ ೧೯೮೫ ರಲ್ಲಿ ತುಮಕೂರು ಜಿಲ್ಲೆಯ ಸಾದರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸಮಾಜದ ಸೇವೆಯನ್ನು ಪ್ರಾರಂಭಿಸಿದರು. ಆ ಕಾಲದಲ್ಲಿ ತುಮಕೂರಿನಲ್ಲಿರುವ ವಿದ್ಯಾರ್ಥಿನಿಲಯದ ಕಟ್ಟಡದ ಹಿಂಭಾಗದ ಖಾಲಿಯಿದ್ದ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಶಿಕ್ಷಣ ಇಲಾಖೆಯವರು ಅಡ್ಡಪಡಿಸಿ ತಕರಾರು ತೆಗೆದಾಗ, ಅಂದಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿದ್ದ ಶ್ರೀ ಎ.ಆರ್. ಇಂನ್‌ಫೆಂಟ್ ಐ.ಪಿ.ಎಸ್. ರವರ ಸಹಭಾಗಿತ್ವದಲ್ಲಿ ಅಂದಿನ ಕೇಂದ್ರ ಸಂಘ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ವಿವಾದವನ್ನು ಬಗೆಹರಿಸಿ ಸಮಾಜದ ಮತಬಾಂದವರು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕೆಳಅಂತಸ್ಥಿನ ಕಟ್ಟಡ ಕಟ್ಟಿಸಿ ಲೋಕಾರ್ಪಣೆ ಮಾಡಿಸಿದರು.
೧೯೯೬-೯೭ ರಲ್ಲಿ ಹಳೇ ವಿದ್ಯಾರ್ಥಿನಿಲಯದಲ್ಲಿ ಕೊಠಡಿಗಳ ಕೊರತೆ ಇದ್ದುದನ್ನು ಮನಗಂಡು ಕೇಂದ್ರ ಸಂಘದ ಸಹಕಾರ ಪಡೆದು ಮೊದಲನೇ ಅಂತಸ್ಥಿನಲ್ಲ್ಲಿ ೧೮ ಕೊಠಡಿಗಳನ್ನು ಸುಮಾರು ೨೫ ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿಸಿ ಪೂಜ್ಯ ಶ್ರೀ ಶ್ರೀ ತರಳ ಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಚಾರ್ಯ ಮಹಾ ಸ್ವಾಮಿಗಳವರಿಂದ ಉದ್ಘಾಟಿಸಿ, ಶ್ರೀ ಡಿ. ರಾಮಯ್ಯನವರ ಪತ್ನಿ ಶ್ರೀಮತಿ ಚನ್ನಮ್ಮ ಮತ್ತು ಮಾವ ಬಿ.ಎನ್. ನಾಗರಾಜು ರವರ ಹೆಸರಿನಲ್ಲಿ ಸಮಾಜಕ್ಕೆ ದಾನವಾಗಿ ನೀಡಿರುತ್ತಾರೆ. ಅಲ್ಲದೇ ಕೇಂದ್ರ ಸಂಘದಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಶ್ರೀಯುತರು ಹಲವಾರು ಸಂಘ ಸಂಸ್ಥೆಗಳಿಗೆ ಉದಾರವಾಗಿ ದನ ಸಹಾಯ ಮಾಡಿರುವುದಲ್ಲದೆ ಗೌರಿಬಿದನೂರು, ಮಧುಗಿರಿ, ಹಿಂದೂಪುರ ತಾಲ್ಲೂಕು ಸಂಘಗಳ ಕಟ್ಟಡಗಳಿಗೆ ನಿಧಿಯನ್ನು ಕೊಟ್ಟಿರುತ್ತಾರೆ. ೨೦೦೮ ರಲ್ಲಿ ಕೇಂದ್ರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬೆಂಗಳೂರಿನ ಸಮುದಾಯ ಭವನದ ಸಭಾ ಭವನ ಮತ್ತು ಬೆಂಗಳೂರಿನ ವಿದ್ಯಾರ್ಥಿನಿಲಯದ ೨ನೇ ಅಂತಸ್ಸಿನಲ್ಲಿ ದಾನಿಗಳ ಸಹಕಾರ ಮತ್ತು ಸರ್ಕಾರದ ಅನುದಾನದಿಂದ ಕೊಠಡಿಗಳನ್ನು ನಿರ್ಮಿಸಲಾಯಿತು. ತುಮಕೂರಿನ ಬಟವಾಡೆಯಲ್ಲಿದ್ದ ಸಂಘದ ಖಾಲಿ ನಿವೇಶನದ ತಕರಾರು ಕೋರ್ಟ್ ನಲ್ಲಿದ್ದಾಗ ಮತ್ತು ಅನಧಿಕೃತ ಪರಭಾರೆಯನ್ನು ತಡೆಯಲು ವಿದ್ಯಾರ್ಥಿನಿಲಯದ ವಿದಾರ್ಥಿಗಳ ಸಹಕಾರದಿಂದ ನಿವೇಶ ಭದ್ರಪಡಿಸುವ ಕಾರ್ಯದಲ್ಲಿ ಶ್ರೀಯುತರ ಪಾತ್ರ ಹಿರಿದು. ಈ ನಿವೇಶನದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಸಂದರ್ಭದಲ್ಲಿ ಲಕ್ಷಾಂತರ ರೂಗಳನ್ನು ಸಾಲದ ರೂಪದಲ್ಲಿ ನೀಡಿ ಕಟ್ಟಡ ಕಾಮಗಾರಿ ಸುಸೂತ್ರವಾಗಿ ಮುಂದುವರೆಸಲು ಶ್ರೀಯುತರು ಅನುವಾಗಿರುತ್ತಾರೆ. ಶ್ರೀಯುತರ ಆರ್ಥಿಕ ನೆರವು ಅತ್ಯಂತ ಸ್ಮರಣೀಯ. ೨೦೧೪ ರಲ್ಲಿ ಕೇಂದ್ರ ಸಂಘಕ್ಕೆ ಶ್ರೀಯುತರು ತುಮಕೂರು ತಾಲ್ಲೂಕು, ಒಳಕಲ್ಲುಗ್ರಾಮದಲ್ಲಿ ಸುಮಾರು ೧ ಕೋಟಿ ರೂಗಳಷ್ಟು ಬೆಲೆ ಬಾಳುವ ೩.೦೩ ಎಕರೆ ಜಮೀನನ್ನು ಉದಾರವಾಗಿ ದಾನ ನೀಡಿರುತ್ತಾರೆ.
ಫ್ರಸ್ತುತ ಸಮಾಜಿಕ ಕಾರ್ಯಗಳಿಂದ ನಿವೃತ್ತರಾಗಿ ವಿಶ್ರಾಂತಿ ಜೀವನವನ್ನು ನಡೆಸುತ್ತಿರುವ ಶ್ರೀಯುತರಿಗೆ ಭಗವಂತನು ಆಯುರಾರೋಗ್ಯವನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ. “ಹಣ ಇದ್ದವರಿಗೆಲ್ಲ ನೀಡುವ ಗುಣವಿರುವುದಿಲ್ಲ” ಎಂಬ ನಾಣ್ನುಡಿಗೆ ವಿರುದ್ದವೆಂಬಂತೆ ಇದ್ದವರು ಡಿ. ರಾಮಯ್ಯನವರು. ದಿ|| ಮಂಡಿ ಹರಿಯಣ್ಣನವರಂತೆ, ಉದಾರ ವ್ಯಕ್ತಿತ್ವವುಳ್ಳ, ಕೊಡುಗೈದಾನಿಗಳಾದ ಶ್ರೀಯುತ ಡಿ. ರಾಮಯ್ಯನವರ ಸಾಮಾಜಿಕ ಕಳಕಳಿ, ಸಮಾಜಕ್ಕಾಗಿ ಸದಾ ಮಿಡಿವ ಮನಸ್ಸು, ವಿದ್ಯಾಭ್ಯಾಸಕ್ಕಾಗಿ ಒತ್ತು ನೀಡಿ ವಸತಿ ನಿಲಯಗಳ ನಿರ್ಮಾಣ ಮತ್ತು ನಿರಂತರವಾಗಿ ಸಮಾಜದ ಕಾರ್ಯಗಳಲ್ಲಿ ಭಾಗಿಗಳಾಗುವ ಶ್ರೀಯುತರ ಅನನ್ಯ ಸೇವೆಯನ್ನು ಪರಿಗಣಿಸಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ (ರಿ) ಬೆಂಗಳೂರು ರವರು“ಶ್ರೀಯುತ ಮಂಡಿ ಹರಿಯಣ್ಣ” ಪ್ರಶಸ್ತಿಗೆ ಮೊಟ್ಟ ಮೊದಲ ಭಾರಿಗೆ ಶ್ರೀಯುತ ಶ್ರೀ ಡಿ. ರಾಮಯ್ಯನವರು ಬಾಜನರಾಗಿರುವುದು ಪ್ರಶಸ್ತಿಯನ್ನು ಸಂದಾಯ ಮಾಡಿದ್ದಾರೆ. ಇದು ಶ್ರೀಯುತರಿಗೆ ಸಂದ ಗೌರವ ಮತ್ತು ಸಮಾಜದ ಹೆಮ್ಮೆಯ ಪ್ರತೀಕ.
|
ಸಾತ್ವಿಕ ರಾಜಕಾರಣಿ ಶ್ರೀಮಾನ್ ದಿ. ಲಕ್ಷ್ಮೀನರಸಿಂಹಯ್ಯ ರವರು ಮಾಜಿ ಮಂತ್ರಿಗಳು, ಮಾಜಿ ವಿಧಾನ ಪರಿಷತ್ ಸಭಾಪತಿಗಳು, ಕರ್ನಾಟಕ ಸರ್ಕಾರ
|
ತುಮಕೂರು ಜಿಲ್ಲೆ ಕಂಡ ಸಾತ್ವಿಕ ಗುಣಧರ್ಮಗಳ ಭಂಡಾರವಾಗಿದ್ದ ಕೀರ್ತಿಶೇಷ ಶ್ರೀ ಲಕ್ಷ್ಮೀನರಸಿಂಹಯ್ಯ ನವರು ದಿನಾಂಕ: ೦೭-೧೧-೧೯೩೫ ರಲ್ಲಿ ಕ್ಯಾತಸಂದ್ರಕ್ಕೆ ಹೊಂದಿಕೊಂಡಂತಿರುವ ಚೌಡಯ್ಯನಪಾಳ್ಯ ಗ್ರಾಮದಲ್ಲಿ ಸಜ್ಜನ ಚೌಡಯ್ಯನವರು ಮತ್ತು ಶ್ರೀಮತಿ ಸಾಕಮ್ಮ ನವರ ಪುತ್ರರತ್ನರಾಗಿ ಜನಿಸಿದರು. ಶ್ರೀಯುತರು ಕ್ಯಾತಸಂದ್ರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ತುಮಕೂರಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡಿ ೧೯೫೮ ರಲ್ಲಿ ಎಲೆಕ್ಟ್ರಿಕಲ್ ಡಿಪ್ಲೋಮೋ ಇಂಜನಿಯರ ಪದವಿಧರರಾದರು. ಹುಟ್ಟೂರಿನ ಜನತೆಗೆ ಪ್ರೀತಿಯ ಲಚ್ಚಣ್ಣ ಆಗಿದ್ದ ಶ್ರೀಯುತರು ವಿದ್ಯಾರ್ಥಿ ದಿಸೆಯಿಂದಲೂ ಒಳ್ಳೆಯ ಪುಟ್‌ಬಾಲ್ ಆಟಗಾರರು. ಕ್ಯಾತಸಂದ್ರದಲ್ಲಿ ಫ್ರೆಂಡ್ಸ್ ಯೂನಿಯನ್ ಹೆಸರಿನಲ್ಲಿ ತಂಡಕಟ್ಟಿ, ರಾಜ್ಯಮಟ್ಟಕ್ಕೆ ಕೀರ್ತಿಯನ್ನು ಕೊಂಡೊಯ್ದ ಹಿರಿಮೆ ಅವರದು. ವೃತ್ತಿಗಾಗಿ ಕಮಲ ಎಲೆಕ್ಟ್ರಿಕಲ್ ಸ್ಟೋರ‍್ಸ್ ತುಮಕೂರಿನ ಅಶೋಕ ರಸ್ತೆಯಲ್ಲಿ ಪ್ರಾರಂಭಿಸಿ ಗ್ರಾಮಾಂತರ ಪ್ರದೇಶಗಳ ಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟು ಜನಾನುರಾಗಿಯಾದರು. ಕ್ರಮೇಣ ರಾಜಕೀಯರಂಗ ಪ್ರವೇಶಿಸಿದರು. ೧೯೬೯ರಲ್ಲಿ ಸಂಸ್ಥಾ ಕಾಂಗ್ರೆಸ್‌ನ ಸದಸ್ಯರಾದರು ತಮ್ಮ ಸರಳವಾದ ನಡೆ ನುಡಿಗಳಿಂದ ಎಲ್ಲರ ಮನಗೆದ್ದರು. ಜಯಪ್ರಕಾಶ್‌ನಾರಾಯಣರ ನೇತೃತ್ವದಲ್ಲಿ ಆರಂಭವಾದ ಜನತಾ ಪಕ್ಷದ ಜಿಲ್ಲಾ ನೇತಾರರಾಗಿ ಜಿಲ್ಲಾ ರಾಜಕೀಯರಂಗದ ಕಣ್ಮಣಿಗಳಾದರು. ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿ ೧೯೭೭ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೆ ಒಳಗಾದರು. ಬೆಂಗಳೂರಿನ ಸೆಂಟ್ರಲ್ ಜೈಲ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ, ಜಾರ್ಜ್ ಫರ್ನಾಂಡೀಸ್, ರಾಮಕೃಷ್ಣ ಹೆಗಡೆ ಅವರೊಡಗೂಡಿಗೆ ಒಂದು ವರ್ಷಕ್ಕೂ ಮೇಲ್ಪಟ್ಟು ಜೈಲುಸೆರೆವಾಸ ಅನುಭವಿಸಿದರು. ಲಚ್ಚಣ್ಣನವರ ಆಪ್ತ ಸ್ನೇಹಿತರಲ್ಲಿ ಪ್ರಮುಖರಾದವರೆಂದರೆ ಶ್ರೀಯುತ ಆರ್.ಎಲ್. ಜಾಲಪ್ಪ, ಶ್ರೀಯುತ ಸಿದ್ದರಾಮಯ್ಯ, ಶ್ರೀಯುತ ಆರ್. ವಿ. ದೇಶಪಾಂಡೆ ರವರು. ೧೯೮೩ ರಲ್ಲಿ ಮೊದಲಬಾರಿಗೆ ಎಂ.ಎಲ್.ಎ.ಆಗಿ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಹಲವು ವರ್ಷಗಳಕಾಲ ಸೇವೆಯನ್ನು ಸಂದಾಯ ಮಾಡಿದರು. ರಾಜ್ಯ ಸರ್ಕಾರದ ವಿದ್ಯುತ್ ಖಾತೆ ರಾಜ್ಯ ಸಚಿವರಾಗಿ ಹಾಗೂ ಸಂಪುಟ ದರ್ಜೆ ಸಚಿವರಾಗಿ ರಾಮಕೃಷ್ಣ ಹೆಗಡೆಯವರ ಮಂತ್ರಿ ಮಂಡಲದಲ್ಲಿ ಲಕ್ಷ್ಮೀನರಸಿಂಹಯ್ಯ ರಾಜ್ಯದ ಉತ್ತಮ ಸಚಿವರೆನಿಸಿದರು. ಕೆಲಕಾಲ ತೋಟಗಾರಿಕೆ ಸಚಿವರಾಗಿಯೂ ಸೇವೆ ಸಂದಾಯ ಮಾಡಿದ ಹಿರಿಮೆ ಅವರದು. ರೈತಾಪಿ ಕುಟುಂಬದಿಂದ ಬಂದ ಇವರಿಗೆ ರೈತರ ಬಗ್ಗೆ ಅಪಾರವಾದ ಕಳಕಳಿಯಿತ್ತು. ಅವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಮೀಣ ಜನರ ಪುರೋಭಿವೃದ್ಧಿಗಾಗಿ ಮಾಡಿದ ಘನಕಾರ್ಯಗಳು ಅತ್ಯಂತ ಸ್ಮರಣೀಯ. ರೈತರಿಗೆ, ಉದ್ಯಮಿಗಳಿಗೆ, ಸಾರ್ವಜನಿಕರಿಗೆ ತೃಪ್ತಿಕರವಾಗಿ ವಿದ್ಯುತ್ ಒದಗಿಸಿದ ಕೀರ್ತಿ ದಿವಂಗತರಿಗೆ ಸಲ್ಲುತ್ತದೆ. ೧೯೮೭ ರಲ್ಲಿ ವಿದ್ಯುತ್ ಮತ್ತು ಜಲವಿದ್ಯುತ್ ಯೋಜನೆಗಳ ರಾಜ್ಯ ಸಚಿವರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ ಧನ್ಯರಾದರು ಮಾನ್ಯರಾದರು. ಲಕ್ಷ್ಮೀನರಸಿಂಹಯ್ಯನವರು ಆಸ್ತಿಕರಾಗಿದ್ದು ಗುರು, ದೇವರುಗಳಲ್ಲಿ ಅಪಾರ ಭಕ್ತಿ ಗೌರವಾಧಾರಗಳನ್ನು ಇಟ್ಟುಕೊಂಡಿದ್ದರು. ಅವರ ಮನೆಯ ದೇವರು ಶೆಟ್ಟಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪ್ರಾಂತಲ ಚಿತ್ತದಿಂದ ಕೈಗೆತ್ತಿಕೊಂಡು ಹಲವಾರು ವರ್ಷಗಳ ಕಾಲ ಜೀರ್ಣೋದ್ಧಾರ ಸಮಿತಿ ನೇತಾರರಾಗಿ ದುಡಿದ ಹೆಗ್ಗಳಿಕೆ ಅವರದ್ದು. ಮಾನ್ಯರಿಗೆ ಶ್ರೀ ಸಿದ್ಧಗಂಗಾ ಮಠ ಹಾಗೂ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳೆಂದರೆ ಅಪಾರ ಗೌರವ. ಅವರ ಬದುಕಿನ ಕೊನೆಯ ದಿನದ ತನಕ ಶ್ರೀಗಳೊಂದಿಗೆ ಅವಿನಾಭಾವ ಬಾಂಧವ್ಯವನ್ನು ಇರಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಎದ್ದಾಗ ಶ್ರೀ ಶ್ರೀಗಳ ಬೆಂಗಾವಲಿಗೆ ನಿಂತು ಶ್ರೀಯುತ ಲಕ್ಷ್ಮೀನರಸಿಂಹಯ್ಯನವರು ಅಂದಿನ ಮುಖ್ಯ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯವರ ಪ್ರೀತಿ ವಿಶ್ವಾಸವನ್ನು ಗಳಿಸಿ ಶ್ರೀ ಕ್ಷೇತ್ರದ ಪಾವಿತ್ರ್ಯ ಕಾಪಾಡಿದ ಹೆಗ್ಗಳಿಕೆ ಇವರದು. ಶ್ರೀಗಳ ಜನೋಪಕಾರ್ಯಗಳನ್ನು, ದಾಸೋಹದ ಮಹತ್ವವನ್ನು, ಅಕ್ಷರದಾನವನ್ನು, ಆಶ್ರಿತ ಗುಣವನ್ನು ಕಂಡ ಇವರು ಕ್ಷೇತ್ರದ ಅಪ್ಪಟ ಉತ್ಕಟಾಭಿಮಾನಿಗಳಾಗಿದ್ದರು. ಹುಟ್ಟೂರಿನ ಋಣ ತೀರಿಸಿದ ಜಿಲ್ಲಾ ರಾಜಕಾರಣಿಗಳ ಪಟ್ಟಯಲ್ಲಿ ಶ್ರೀ ಲಕ್ಷ್ಮೀನರಸಿಂಹಯ್ಯ ಮೊದಲಿಗರೆಂದರೆ ತಪ್ಪಾಗಲಾರದು. ತುಮಕೂರು ನಗರಕ್ಕೆ ಅಮೂಲ್ಯ ಕಾಣಿಕೆ ನೀಡಿ, ನಗರ ಹಾಗೂ ಜಿಲ್ಲಾ ಕೇಂದ್ರದ ಹಿರಿಮೆ ಹೆಚ್ಚಿಸಿದರು, ಇವರ ಕ್ರಿಯಾಶೀಲ ಶಕ್ತಿಯಿಂದ ಜಿಲ್ಲಾ ಕೇಂದ್ರವಾದ ತುಮಕೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಛೇರಿ, ಆರ್.ಟಿ.ಓ. ಕಛೇರಿ ಕಟ್ಟಡ ನಿರ್ಮಾಣಗೊಂಡಿತು. ಜನರಲ್ ಆಸ್ಪತ್ರೆಗೆ ಕಾಯಕಲ್ಪ ನೀಡಿ, ಸಾಕಷ್ಟು ಸುಧಾರಣೆಗೊಳಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ರೂಪಿಸಿದ ಹೆಗ್ಗಳಿಕೆ ಇವರದ್ದು. ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ವೃತ್ತದಿಂದ ಕ್ಯಾತಸಂದ್ರದ ತನಕ ಬೀದಿ ದೀಪ ಬೆಳಗುವಂತೆ ಮಾಡಿ ತುಮಕೂರು ನಗರ ಅಭಿವೃದ್ಧಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆ ಹೆಚ್ಚು ಸ್ಮರಣೀಯ. ನಗರಕ್ಕೆ ಕುಡಿಯುವ ನೀರು, ರೈತರ ಬೇಸಾಯದ ಜಮೀನಿಗೆ ನೀರು ಒದಗಿಸುತ್ತಿದ್ದ ಮೈದಾಳದ ಕೆರೆಗೆ ನೀರಿನ ಸಂಪನ್ಮೂಲ ಅಭಿವೃದ್ಧಿ ಪಡಿಸಲು ಫೀಡರ್ ಚಾನಲ್ ನಿರ್ಮಿಸಿದ ಕೀರ್ತಿ ಇವರದಾಗಿದೆ. ಸಾತ್ವಿಕ ರಾಜಕಾರಣಿ ಶ್ರೀಯುತ ಲಕ್ಷ್ಮೀನರಸಿಂಹಯ್ಯ ೧೯೮೭ ರಲ್ಲಿ ಅಖಿಲ ಕರ್ನಾಟಕ ೨೭ನೇಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅರ್ಥ ಪೂರ್ಣವಾಗಿ ನಡೆಸಿದ ಕೀರ್ತಿ ಇವರದಾಗಿದೆ. ಸ್ಕೌಟ್ ಜಾಂಬೂರಿಯನ್ನು ರಾಜ್ಯಮಟ್ಟದಲ್ಲಿ ಅತ್ಯಂತ ಉನ್ನತ ಸ್ತರದಲ್ಲಿ ಆಯೋಜಿಸಿ, ಜಿಲ್ಲೆಗೆ ಕೀರ್ತಿತಂದ ಶಿಲ್ಪಿ ಇವರಾಗಿದ್ದಾರೆ. ಕಲೆ-ಸಾಹಿತ್ಯ-ಸಂಗೀತ-ಕ್ರೀಡೆ ಮುಂತಾದ ಹಲವು ಸಮ್ಮೇಳನ, ಕಾರ್ಯಾಗಾರ, ಶಿಬಿರಗಳನ್ನು ನಡೆಸಿದ ಹಿರಿಮೆ ಇವರದಾಗಿದೆ. ಶ್ರೀಯುತರು ತಮ್ಮ ಸಮಾಜ ಸಾದರ ಜನಾಂಗದ ಬಗ್ಗೆ ಅತ್ಯಂತ ಪ್ರೀತಿಯುಳ್ಳವರಾಗಿದ್ದರು. ಜನಾಂಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸದಾ ಮುಂದಾಗಿರುತ್ತಿದ್ದರು. ಸಾಮಾನ್ಯ ಜನರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದರು. ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದರು, ದೀನರ, ದಲಿತರ, ಅಶಕ್ತರ ಪಾಲಿಗೆ ನೆರವಾಗುತ್ತಿದ್ದ ಶ್ರೀ ಲಕ್ಷ್ಮೀನರಸಿಂಯ್ಯನವರು ಶ್ರೀ ಸಾಮಾನ್ಯರ ಪಾಲಿನ ಅಸಾಮಾನ್ಯ ನಾಯಕರಾಗಿ ಮಿಂಚಿದರು. ಅವರು ಶಾಸಕರಾಗಿ, ಸಚಿವರಾಗಿಯೂ ಶುದ್ಧ ಹಸ್ತರಾಗಿ ಸೇವೆ ಸಲ್ಲಿಸಿ ಯಾವುದೇ ಅಪವಾದಗಳಿಗೆ ಗುರಿಯಾಗದೆ ಹಿಂದುಳಿದ ವರ್ಗಗಳ ಧ್ವನಿಯಾಗಿ ನಿಂತರು. ಪ್ರತೀಕಾರಕ್ಕೆ ಪ್ರತೀಕಾದ ಮಾಡದ ಅವರ ಸ್ವಭಾವ ಅನುಕರಣೀಯ ಮಾತ್ರವಲ್ಲ; ಅಧಿಕಾರವಿದ್ದಾಗ ಬೀಗದೆ ಅಧಿಕಾರವಿಲ್ಲದಾಗ ಕುಗ್ಗದೆ ರಾಜಕೀಯ ರಂಗದಲ್ಲಿ ಸ್ಥಿತಪ್ರಜ್ಞರಾಗಿ ಬಾಳಿ, ಬೆಳಗಿದರು. ಶ್ರೀಯುತರು ಅನಾರೋಗ್ಯದ ಕಾರಣ ದಿನಾಂಕ: ೨೧-೧೨-೨೦೦೦ ರಂದು ನಮ್ಮನ್ನು ಅಗಲಿದರು. ೬೫ ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ ಸಜ್ಜನ ರಾಜಕಾರಣಿ ಅಪಾರ ಅಭಿಮಾನಿ ಬಳಗ ಮತ್ತು ಸಮಾಜದವರ ಪಾಲಿಗೆ ಸ್ಮರಣೀಯರಾದರು.
|
ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರುರವರು ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ
|
ಡಾ||ಮುಖ್ಯಮಂತ್ರಿ ಚಂದ್ರು ಎಂಬ ಹೆಸರು ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಕಿರುತೆರೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಉತ್ತಮ ವಾಗ್ಮಿಗಳು, ಹಾಸ್ಯ ಪ್ರಜ್ಞೆಯುಳ್ಳವರೂ, ಸ್ನೇಹವಂತರು, ನೇರ ನಡೆ-ನುಡಿಗೆ ಹೆಸರಾದ, ಬದ್ಧತೆ-ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಂಕಷ್ಟದಲ್ಲಿ ಸ್ನೇಹಿತರಿಗಾಗಿ ಮರುಗುವ ಹೃದಯಂತ ಸಜ್ಜನ, ನಮ್ಮ ಚಂದ್ರುರವರು. ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರದ ಶ್ರೀಮತಿ ತಿಮ್ಮಮ್ಮ ಮತ್ತು ಶ್ರೀ ಎನ್.ನರಸಿಂಹಯ್ಯನವರ ೧ನೇಯವರಾಗಿ ಜನಸಿದ ಶ್ರೀಯುತ ಹೆಚ್.ಎನ್.ಚಂದ್ರಶೇಖರ್, ಮೂವರ ಸಹೋದರಿಯರ ತುಂಬು ಕುಟುಂಬ. ಜನನ: ೨೮-೦೮-೧೯೫೩ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹೊನ್ನಸಂದ್ರದಲ್ಲಿ, ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವೀಧರರಾದರು, ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದು. ೧೯೭೦ ರಿಂದಲೇ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ೧೯೮೩ ಜೂನ್ ೨೩ ರಂದು ಶ್ರೀಮತಿ ಚಂದ್ರಮ್ಮ ಮತ್ತು ಶ್ರೀ ಕೆ.ಆರ್.ದೊಡ್ಡರಂಗಯ್ಯ ಕಡವಿಗೆರೆ, ಇವರ ಪುತ್ರಿಯಾದ ಪದ್ಮಾರೊಂದಿಗೆ ವಿವಾಹವಾಯಿತು. ಭರತ್, ಶರತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಡಾ||ಮುಖ್ಯಮಂತ್ರಿ ಚಂದ್ರ-ವ್ಯಕ್ತಿ ಪರಿಚಯ ಡಾ|| ಮುಖ್ಯಮಂತ್ರಿ ಚಂದ್ರು ತಾ: ೨೮-೦೮-೧೯೫೩ರಂದು ಜನಿಸಿರುತ್ತಾರೆ. ಇವರು ವಿಜ್ಞಾನ ಪದವೀಧರರಾಗಿದ್ದು, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ. ಇವರು ಕರ್ನಾಟಕ ಸರ್ಕಾರದಿಂದ ನೇಮಕವಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸುಮಾರು ೧೦ ವರ್ಷಗಳವರೆಗೆ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಹೆಸರಾಂತ ರಂಗ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುತ್ತಾರೆ. ಇವರು ಮುಖ್ಯಮಂತ್ರಿ, ಮೂಕಿ-ಟಾಕಿ, ಎಲ್ಲಾರು ಮಾಡುವುದು, ಇವೇ ಮುಂತಾದ ಹಲವು ನಾಟಕಗಳ ನಿರ್ದೇಶನ ಮಾಡಿರುತ್ತಾರೆ. ೫೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಮುಖ್ಯಮಂತ್ರಿ ನಾಟಕದಲ್ಲಿ ಇವರು ನಿರ್ವಹಿಸಿದ ಮುಖ್ಯಮಂತ್ರಿ ಪಾತ್ರವು ಇವರಿಗೆ ಅಪಾರ ಯಶಸ್ಸನ್ನು ತಂದುಕೊಟ್ಟಿದೆ. ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ ಚಂದ್ರು ಎಂಬ ಖ್ಯಾತಿಯನ್ನು ನೀಡಿತು. ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶಿಷ್ಟವಾದ ಅಭಿನಯ ಮತ್ತು ಮಾತುಗಾರಿಕೆಯಿಂದ ಕನ್ನಡದ ಜನಮನ ಗೆದ್ದಿದ್ದಾರೆ. ಖ್ಯಾತ ಚಿತ್ರ ಚಕ್ರವ್ಯೂಹದಿಂದ ಆರಂಭವಾಗಿ- ಡಕೋಟ ಪಿಕ್ಚರ‍್ಸ್‌ರವರೆಗೆ ಸುಮಾರು ೪೬೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ. ಉತ್ತಮ ನಿರ್ದೇಶಕ-ರಾಜ್ಯ ಪ್ರಶಸ್ತಿ, ಉತ್ತಮ ನಟ ಮುಂತಾದ ಹಲವು ಪ್ರಶಸ್ತಿಗಳು ಇವರ ಮುಡಿಗೇರಿ ಇವರ ಯಶಸ್ಸಿಗೆ ಶೋಭೆಯನ್ನು ತಂದಿರುತ್ತದೆ. ವಿಶ್ವ ಕನ್ನಡ ಸಮ್ಮೇಳನ, ಮ್ಯಾಂಚೆಸ್ಟರ್, ಇಂಗ್ಲೆಂಡ್, ವಿಶ್ವ ಶಾಂತಿ ಸಮ್ಮೇಳನ, ಪ್ಯಾರಿಸ್ ಮತ್ತು ಅಕ್ಕ ಸಮ್ಮೇಳನ, ಚಿಕಾಗೊ, ನಾವಿಕ - ನಾವು ವಿಶ್ವ ಕನ್ನಡಿಗರು ಸಮ್ಮೇಳನ, ಲಾಸ್ ಏಂಜಲೀಸ್‌ಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ಬೆಂಗಳೂರಿನ ಲಾ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕನಾಗಿ ಚಂದ್ರು ಗಮನ ಸೆಳೆದರು. ರಾಜಕೀಯವಾಗಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ೧೯೮೫ ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿರುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ೨೦೦೮ ರಲ್ಲಿ ನೇಮಕಗೊಂಡಿದ್ದು ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಾದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿ ಅತಿ ಹೆಚ್ಚು ಅಂಕಗಳಿಸಿದ ರಾಜ್ಯ ಹಾಗೂ ಹೊರರಾಜ್ಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ. ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ, ನ್ಯಾಯಾಲಯದಲ್ಲಿ ಕನ್ನಡದಲ್ಲೆ ತೀರ್ಪುನೀಡಿದ ನ್ಯಾಯಾಧೀಶರಿಗೆ ಕನ್ನಡ ಪುರಸ್ಕಾರ, ಗಣಕದಲ್ಲಿ ಕನ್ನಡ, ಕನ್ನಡೇತರರಿಗೆ ಕನ್ನಡ ಕಲಿಸಲು ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ತರಬೇತಿ, ಕಾರ್ಖಾನೆಗಳಿಗೆ ಭೇಟಿ, ಪರಿಶೀಲನಾ ಸಭೆ, ಕಾರ್ಖಾನೆಗಳಲ್ಲಿ ಕನ್ನಡ ಕಲಿಕೆ, ಕನ್ನಡ ನುಡಿತೇರು, ಕನ್ನಡ ನುಡಿ ಉತ್ಸವ, ಸೊಗಡಿನ ಸುದ್ದಿ, ಕನ್ನಡ ಚಿಂತನೆ, ಭಾಷಾ ಭಾವೈಕ್ಯ ಸಮಾವೇಶ, ಗಡಿನಾಡ ಸಮಾವೇಶ, ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ, ಹೊರನಾಡ ಕನ್ನಡಿಗರ ಸಮಾವೇಶ, ಕಾರ್ಮಿಕರಿಗೆ ಕನ್ನಡ ಜಾಗೃತಿ – ಮುಂತಾದ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ರಕ್ಷಣೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಡಾ|| ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ. ಕನ್ನಡ ನಾಡು-ನುಡಿ ಗಡಿ ಸಮಸ್ಯೆಗಳ ಮೇಲೆ ವಿಶೇಷ ಬೆಳಕು ಚೆಲ್ಲುವ ಹಿನ್ನಲೆಯಲ್ಲಿ ನಾಡು-ನುಡಿ ಅಧ್ಯಯನ ವರದಿಯಲ್ಲಿ ಆಡಳಿತದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡ, ನ್ಯಾಯಾಂಗದಲ್ಲಿ ಕನ್ನಡ, ಗಣಕದಲ್ಲಿ ಕನ್ನಡ, ಒಳನಾಡ ಮತ್ತು ಹೊರನಾಡ ಕನ್ನಡಿಗರ ಸಮಸ್ಯೆಗಳ ಬಗೆಗಿನ ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ರಾಷ್ಟ್ರೀಯ ಶಿಕ್ಷಣ ನೀತಿ, ರಾಷ್ಟ್ರೀಯ ಉದ್ಯೋಗ ನೀತಿ, ರಾಷ್ಟ್ರೀಯ ಜಲ ನೀತಿ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಗೆ ಸ್ವಾಯತ್ತತೆ ಪಡೆಯಲೆಂದು ರಾಷ್ಟ್ರದ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಿಯೋಗವನ್ನು ಎರಡು ಬಾರಿ ದೆಹಲಿಗೆ ಕರೆದುಕೊಂಡು ಹೋದ ಹೆಗ್ಗಳಿಕೆ ಇವರದಾಗಿದೆ. ಗಡಿ ಪ್ರದೇಶಗಳಲ್ಲಿನ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರಕ್ಕಾಗಿ ಕೈಗೊಂಡ ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಜಾಥವು ಕರ್ನಾಟಕದ ಪ್ರನುಖ ಕನ್ನಡ ಚಳುವಳಿಗಳಲ್ಲಿ ಒಂದು (೪೫ ದಿನಗಳ ೭೦೦೦ ಕಿ.ಮೀ. ಜಾಥಾ) ಈ ಜಾಥದ ಮೂಲಕ ೫೨ ಗಡಿ ತಾಲ್ಲೂಕುಗಳ ಕನ್ನಡಿಗರ ಬವಣೆಯನ್ನು ಕುರಿತು ಸಿದ್ದಪಡಿಸಿದ ಮುಖ್ಯಮಂತ್ರಿ ಚಂದ್ರು ವರದಿ ಖಾಸಗಿ ನಿರ್ಣಯವಾಘಿ ವಿಧಾನ ಪರಿಷತ್ತಿನಲ್ಲೂ ಮಂಡಿಸಲಾಗಿದೆ. ಕನ್ನಡ ಪರ ಕಾಳಜಿ, ವಿಧಾನಸೌಧದ ಒಳಗೆ ಮತ್ತು ಹೊರಗೆ ಚಂದ್ರುರವರ ಹೋರಾಟವನ್ನು ಗಮನಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ೨೦೧೦ನೇ ಸಾಲಿನ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರ ಕಾಲಾವಧಿಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಗಳು: ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು, ಬಯಲು ಸೀಮೆ ಭಾಷಾ ವೈವಿದ್ಯತೆ, ದೇಸೀ ಮಾತು, ನುಡಿ ಸೊಗಡು, ಆಡಳಿತ ಪದಕೋಶ, ಆಡಳಿತದಲ್ಲಿ ಕನ್ನಡ (ಆದೇಶಗಳು), ಆಡಳಿತ ಕನ್ನಡ (ಪ್ರಬಂಧಗಳು), ದಾರಿದೀವಿಗೆ, ಕನ್ನಡ ಜಾನಪದ ನಿಘಂಟು, ಕರ್ನಾಟಕ ಸಂಗಾತಿ, (ಪರಿಷ್ಕೃತ ಆವೃತ್ತಿ) ಗಡಿ ಕನ್ನಡಿಗರ ಕಥೆ-ವ್ಯಥೆ ೨೦೦೬, ಜೋಯಿಡಾ ವರದಿ (೨೦೦೯), ನಾಡು ನುಡಿ ಅಧ್ಯಯನ ವರದಿ, ನಡೆ-ನುಡಿ ಹಾದಿ (೫ ವರ್ಷದ ಸಾಧನೆ). ವಿದೇಶಗಳಲ್ಲಿ ಕನ್ನಡ ಅಧ್ಯನ ಪೀಠಗಳು: ಊಸ್‌ಬರ್ಗ್ ವಿಶ್ವವಿದ್ಯಾಲಯ, ಮುನಿಚ್ ವಿಶ್ವವಿದ್ಯಾಲಯ, ಹೈಡ್‌ಲಬರ್ಗ್ ವಿಶ್ವವಿದ್ಯಾಲಯ, ವಿಯನ್ನಾ ವಿಶ್ವವಿದ್ಯಾಲಯ. ಕನ್ನಡ ಸಮ್ಮೇಳನ ಮತ್ತು ಕಲಿಕಾ ಕೇಂದ್ರ: ಕಥಾರ್, ಕುವೈತ್, ಅಬುದಾಬಿ, ದುಬೈ, ಬೆಹೆರೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುರೋಪ್ ಖಂಡದಲ್ಲಿ ೧೫ ದೇಶಗಳು. ಡಾ||ಮುಖ್ಯಮಂತ್ರಿ ಚಂದ್ರು-ವ್ಯಕ್ತಿ ವಿವರ ಸ್ಥಾನಮಾನಗಳು ೨೦೦೮: ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೧೦ : ಕನ್ನಡ ಪರ ಕಾಳಜಿ ಮತ್ತು ಹೋರಾಟವನ್ನು ಗಮನಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ೨೦೦೪-೨೦೧೦: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ೧೯೯೮-೨೦೦೪: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ೧೯೮೫-೧೯೯೦: ಶಾಸಕರು, ಕರ್ನಾಟಕ ವಿಧಾನ ಸಭೆ ೨೦೦೦: ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ ೧೯೯೫-೯೬: ಸದಸ್ಯರು, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ. ೧೯೯೮-೯೯: ಸದಸ್ಯರು, ಹಕ್ಕು ಭಾಧ್ಯತಾ ಸಮಿತಿ ೧೯೮೭-೮೯: ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ ೧೯೮೮: ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಪ್ರತಿನಿಧಿ ೧೯೮೭: ಲಂಡನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ೧೯೭೫-೧೯೮೫: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಅನುಭವ ಹವ್ಯಾಸಗಳು: ಕ್ರೀಡೆ, ಪ್ರವಾಸ, ಓದುವುದು, ಕವನ ಬರೆಯುವುದು, ಯೋಗ, ಮೂಕಾಭಿನಯ ಮತ್ತು ಅಭಿನಯ. ಸಾಮಾಜಿಕ ಚಟುವಟಿಕೆಗಳು: ಮಾನವ ಹಕ್ಕುಗಳ ಸಂರಕ್ಷಣೆ, ಜನಜಾಗೃತಿ ಮೂಡಿಸುವುದು, ವ್ಯವಸ್ಥೆಯಲ್ಲಿನ ದುರಾಡಳಿತವನ್ನು ಕೊನೆಗೊಳಿಸುವುದು ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸುವುದು ಯುವಕರಲ್ಲಿ ಅವರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುವುದು. ಕಾರ್ಗಿಲ್ ಯುದ್ದದ ಸಮಯದಲ್ಲಿ ಸೇವೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಗಿಲ್ ನಿಧಿ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತು ರಾಜಕೀಯ ಹಾಗೂ ಸಿನಿಮಾ ರಂಗಗಳಿಂದ ನಿಧಿ ಸಂಗ್ರಹಿಸಿ ಸಲ್ಲಿಸಿರುವುದು. ರಂಗಕಲೆ: ೧೨ ವರ್ಷದ ಬಾಲಕನಾಗಿರುವಾಗಿನಿಂದ ಶಾಲಾ ದಿನಗಳಲ್ಲೆ ನಾಟಕದಲ್ಲಿ ಭಾಗವಹಿಸುವ ಆಸಕ್ತಿ. ೧೯೭೦ ರಿಂದಲೇ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು. ನಟನಾಗಿ, ನಿರ್ದೇಶಕನಾಗಿ, ತಂತ್ರಜ್ಞನಾಗಿ, ಸಂಘಟಕನಾಗಿ ಹಾಗೂ ಶ್ರೇಷ್ಠ ಮೂಕಾಭಿನಯ ಕಲಾವಿದನಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವುದು. ನಿರ್ದೇಶಕರು: ಬಿ.ವಿ.ಕಾರಂತ, ಡಾ ಹೆಚ್.ಕೆ.ರಂಗನಾಥ, ಪ್ರೊ: ಬಿ.ಚಂದ್ರಶೇಖರ್, ಮೇಕಪ್ ನಾಣಿ ಶ್ರೀಮತಿ ಪ್ರೇಮಾಕಾರಂತ, ಪ್ರಸನ್ನ, ಆರ್.ನಾಗೇಶ್, ಟಿ.ಎನ್.ಸೀತಾರಾಮ್, ಡಾ. ಬಿ.ಜಯಶ್ರೀ, ವಿ.ರಾಮಮೂರ್ತಿ, ಟಿ.ಎನ್.ನರಸಿಂಹನ್, ಡಾ. ಬಿ.ವಿ.ರಾಜಾರಾಂ, ಶ್ರೀಮತಿ ಆರ್.ಟಿ.ರಮಾ, ಜಿ.ಜಿ.ಕೃಷ್ಣಸ್ವಾಮಿ, ಡಾ. ಕೆ.ಆರ್.ಎಸ್.ಶರ್ಮ ಮುಂತಾದ ಪ್ರಸಿದ್ಧ ರಂಗ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವ. ಸುಮಾರು ೧೫ ಕ್ಕೂ ಹೆಚ್ಚಿನ ಸಂಖ್ಯೆಯ ನಾಟಕಗಳಿಗೆ ನಿರ್ದೇಶನ ಮಾಡಿರುವ ಅನುಭವ. ನಟನೆ: ಭಾರತದ ಬೇರೆ ಬೇರೆ ನಗರಗಳಲ್ಲಿ ಜಿಲ್ಲೆಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳಲ್ಲಿ ಸುಮಾರು ನೂರು ನಾಟಕಗಳ ೩೦೦೦ ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುತ್ತಾರೆ. ವಿದೇಶಗಳಲ್ಲೂ ಸಹ ಹಲವಾರು ಪ್ರದರ್ಶನಗಳನ್ನು ನೀಡಿರುತ್ತಾರೆ. ನಾಲ್ಕು ದಶಕಗಳ ರಂಗಸೇವೆ ಮಾಡಿರುತ್ತಾರೆ. ಮೂಕಾಭಿನಯ: ಮೂಕಾಭಿನಯದಲ್ಲಿ ನೈಪುಣ್ಯತೆಯನ್ನುಗಳಿಸಿ. ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೂಕಾಭಿನಯ ಕಲಾವಿದರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಶ್ರೀ ಜೋಗೇಶ್ ದತ್ತ ಕೊಲ್ಕತ್ತ. ಅಮೇರಿಕಾದ ಆಡಮ್ ಅಬ್ರಾಹಂ, ಕರ್ನಾಟಕದ ಪ್ರಸಿದ್ಧ ನಿರ್ದೇಶಕರಾದ ಶ್ರೀ ವಿ.ರಾಮಮೂರ್ತಿ ಅವರಲ್ಲಿ ಮೂಕಾಭಿನಯ ತರಬೇತಿ ಪಡೆದಿದ್ದಾರೆ. ವಿದೇಶಗಳಲ್ಲಿ ಮೂಕಾಭಿನಯ ಪ್ರದರ್ಶನ: ೧೯೮೭ ರಿಂದ ೧೯೮೯ ರ ಅವಧಿಯಲ್ಲಿ ಲಂಡನ್, ಪ್ಯಾರಿಸ್, ರೋಮ್, ಸ್ವಡ್ಜರ್‌ಲ್ಯಾಂಡ್, ಆಮ್‌ಸ್ಟರ್‌ಡಮ್, ಬೆಲ್ಜಿಯಂ, ಸಿಂಗಪುರ, ಹಾಂಗ್‌ಕಾಂಗ್ ಮತ್ತು ಮಲೇಶಿಯಾಗಳಲ್ಲಿ ಪ್ರದರ್ಶನಗಳನ್ನು ನೀಡಿರುತ್ತಾರೆ. ಪ್ರಶಸ್ತಿಗಳು: ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅಚಲಾಯತನ’ ನಾಟಕ ನಿರ್ದೇಶನ ಮಾಡಿದ್ದಕ್ಕಾಗಿ ಅತ್ಯುತ್ತಮ. ನಿರ್ದೇಶನ ಪ್ರಶಸ್ತಿ. ಕರ್ನಾಟಕ ನಾಟಕ ಅಕಾಡೆಮಿಯಿಂದ, ಅತ್ಯುತ್ತಮ ನಟನೆ ಮತ್ತು ರಂಗ ಪ್ರದರ್ಶನಕ್ಕಾಗಿ ೧೯೯೯ ರಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ. ನೂರಾರು ಸಂಘ-ಸಂಸ್ಥೆಗಳಿಂದ ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ ಮತ್ತು ಅಣಕು ಪ್ರದರ್ಶನಕ್ಕಾಗಿ, ಹಾಸ್ಯ ಭಾಷಣಗಳಿಗಾಗಿ ಪ್ರಶಸ್ತಿಗಳನ್ನು ಮತ್ತು ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ. ಅಭಿನಯಿಸಿದ ಪ್ರಮುಖ ನಾಟಕಗಳು: ‘ಮುಖ್ಯಮಂತ್ರಿ’ ನಾಟಕದಲ್ಲಿ ಪ್ರಮುಖ ಪಾತ್ರನಾದ ಮುಖ್ಯಮಂತ್ರಿ ಪಾತ್ರವನನು (ಸುಮಾರು ೫೦೦ಕ್ಕೂ ಹೆಚ್ಚಿನ ಪ್ರದರ್ಶನಗಳು- ಕನ್ನಡ ರೂಪ.ಟಿ.ಎಸ್, ಲೋಹಿತಾಶ್ವ, ನಿರ್ದೇಶನ ಡಾ.ಬಿ.ವಿ.ರಾಜಾರಾಂ) ಯಶಸ್ವಿಯಾಗಿ ಅಭಿನಯಿಸಿದ್ದಕ್ಕಾಗಿ ‘ಮುಖ್ಯಮಂತ್ರಿ ಚಂದ್ರ’ ಎಂಬ ಹೆಸರು ಜನಪ್ರಿಯವಾಯಿತು. ಪ್ರಸನ್ನ ಅವರು ನಿರ್ದೇಶಿಸಿದ ಮ್ಯಾಕ್ಸಿಂಗಾರ್ಕಿ ಅವರ ‘ತಾಯಿ’ ನಾಟಕ. ಡಾ|| ಡಿ.ಆರ್.ನಾಗರಾಜ್ ಅವರು ರಚಿಸಿದ ವಾರ್ಡ್ ನಂ. ೬ ಆಧಾರಿತ, ಟಿ.ಎನ್.ನರಸಿಂಹನ್ ನಿರ್ದೇಶನದ ‘ಕತ್ತಲೆದಾರಿ ದೂರ’ ನಾಟಕ. ಡಾ|| ಬಿ.ಜಯಶ್ರೀ ಅವರು ನಿರ್ದೇಶಿಸಿದ ಹಾಗೂ ವಿಜಯ ತೆಂಡೂಲ್ಕರ್ ಅವರು ರಚಿಸಿದ ‘ಫಾಶೀರಾಮ್ ಕೊತ್ವಾಲ್’ ನಾಟಕ. ಚಲನಚಿತ್ರ: ೩ ದಶಕಗಳ ಕಾಲ ಚಲನಚಿತ್ರ ಕಲಾವಿದರಾಗಿ ಅಭಿನಯಿಸಿದ್ದಾರೆ. ಕೆಲವು ಚಲನಚಿತ್ರಗಳು ಚಕ್ರವ್ಯೂಹ, ಪಣಿಯಮ್ಮ, ಪ್ರಜಾಪ್ರಭುತ್ವ, ಗಜೇಂದ್ರ, ಶಬ್ದವೇಧಿ, ಗುರಿ, ಒಂದು ಮುತ್ತಿನ ಕಥೆ, ಕೋತಿಗಳ ಸಾರ್ ಕೋತಿಗಳು, ಸಿಂಧೂರ ತಿಲಕ, ಗೋಲ್‌ಮಾಲ್ ರಾಧಾಕೃಷ್ಣ, ಮುತ್ತಿನಹಾರ, ಗಣೇಶನ ಮದುವೆ, ಬೀಗರ ಪಂದ್ಯ, ಜ್ವಾಲಾಮುಖಿ, ಶಾಂತಿಕ್ರಾಂತಿ, ನಮ್ಮೂರ ರಾಜ, ಮಿಲನ, ಮಾಲಾಶ್ರೀ, ಪೋಲೀಸನ ಹೆಂಡತಿ, ಬೆಂಕಿ, ಚಾಣಕ್ಯ, ಇಂದ್ರನ ಗೆದ್ದ ನರೇಂದ್ರ, ಕಿತ್ತೂರು ಹುಲಿ, ಬಲಗಾಲಿಟ್ಟು ಒಳಗೆ ಬಾ, ಜಿದ್ದು, ಡಕೋಟ ಪಿಕ್ಚರ್ ಸೇರಿದಂತೆ ನಾಲ್ಕುನೂರ ಆರವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಯುತರು ೧೯೭೦ ರಲ್ಲೇ ಬೆಂಗಳೂರಿನ ಸಮುದಾಯ ಭವನದ ಮೇಲ್ಚಾವಣಿಗಾಗಿ ಒಂದು ಕಲಾವಿದರ ಸಹಾಯಾರ್ಥ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿ ಹಣ ಸಂದಾಯ ಮಾಡಿರುತ್ತಾರೆ. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ೨೦೦೫ ರಲ್ಲಿ ತಮ್ಮ ವಿಶೇಷ ಅನುಧಾನದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿಲಯ ಕೊಠಡಿಗಳ ನಿರ್ಮಾಣಕ್ಕೆ ೨೦ ಲಕ್ಷ ರೂ, ಗೌರಿಬಿದನೂರು ಗ್ರಂಥಾಲಯಕ್ಕೆ ೧೫ ಲಕ್ಷ ರೂ, ತುಮಕೂರು ಸಮುದಾಯ ಭವನಕ್ಕೆ ೨೦ ಲಕ್ಷ ರೂಗಳ ಹಣ ಸಹಾಯ ನೀಡಿದ್ದಾರೆ. ೨೦೦೮ ರಲ್ಲಿ ಮಧುಗಿರಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ೧೫ ಲಕ್ಷ, ಶಿರಾದಲ್ಲಿ ಸಮುಧಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ, ಕೊರಟಗೆರೆ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ ಮತ್ತು ಕೊಡಗೇನಹಳ್ಳಿ ಸಮುದಾಯ ಭವನಕಾಗಿ ೧೦ ಲಕ್ಷರೂಗಳ ಅನುದಾನ ಸೇರಿ ಒಟ್ಟು ೧.೧೫ ಕೋಟಿ ರೂಗಳ ಹಣ ವಿನಿಯೋಗಿಸಿದ್ದಾರೆ. ಗೌರಿಬಿದನೂರು ಸಮತಾ ಪ್ರೌಢಶಾಲೆ ಸರ್ಕಾರದ ಅನುಧಾನಕ್ಕೆ ಒಳಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಯುತರು ಸದಾ ಕಾಲ ಸಂಘ ಸಮಾಜದ ಕಾರ್ಯಗಳಲ್ಲಿ ನೆರವಿನ ಮಹಾಪೂರವೇ ಹರಿಸಿದ್ದಾರೆಂದರೆ ತಪ್ಪಾಗಲಾರದು.
::: ವಿವಿಧ ತಾಲ್ಲೂಕು ಸಂಘಗಳ ಅಭಿವೃದ್ಧಿಯ ಪಕ್ಷಿ ನೋಟ :::
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಕೇಂದ್ರ ಸಂಘ, ಬೆಂಗಳೂರು
|
1917 ರಲ್ಲಿ ಪೂಜ್ಯ ಶ್ರೀ ಮಂಡಿ ಹರಿಯಣ್ಣ ನವರ ಆಸಕ್ತಿ ಯಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭವಾದ ಉಚಿತ ವಿದ್ಯಾರ್ಥಿನಿಲಯ, ಮುಂದೆ 1943 ರಲ್ಲಿ ಸಾದುಮತದ(ಸಾದರ) ವಿದ್ಯಾಭಿವೃದ್ದಿ ಸಂಘವಾಗಿ ವಿದ್ಯಾರ್ಥಿ ನಿಲಯವನ್ನು ಮುಂದುವರಿಸುವ ಹೊಣೆ ಹೊತ್ತು ಇದೀಗ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ವಾಗಿ ಪ್ರಸ್ತುತ ೬ ತಾಲ್ಲೂಕು ಶಾಖೆಗಳನ್ನು ಒಳಗೊಂಡು, ಎಲ್ಲಾ ಪದಾಧಿಕಾರಿಗಳ ಅವಿಶ್ರಾಂತ ಪರಿಶ್ರಮದ ಫಲವಾಗಿ ಎಲ್ಲಾ ತಾಲ್ಲೂಕು ಕೇಂದ್ರ ಗಳಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಾ ಪ್ರಗತಿಯಲ್ಲಿದೆ,
|
1917 ರಿಂದ 1942 ರವರೆಗೂ ಪೂಜ್ಯ ಮಂಡಿ ಹರಿಯಣ್ಣನವರು ತಮ್ಮ ಸ್ವಂತ ಕಟ್ಟಡದಲ್ಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. 1943 ರಲ್ಲಿ "ಸಾದು ಮತದ ಸಂಘ" ಎಂದು ನೋದಾಯಿಸಲ್ಪಟ್ಟ ನಂತರ ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ಸಹಕಾರದಿಂದ ನಿಲಯ ನಿರ್ವಹಣೆ ಮಾಡಲಾಯಿತು.
|
|
|
ವಿದ್ಯಾರ್ಥಿನಿಲಯದ ನಿವೇಶನವನ್ನು 1972 ರಲ್ಲಿ ನಮ್ಮ ಹಿರಿಯರಾದ ದಿ||ಶ್ರೀಯುತ ಎಂ.ಎಸ್ ಮಲ್ಲಯ್ಯ ನವರು, ದಿ|| ಬಿ.ಕೆ ಶಿವಲಿಂಗಪ್ಪ ನವರು ಮತ್ತು ದಿ||ಎಂ.ಹೆಚ್ ರಾಜು ರವರು ಹಾಗೂ ಇತರರ ಶ್ರಮದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರಾದ ಮಹಾಲಕ್ಷ್ಮಿಪುರಂ ನ ನಿವೇಶನದಲ್ಲಿ ದಾನಿಗಳ ಸಹಕಾರದಿಂದ 1977 ರಲ್ಲಿ ಸಮುದಾಯ ಭವನ ನಿರ್ಮಿಸಲಾಯಿತು. ೧೯೮೦ ರಲ್ಲಿ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನೆರವೇರಿತು. 2008-20012 ರ ಅವದಿಯಲ್ಲಿ ಮೊದಲ ಅಂತಸ್ತಿನಲ್ಲಿ ದಾನಿಗಳ ನೆರವಿನಿಂದ ಕೊಠಡಿಗಳನ್ನು ನಿರ್ಮಿಸಲಾಯಿತು. 2002 ರಲ್ಲಿ ಮಂಡಿ ಹರಿಯಣ್ಣನವರ ಕುಟುಂಬದವರು ಸುಸಜ್ಜಿತ "ಪೂಜ್ಯ ಮಂಡಿ ಹರಿಯಣ್ಣನವರ ಸ್ಮಾರಕ ಭವನ" ವನ್ನು ಸುಮಾರು ೭-೮ ಲಕ್ಷ ರೂಪಾಯಿ ಖರ್ಚು ಮಾಡಿ ಒಂದು ಭವ್ಯ ಸಭಾಂಗಣವನ್ನು ನಿರ್ಮಿಸಿ ಪೂಜ್ಯ ಹರಿಯಣ್ಣನವರ ನೆನಪಿನ ಕೊಡುಗೆಯಾಗಿ ಸಂಘಕ್ಕೆ ಕೊಟ್ಟಿದ್ದಾರೆ.
|
ಕೇಂದ್ರ ಕಛೇರಿಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯದ ಎರಡನೇ ಹಂತದ ಕಟ್ಟಡವನ್ನು ನಮ್ಮ ಸಮುದಾಯದ ರಾಜಕೀಯ ನೇತಾರರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಶ್ರೀಯುತ ಡಾ|| ಮುಖ್ಯಮಂತ್ರಿ ಚಂದ್ರು ರವರ ಸಹಕಾರದಿಂದ 20 ಲಕ್ಷ ರೂಗಳ ಅನುದಾನ ದಲ್ಲಿ ನಿರ್ಮಿಸಲಾಗಿದೆ. 2014 ರಲ್ಲಿ ಶ್ರೀ ರವಿಕುಮಾರ್ ಡಿ.ಈ. ರವರ ಆಡಳಿತ ಮಂಡಳಿ ಸಮುದಾಯ ಭವನ ಮತ್ತು ವಿದ್ಯಾರ್ಥಿನಿಲಯವನ್ನು ಸಂಪೂರ್ಣ ನವೀಕರಿಸಲಾಯಿತು. |
|
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ತುಮಕೂರು
|
ಶ್ರೀಮಾನ್ ದಿ. ಎಂ. ಎಸ್ ಮಲ್ಲಯ್ಯನವರು ಕೇಂದ್ರ ಸಂಘದ ಕಾರ್ಯದರ್ಶಿಯಾಗಿದ್ದಾಗ 1970 ರಲ್ಲಿ ತುಮಕೂರಿನಲ್ಲಿ ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿನಿಲಯ ಪ್ರಾರಂಭಿಸಲು ಕ್ರಮತೆಗೆದುಕೊಂಡರು. ನಂತರ ೧೯೭೧ ರಲ್ಲಿ ಸಂಘವು ತನ್ನದೇ ಆದ ಕಟ್ಟಡವನ್ನು ವಿದ್ಯಾರ್ಥಿನಿಲಯಕ್ಕೆ ಖರೀದಿಸಿತು. ಬೆಂಗಳೂರು ರೇಸ್ ಕೋರ್ಸ್ ಹತ್ತಿರದಲ್ಲಿದ್ದ ನಿವೇಶನವನ್ನು ೧.೨೨ ಲಕ್ಷಕ್ಕೆ ಮಾರಿ ಆ ಹಣದಿಂದ ತುಮಕೂರು ವಿದ್ಯಾರ್ಥಿನಿಲಯದ ಕಟ್ಟಡವನ್ನು ೫೦೦೦೦/- ರೂಪಾಯಿಗಳಿಗೆ 1971 ರಲ್ಲಿ ಕೊಂಡುಕೊಳ್ಳಲಾಯಿತು. ಡಿಸೆಂಬರ್ 1989 ಕ್ಕೆ ಇದರ ಮೂಲ ಬೆಲೆ ೩,೦೫,೬೧೦/- ರೂ. ಆಗಿತ್ತು. ತುಮಕೂರಿನಲ್ಲಿ ನಮ್ಮ ಸಂಘದ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮತ್ತು ಬಟವಾಡೆ ಗ್ರಾಮದಲ್ಲಿಯ ನಿವೇಶನವನ್ನು ಕೊಳ್ಳುವುದರಲ್ಲಿ ತುಮಕೂರಿನ ಪ್ರಮುಖ ವ್ಯಕ್ತಿಗಳಾದ ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು, ಶ್ರೀ ಬಿ.ಕೆ. ಚಿಕ್ಕಣ್ಣನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರಿಗೆ ತುಮಕೂರು ತಾಲ್ಲೂಕು ಸಂಘದ ಮತ್ತು ಕೇಂದ್ರ ಸಂಘದ ಪದಾಧಿಕಾರಿಗಳ ಸಹಕಾರ ಕೊಟ್ಟು 1987 ರಲ್ಲಿ ಕೆಲಸ ಸಾದಿಸಿದರು. ತುಮಕೂರಿನಲ್ಲಿ ಸಂಘದ ಸ್ಥಾಪನೆ ಮತ್ತು ಸಂಘದ ವಿದ್ಯಾರ್ಥಿನಿಲಯವನ್ನು ಉತ್ತಮ ರೂಪಕ್ಕೆ ತಂದು ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರಿಂದ ಉದ್ಗಾಟನೆ ಮಾಡಿಸಿ, ಸಂಘವು ಅಭಿವೃದ್ಧಿಗೊಳ್ಳುವಲ್ಲಿ ಶ್ರೀ ಡಿ ರಾಮಯ್ಯನವರು, ದಿ.ಶ್ರೀ ಡಿ.ಆರ್ ಮುದ್ದಪ್ಪ ನವರು ಮತ್ತು ಶ್ರೀ ಲಕ್ಷ್ಮೀನರಸಿಂಹಯ್ಯನವರು ಸಾಕಷ್ಟು ಶ್ರಮಿಸಿದ್ದಾರೆ. |
ಪ್ರಸ್ತುತ ವಿದ್ಯಾರ್ಥಿನಿಲಯದ ನಿರ್ವಹಣಾ ಖರ್ಚು-ವೆಚ್ಚವನ್ನು ಕೇಂದ್ರ ಸಂಘವೇ ಭರಿಸುತ್ತಿದೆ. 1997 ರಲ್ಲಿ ತುಮಕೂರಿನ ವಿಧ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳಿಗನುಗುಣವಾಗಿ ಕೊಠಡಿಗಳ ಕೊರತೆಯುಂಟಾದಾಗ, ಕೊಡುಗೈ ದಾನಿಗಳು, ಸಮಾಜದ ಹಿರಿಯ ಬಂಧುಗಳಾದ ಒಳಕಲ್ಲು ಗ್ರಾಮದ ಶ್ರೀಯುತ ಡಿ. ರಾಮಯ್ಯ ನವರು ಸುಮಾರು ೧೨ ಲಕ್ಷ ರೂ. ಗಳ ವೆಚ್ಚದಲ್ಲಿ ತುಮಕೂರಿನಲ್ಲಿರುವ ವಿದ್ಯಾರ್ಥಿ ನಿಲಯದ ಮೊದಲನೇ ಅಂತಸ್ತಿನಲ್ಲಿ ೧೨ ಕೊಠಡಿಗಳನ್ನು ಉಚಿತವಾಗಿ ಕಟ್ಟಿಸಿಕೊಟ್ಟು ಉದಾರತೆಯನ್ನು ಮೆರೆದಿದ್ದಾರೆ. ಶ್ರೀಯುತರ ಸೇವೆ ಅನನ್ಯ ಮತ್ತು ಅಮೂಲ್ಯ ವಾದದ್ದು. ತುಮಕೂರಿನ ವಿದ್ಯಾರ್ಥಿನಿಲಯದ ಎರಡನೇ ಅಂತಸ್ತಿನಲ್ಲಿ 2007 ರಲ್ಲಿ ತುಮಕೂರಿನ ಜನಪ್ರಿಯ ಸಂಸದರಾದ ಶ್ರೀ ಜಿ.ಎಸ್. ಬಸವರಾಜು ರವರ ಸಂಸದರ ನಿಧಿಯಿಂದ ಸುಮಾರು ೨ ಲಕ್ಷ ರೂಗಳ ವೆಚ್ಚದಲ್ಲಿ ಒಂದು ಮಿನಿ ಸಮುದಾಯ ಭವನ ವನ್ನು ನಿರ್ಮಿಸಲಾಗಿದೆ. ೨೦೧೩ ರಲ್ಲಿ ತುಮಕೂರು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ೨ ಲಕ್ಷ ರೂಗಳ ವೆಚ್ಚದಲ್ಲಿ ವಿದ್ಯಾರ್ಥಿನಿಲಯದ ಎರಡನೇ ಅಂತಸ್ಥಿನಲ್ಲಿ ೩ ಕೊಠಡಿಗಳನ್ನು ನಿರ್ಮಿಸಲಾಗಿದೆ. ವಾಣಿಜ್ಯೋದ್ಯಮಿಗಳಾದ ಶ್ರೀ ಶಿವಶಂಕರ್ ಮತ್ತು ನಿಲಯದ ಹಳೇ ವಿದ್ಯಾರ್ಥಿಗಳಾದ ಶ್ರೀ ಪದ್ಮರಾಜು ರವರು ಅಡುಗೆ ಕೊಠಡಿ, ಊಟದ ಹಾಲ್ ಮತ್ತು ಶೌಚಾಲಯ ಕೊಠಡಿಗಳನ್ನು 2013 ರಲ್ಲಿ ನವೀಕರಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ವತಿಯಿಂದ ನಿಲಯದ ಮುಂಭಾಗ ತಂತಿ ಕಾಂಪೌಂಡ್ ಹಾಕಿಸಲಾಗಿದೆ ಮತ್ತು ಕೇಂದ್ರ ಸಂಘದ ವತಿಯಿಂದ ನಿಲಯದ ಕಟ್ಟಡಕ್ಕೆ ಸಂಪೂರ್ಣ ಬಣ್ಣ ಬಳಿಸಿ ನವಿಕರಿಸಲಾಗಿದೆ.
|
|
|
ತುಮಕೂರಿನ ಬಟವಾಡೆ ಗ್ರಾಮದ ನಿವೇಶನ ಕೊಳ್ಳುವಲ್ಲಿ ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರ ಪಾತ್ರ ಅತ್ಯಂತ ಸ್ಮರಣೀಯ. ಈ ನಿವೇಶನವು ಮೂಲತಃ ಕ್ತಾತ್ಸಂದ್ರದ ಜಲ್ಲಿ ಗುಂಡಪ್ಪನವರದ್ದು. ಸಮಾಜದ ಹಿರಿಯ ರಾಜಕೀಯ ಧುರೀಣರು , ಸದ್ಗುಣ ಸಂಪನ್ನರು, ಮಾಜಿ ವಿದ್ಯುತ್ ಖಾತೆ ಸಚಿವರಾಗಿದ್ದ, ದಿ|| ಪೂಜ್ಯ ಶ್ರೀ ಲಕ್ಷ್ಮೀನರಸಿಂಹಯ್ಯ ನವರಲ್ಲಿ ಮಾರಾಟದ ಬಗ್ಗೆ ಪ್ರಸ್ತಾಪಿಸಿದಾಗ, ಲಕ್ಷ್ಮೀನರಸಿಂಹಯ್ಯ ನವರು ನನಗೆ ಬೇಡ ನಮ್ಮ ಸಂಘಕ್ಕೆ ಕೊಡಿಸಬೇಕೆಂದು ತೀರ್ಮಾನಿಸಿದ ಫಲವಾಗಿ ನಮ್ಮ ಸಂಘಕ್ಕೆ ಈ ಸ್ವತ್ತು ಸುಮಾರು ೩೭ ಗುಂಟೆ 1970 ರಲ್ಲಿ ಕ್ರಯವಾಯಿತು. ತದನಂತರ ಸದರಿ ನಿವೇಶನದ ಉತ್ತರ ಭಾಗದಲ್ಲಿದ್ದ ಸ್ವತ್ತಿನ ಮಾಲೀಕರು ಕೋರ್ಟಿನಲ್ಲಿ ದಾವೆ ಹೂಡಲಾಗಿ ಸುಮಾರು 12 ವರ್ಷಗಳ ಕಾಲ ನಮ್ಮ ಸಮಾಜದ ವಕೀಲರಾದ ಶ್ರೀಯುತ ಪಿ.ಜಿ. ರಾಮಚಂದ್ರಪ್ಪ ರವರು ಉಚಿತವಾಗಿ ವಕಾಲತ್ತು ವಹಿಸಿ ನಮ್ಮ ಪರವಾಗಿ ತೀರ್ಪು ಬರಲು ಸಹಕರಿಸಿರುತ್ತಾರೆ. ಕಾಲಾಂತರದಲ್ಲಿ ತುಮಕೂರು ನಗರಾಭಿವೃದಿ ಪ್ರಾಧಿಕಾರದ ಅಧಿಕಾರಿಗಳು ಕುತಂತ್ರದಿಂದ ಸದರಿ ಸ್ವತ್ತನ್ನು ಸಿ.ಡಿ.ಪಿ ಯಲ್ಲಿ ಆಟದ ಮೈದಾನ ಮತ್ತು ಉದ್ಯಾನವನಕ್ಕೆಂದು ಮೀಸಲಿಟ್ಟು ನಮಗೆ ನಿರುಪಯೋಗವಾಗುವಂತೆ ಮಾಡಿದ್ದರು. ಆ ಸಮಯದಲ್ಲಿ ದಿ|| ಲಕ್ಷ್ಮೀನರಸಿಂಹಯ್ಯನವರು ಆಸಕ್ತಿ ವಹಿಸಿ, ಸದರಿ ಅಧಿಕಾರಿಯನ್ನು ಅದೇ ಕಾರಣಕ್ಕೆ ವರ್ಗಾವಣೆ ಮಾಡಿಸಿ, ಸದರಿ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ-೪ ಹಾದುಹೊಗಿದ್ದು ಉಳಿದಂತೆ ಸುಮಾರು ೨೦ ಗುಂಟೆ ಜಾಗ ವನ್ನು ಸರ್ಕಾರದ ಮಟ್ಟದಲ್ಲಿ ಸದರಿ ಜಾಗವನ್ನು 1997 ರಲ್ಲಿ ವಾಣಿಜ್ಯ ಉಪಯೋಗಕ್ಕಾಗಿ ಪರಿವರ್ತಿಸಿ ಕೊಟ್ಟಿರುತ್ತಾರೆ.
|
ಸದರಿ ಜಾಗದಲ್ಲಿ ಆಗಿನ ಕೇಂದ್ರ ಸಂಘದ ಆಡಳಿತ ಮಂಡಳಿಯು, ತುಮಕೂರು ತಾಲ್ಲೂಕು ಸಮಿತಿಯೊಂದಿಗೆ ಕೂಡಿ ಕಾರ್ಯಪ್ರೌರುತ್ತರಾಗಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾದಾಗ ಶ್ರೀಯುತ ಶ್ರೀ ಡಿ ರಾಮಯ್ಯನವರು ವಾರ್ಷಿಕ ಶೇ ೯ ರ ಬಡ್ಡಿ ಧರದಲ್ಲಿ ೧೦ ಲಕ್ಷ ರೂಗಳ ಹಣ ಸಹಾಯ ಮಾಡಿರುತ್ತಾರೆ. ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರು ತಮ್ಮ ಅನುದಾನದಲ್ಲಿ ೨೦ ಲಕ್ಷ ರೂ ಗಳ ಧನ ಸಹಾಯ ನೀಡಿದ್ದು, ಅದರೊಂದಿಗೆ ಹಲವಾರು ದಾನಿಗಳ ಸಹಕಾರದಿಂದ ಮತ್ತು ತುಮಕೂರು ತಾಲ್ಲೂಕು ಸಮಿತಿ ಹಾಗೂ ಕಟ್ಟಡ ನಿರ್ಮಾಣ ಸಮಿತಿ ಯವರ ಪರಿಶ್ರಮದಿಂದ ಸುಮಾರು ೧ ಕೋಟಿ ರೂಗಳ ವೆಚ್ಚದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ ಕಟ್ಟಡ 2010 ರಲ್ಲಿ ನಿರ್ಮಾಣಗೊಂಡಿತು. ಇದಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರಿಗೂ ಸಂಘವು ಆಭಾರಿಯಾಗಿರುತ್ತದೆ. 2013 ರಲ್ಲಿ ಶ್ರೀಯುತ ಕೆ. ಉಗ್ರಪ್ಪ ನವರ ಒತಾಸೆಯಂತೆ ವಿದ್ಯಾರ್ಥಿನಿಯರಿಗಾಗಿ ವಸತಿನಿಲಯವನ್ನು ಶಾರದಾದೇವಿನಗರದ ಬಾಡಿಗೆ ಕಟ್ಟಡದಲ್ಲಿ ತುಮಕೂರು ತಾಲ್ಲೂಕು ಸಂಘ ಪ್ರಾರಂಭಿಸಲಾಯಿತು. ಅದೇ ವರ್ಷದಲ್ಲೇ ತುಮಕೂರಿನ ಖ್ಯಾತ ಕೈಗಾರಿಕೋದ್ಯಮಿಗಳಾದ ಶ್ರೀ ರವಿಶಂಕರ್ ಮತ್ತು ಶ್ರೀಮತಿ ಪುಷ್ಪ ರವಿಶಂಕರ್ ರವರು ತುಮಕೂರಿನ ದೇವರಾಯಪಟ್ಟಣದಲ್ಲಿ ಸುಮಾರು ೩೦ ಲಕ್ಷ ಬೆಲೆ ಬಾಳುವ ನಿವೇಶನವನ್ನು ದಾನವಾಗಿ ಸಂಘಕ್ಕೆ ನೀಡಿರುತ್ತಾರೆ.ಪ್ರಸ್ತುತ ನಿವೇಶನದಲ್ಲಿ ೪ ಅಂತಸ್ತಿನ ಭವ್ಯ ಸುಸಜ್ಜಿತ ವಾಸ್ತುಶಿಲ್ಪ ಕಟ್ಟಡ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಅನೇಕ ದಾನಿಗಳ ಸಹಕಾರ ಸಹಾಯ ಹಸ್ತವಿದ್ದು, ಎಲ್ಲರನ್ನು ಸಂಘ ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ.
|
|
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಗೌರಿಬಿದನೂರು
|
ಗೌರಿಬಿದನೂರಿನಲ್ಲಿ 1970-71 ನೇ ಸಾಲಿನಿಂದ ಬಾಡಿಗೆ ಮನೆಯಲ್ಲಿ ಹಾಸ್ಟಲ್ ನಡೆಸಿಕೊಂಡು ಬರುತ್ತಿದ್ದು ಮುನಿಸಿಪಾಲಿಟಿಯಿಂದ ೨೦,೮೬೦/- ರೂ. ಗಳಿಗೆ ಒಂದು ನಿವೇಶನವನ್ನು ಕೊಂಡುಕೊಳ್ಳಲಾಯಿತು. 1984 ರಲ್ಲಿ ಈ ನಿವೇಶನವನ್ನು ೨೬-೮೦೪ ರೂ. ಗಳಿಗೆ ಮಾರಿ ಈಗ ಹಾಲಿ ಹಾಸ್ಟೆಲ್ ಇರುವ ಕಟ್ಟಡವನ್ನು ಶ್ರೀ ಆಂಜನೇಯ ಗೌಡರಿಂದ ೨೨.೦೦೦ ರೂಪಾಯಿಗಳಿಗೆ ಕೊಳ್ಳಲಾಯಿತು. ಈ ಹಣವನ್ನು ಆಂಜನೇಯ ಗೌಡರು ಪುನಃ ಹಿಂದಕ್ಕೆ ಕೊಟ್ಟು ನಿವೇಶನವನ್ನು ದಾನವಾಗಿ ಕೊಟ್ಟಿದ್ದಾರೆ. ಈ ನಿವೇಶನದಲ್ಲಿರುವ ಕಟ್ಟಡದ ಬೆಲೆ ಡಿಸೆಂಬರ್ 1986 ಕ್ಕೆ ೪.೦೦,೦೦೦ ರೂಪಾಯಿ ಆಗಿದೆ. |
ಗೌರಿಬಿದನೂರಿನಲ್ಲಿ 1986 ರವರೆವಿಗೂ ವಿದ್ಯಾರ್ಥಿನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಸಿಕೊಂಡು ಬಂದರೂ ಈಗ ನಮ್ಮದೇ ವಿದ್ಯಾರ್ಥಿ ನಿಲಯದ ಕಟ್ಟಡ ಇದ್ದರೂ ಸಾಕಷ್ಟು ವಿದ್ಯಾರ್ಥಿಗಳು ಬಾರದೇ ಇರುವುದರಿಂದ ವಿದ್ಯಾರ್ಥಿನಿಲಯ ಸರಿಯಾಗಿ ನಡೆಯುತ್ತಿಲ್ಲ. ಗೌರಿಬಿದನೂರಿನಲ್ಲಿ ಶ್ರೀಮತಿ ಚಿಕ್ಕಮ್ಮ ಮತ್ತಿ ಶ್ರೀ ವೆಂಕಟರಮಣಗೌಡ, ಪಟೇಲರು, ಕರೇಕಲ್ಲಹಳ್ಳಿ ಇವರು ದಾನವಾಗಿ ನೀಡಿರುವ ೨೦ ಗುಂಟೆ ಸ್ವತ್ತನಲ್ಲಿ ದಾನಿಗಳು ಮತ್ತು ಸ್ಥಳೀಯ ಶಾಸಕರಾದ ಶ್ರೀಯುತ ಶಿವಶಂಕರರೆಡ್ಡಿ ಯವರ ಅನುದಾನದಲ್ಲಿ ನಿರ್ಮಿಸಿರುವ ವಿವಿದ ಕಟ್ಟಡಗಳಲ್ಲಿ ಸಮತಾ ನರ್ಸರಿ ಶಾಲೆ, ಸಮತಾ ಫ್ರೌಢಶಾಲೆಗಳನ್ನು ನಡೆಸಲಾಗುತ್ತಿದೆ. ದಾನಿಗಳ ಸಹಕಾರದಿಂದ ಆಡುಗೆ ಕೋಣೆ, ಆಡಳಿತ ಕಚೇರಿ, ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಸಮತಾ ಪ್ರೌಡಶಾಲೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಸಂಘದ ವತಿಯಿಂದ ಸುಸೂತ್ರವಾಗಿ ಮುನ್ನಡೆಸಲಾಗುತ್ತಿದೆ. ಪ್ರಸ್ತುತ ಸಮತಾ ನರ್ಸರಿ ಮತ್ತು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕೊರತೆ, ಕಟ್ಟಡದ ಕೊರತೆ ಮತ್ತು ನಷ್ಟದ ಕಾರಣದಿಂದ ಮತಬಾಂದವರೊಬ್ಬರಿಗೆ ಕ್ರಯಕ್ಕೆ ಕೊಡಲಾಗಿದೆ. ಗೌರಿಬಿದನೂರಿನಲ್ಲಿ ಒಂದು ಸುಂದರ ಸಮುದಾಯ ಭವನ ವನ್ನು ನಿರ್ಮಿಸಲು ಡಾ|| ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳನ್ನು ಅನುದಾನವನ್ನು ವಿನಿಯೋಗಿಸಲಾಗಿದೆ.
|
|
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಮಧುಗಿರಿ
|
ಮಧುಗಿರಿಯಲ್ಲಿ ದಿ||ಪಿ.ಕೆ.ನಂಜುಂಡಯ್ಯನವರು ದಾನಮಾಡಿದ ಕಟ್ಟಡದ ದಿ: 01-07-1948 ರಲ್ಲಿ ದಿ.ಎಂ.ಜೆ ಲಿಂಗಣ್ಣನವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು.ಶ್ರೀಯುತ ಎಂ.ಎನ್ ಬಸಪ್ಪ ಮತ್ತು ಎಂ.ಎನ್ ಕಪ್ಪಣ್ಣ ರವರುಗಳು ದಾನವಾಗಿ ನೀಡಿದ್ದ ಕಟ್ಟಡದಲ್ಲಿ 1948 ರಲ್ಲಿ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಲಾಗಿ, ಸದರಿ ಕಟ್ಟಡ ಶಿಥಿಲಾವಸ್ಥೆ ತಲುಪಿದಾಗ ಮಧುಗಿರಿ ತಾಲ್ಲೂಕು ಸಂಘದ ಕಾರ್ಯಾಧ್ಯಕ್ಷರಾದ ಶ್ರೀಯುತ ಎಂ.ಕೆ ನಂಜುಂಡಯ್ಯನವರು (ರಾಜು) ಮತ್ತು ಪದಾಧಿಕಾರಿಗಳ ಅವಿರತ ಪರಿಶ್ರಮದಿಂದ ಹಾಗೂ ಡಾ|| ಶಿವು ರವರ ಧನ ಸಹಾಯದಿಂದ ಸುಮಾರು ೪೦ ಚದುರ ಕಟ್ಟಡವನ್ನು ನೂತನವಾಗಿ ನಿರ್ಮಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂದಿನಿಂದಲೂ ಶ್ರದ್ದೆವಹಿಸಿ ವ್ಯವಸ್ಥಿತವಾಗಿ ಸ್ಥಳೀಯ ಮುಖಂಡರು ನಿರ್ವಹಿಸಿಕೊಂಡು ಬರುತ್ತಿದ್ದು ಶ್ರೀಯುತರ ಕಾರ್ಯ ಅಭಿನಂದನೀಯ.
|
ಇದಲ್ಲದೆ ಬಿಜವರ ಗ್ರಾಮದ ಶ್ರೀಯುತ ಬಿ.ಎಂ ಲಕ್ಷ್ಮೀಪತಿಯವರ ಸಹಕಾರ ಮತ್ತು ಆಶಯದಿಂದ ಮಧುಗಿರಿಯಲ್ಲಿ ಒಂದು ಕಟ್ಟಡವನ್ನು ಗುತ್ತಿಗೆಗೆ ಪಡೆದು ವಿದ್ಯಾರ್ಥಿನಿ ನಿಲಯವನ್ನು ಮಧುಗಿರಿಯಲ್ಲಿ 2012 ರಲ್ಲಿ ಪ್ರಾರಂಭವಾಯಿತು. 2013 ರಲ್ಲಿ ಮಧುಗಿರಿಯಲ್ಲಿ ೩೦X೪೦ ಅಳತೆಯ ಎರಡು ನಿವೇಶನಗಳ ಖರೀದಿಸಿಲಾಗಿ ಸದರಿ ನಿವೇಶನಗಳಲ್ಲಿ ಒಂದು ನಿವೇಶನವನ್ನು ಶ್ರೀಯುತ ಬಿ.ಎನ್ ಲಕ್ಷ್ಮೀಪತಿಯವರು ದಾನವಾಗಿ ನೀಡಿರುತ್ತಾರೆ, ಮತ್ತೊಂದು ನಿವೇಶನವನ್ನು ಮಧುಗಿರಿ ತಾಲ್ಲೂಕು ಸಂಘದ ಖಜಾಂಚಿಗಳಾದ ಶ್ರೀಯುತ ನಾಗರಾಜು ಗೌಡರು ಖರೀದಿಸಲು ಸಹಕರಿಸಿರುತ್ತಾರೆ. ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ೧೫ ಲಕ್ಷ ರೂಗಳ ಅನುದಾನ ಮತ್ತು ದಾನಿಗಳ ಸಹಕಾರದಿಂದ ಸಂಘದ ಮಹಿಳಾ ವಿದ್ಯಾರ್ಥಿನಿ ನಿಲಯವನ್ನು ಸದರಿ ನಿವೇಶನದಲ್ಲಿ ನಿರ್ಮಿಸಲಾಗಿದ್ದು, ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅಮೃತ ಹಸ್ತದಿಂದ 2014 ರಲ್ಲಿ ಉದ್ಘಾಟಿಸಲಾಯಿತು. |
|
|
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಗಂಗಮ್ಮ ಮತ್ತು ಶ್ರೀ ಸಿದ್ದೇಗೌಡರು, ದೊಡ್ಡಮಾಲೂರು. ಇವರು ದಾನವಾಗಿ ನೀಡಿರುವ ನಿವೇಶನದಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಅನುದಾನದಲ್ಲಿ ಮತ್ತು ಧಾನಿಗಳ ಸಹಾಯದಿಂದ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು ಕಟ್ಟಡದ ಅಂತಿಮ ಹಂತದ ನಿರ್ಮಾಣ ಕಾರ್ಯ ನೆರವೇರಿದೆ. ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿಯಲ್ಲಿ ಡಾ|| ಮುಖ್ಯಮಂತ್ರಿ ಚಂದ್ರುರವರ ಅನುದಾನದಲ್ಲಿ ಬಿಡುಗಡೆ ಮಾಡಿರುವ ೧೦ ಲಕ್ಷ ರೂ ಹಣದ ಜೊತೆಗೆ ಕೊಡಿಗೇನಹಳ್ಳಿ ಹೋಬಳಿ ಪದಾಧಿಕಾರಿಗಳ ಪರಿಶ್ರಮ ಮತ್ತು ದಾನಿಗಳಿಂದ ಸಂಗ್ರಹಿಸಿರುವ ಹಣ ಹಾಗೂ ಕೇಂದ್ರ ಸಂಘದಿಂದ ೨.೬೦ ಲಕ್ಷ ರೂಗಳನ್ನು ಸೇರಿಸಿ ನಿರ್ಮಿಸಿರುವ ಸಮುದಾಯ ಭವನವನ್ನು ಅದ್ದೂರಿಯಾಗಿ ಉದ್ಘಾಟಿಸಲಾಯಿತು. ಇದರ ಒಟ್ಟು ಅಂದಾಜು ಮೊತ್ತ ೨೩ ಲಕ್ಷ ರೂಗಳು. |
ಮಧುಗಿರಿ ತಾಲ್ಲೂಕು ಬ್ಯಾಲ್ಯಾ ಗ್ರಾಮದಲ್ಲಿ ಗ್ರಾಮ ಶಾಖೆಯ ಅಧ್ಯಕ್ಷರಾದ ಶ್ರೀ. ಕೆ. ನಂಜೇಗೌಡರು, ಸಮಸ್ತ ಗ್ರಾಮಸ್ಥರು ಮತ್ತು ಸದಸ್ಯರುಗಳಾದ ಶ್ರೀ ಬಿ.ಹೆಚ್. ನಂಜುಂಡಯ್ಯ, ಶ್ರೀ ಮುದ್ದೀರಪ್ಪ, ಶ್ರೀ ನಟರಾಜ್, ಶ್ರೀ ಕೃಷ್ಣಪ್ಪ ಎಮ್. ಶ್ರೀ ಶಿವಕುಮಾರ್ ಮತ್ತು ದಾನಿಗಳು ಸಹಕಾರದಿಂದ ೩೦X೫೦ ಅಳತೆಯ ನಿವೇಶನವನ್ನು ೧.೮೦ ಲಕ್ಷಗಳಿಗೆ ಖರೀದಿಸಿಲಾಗಿ ರೂ. ೧೫೦೦೦/- ನೋಂದಣಿ ಖರ್ಚನ್ನು ಕೇಂದ್ರ ಸಂಘ ಭರಿಸಿ ಸಂಘಕ್ಕೆ ನೋಂದಣಿ ಮಾಡಿಸಲಾಗಿದೆ. (ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. ೩.೫೦ ಲಕ್ಷ) ಸದರಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. |
|
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಶಿರಾ
|
ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಕಡವಿಗೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ -೪ ರ ಪಕ್ಕದಲ್ಲೆ ಶ್ರೀಯುತ ಕೆ.ಆರ್ ಕರೇಗೌಡರು ೨೫-೦೨-೨೦೦೪ ರಂದು ದಾನವಾಗಿ ನೀಡಿದ ೨೦ ಗುಂಟೆ ಜಮೀನಿನಲ್ಲಿ ಶ್ರೀಯುತ ಮುಖ್ಯಮಂತ್ರಿ ಚಂದ್ರು ರವರ ಅನುದಾನದಲ್ಲಿ ನೀಡಲಾದ ೧೫ ಲಕ್ಷ ರೂಗಳ ಮತ್ತು ದಾನಿಗಳ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ವಾಗುತ್ತಿದೆ ಮತ್ತು ಇದಲ್ಲದೇ ಶಿರಾ ಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸಂಘದ ಉಪಯೋಗಕ್ಕಾಗಿ ೨೦ ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. |
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಕೊರಟಗೆರೆ
|
ಕೊರಟಗೆರೆ ಪಟ್ಟಣದಲ್ಲಿ ಸಂಘದ ಸ್ವತ್ತಿನಲ್ಲಿ ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರು ರವರ ಅನುದಾನ ೧೫ ಲಕ್ಷ ರೂಗಳೊಂದಿಗೆ ಮತ್ತು ದಾನಿಗಳ ಸಹಕಾರದಿಂದ ಸುಸಜ್ಜಿತ ಸಮುದಾಯ ಭವನವನ್ನು ಶ್ರೀಯುತ ಎ.ಡಿ ಬಲರಾಮಯ್ಯ ನವರು ಮತ್ತು ಕೊರಟಗೆರೆ ತಾಲ್ಲೂಕು ಸಮಿತಿ ಸದದ್ಯರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದೆ. |
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ತಾಲ್ಲೂಕು ಸಂಘ, ಹಿಂದೂಪುರ (ಆಂಧ್ರಪ್ರದೇಶ)
|
ಅನಂತಪುರ ಜಿಲ್ಲೆ, ಕೊಡಿಗೇನಹಳ್ಳಿ (ಆಂಧ್ರಪ್ರದೇಶ) ಗ್ರಾಮದಲ್ಲಿ ದಾನಿಗಳಾದ ಶ್ರೀಯುತ ವೆಂಕಟಾರೆಡ್ಡಿ ಬಿನ್ ಲೇ ರೆಡ್ಡಿಪಲ್ಲಿ ಸಂಜೀವರೆಡ್ಡಿಯವರು ನೀಡಿರುವ ನಿವೇಶನದಲ್ಲಿ ಸಮುದಾಯಭವನ ನಿರ್ಮಿಸಲು ದಿನಾಂಕ ೧೭-೦೨-೨೦೧೩ ರಂದು ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. |
|