ಮುಖಪುಟ ಧ್ಯೇಯೋದ್ದೇಶಗಳು
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಧ್ಯೇಯೋದ್ಧೇಶಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ(ರಿ), ಬೆಂಗಳೂರು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ(ರಿ) ದ 2014 -2016 ನೇ ಸಾಲಿಗೆ ಒಂದು ಅಭಿವೃದ್ದಿ ಪರ ಕಾರ್ಯಕಾರಿ ಸಮಿತಿಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ, ಸಮಾಜದ ಮುಖಂಡರು, ಹಿರಿಯರು ಹಾಗೂ ಹಿತೈಷಿಗಳು ಸರ್ವಾನುಮತದಿಂದ ಅವಿರೊಧವಾಗಿ ಆಯ್ಕೆಗೊಳಿಸಿ, ಅನುಭವೀ ಬಂಧುಗಳು- ಪ್ರಗತಿಪರ ಯುವ ಪಡೆಯ ತಂಡವನ್ನು ಸಂಘದ ಸರ್ವತೋಮುಖ ಅಭಿವೃದ್ದಿಗೆ ನಿಯೋಜಿಸಿದ್ದಕ್ಕಾಗಿ ಮತ್ತು ಹಿಂದಿನ ಸಾಲಿನ ಅಭಿವೃದ್ದಿಯನ್ನು ಗುರುತಿಸಿ ನಮ್ಮನ್ನೆಲ್ಲಾ ಆಯ್ಕೆಗೊಳಿಸಿದ್ದಕ್ಕಾಗಿ ಸಮಾಜದ ಎಲ್ಲಾ ಹಿರಿಯರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಪ್ರಗತಿಪರ, ಅಭಿವೃದ್ದಿಯ ಚಿಂತನೆಯ ಹಾದಿಯಲ್ಲಿ ಸಮಾಜದ ಹಿತಾಸಕ್ತಿ, ಶೈಕ್ಷಣಿಕ ಪ್ರಗತಿ, ರಾಜಕೀಯ ಪ್ರಾಬಲ್ಯ, ಔದ್ಯೊಗಿಕ ವಿಕಾಸ, ಮಹಿಳಾ ಪ್ರಾಮುಖ್ಯತೆ, ಆರ್ಥಿಕ ಸಬಲೀಕರಣ, ದರ್ಮಸಹಿಷ್ಣುತೆ, ಗ್ರಾಮೀಣ-ಪರಂಪರೆಯ ಉಳಿವಿಗಾಗಿ, ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ, ಸಮಾಜದ ಮುಖಂಡರು, ಹಿರಿಯರು, ಹಿತೈಷಿಗಳು ಹಾಗೂ ಬಂಧುಗಳೊಡನೆ ಚರ್ಚಿಸಿ ನಿರ್ಣಯಿಸಲಾದ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ವರದಿಯನ್ನು ತಮ್ಮ ಮುಂದಿಡಲು ಬಯಸುತ್ತೇನೆ.

ಶ್ರೀಯುತ. ರವಿಕುಮಾರ್ ಡಿ.ಈ,
ಅಧ್ಯಕ್ಷರು
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ),
ಬೆಂಗಳೂರು


ವಿನೂತನ ಕಾರ್ಯಕಾರಿ ಮಂಡಳಿ ಮುಂದಿರುವ ಸವಾಲುಗಳು-ದ್ಯೋಯೋದ್ದೇಶಗಳು:


೧.) ಸರ್ಕಾರ, ಸಂಘ-ಸಂಸ್ಥೆಗಳು, ದಾನಿಗಳಿಂದ ವಿವಿಧ ರೀತಿಯ ಅನುದಾನಗಳನ್ನು ಕ್ರೌಡೀಕರಿಸುವುದು.

೨.) ಸಂಘದ ಆರ್ಥಿಕ ಪ್ರಾಬಲ್ಯಕ್ಕಾಗಿ ಆದಾಯದ ಮೂಲಗಳನ್ನು ಅಭಿವೃದ್ದಿಗೊಳಿಸುವುದು.

೩.) ವಿದ್ಯಾರ್ಥಿನಿ-ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗಾಗಿ ಬೇಡಿಕೆ ಮೇರೆಗೆ ವಸತಿನಿಲಯಗಳನ್ನು ಸ್ಥಾಪಿಸುವುದು.

೪.) ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಉನ್ನತಿಗಾಗಿ ಯೋಜನೆಗಳನ್ನು ಅನುಷ್ಟಾನಗೊಳಿಸುವುದು.

೫.) ಸಮಾಜದ ಸಮಗ್ರ ಮಾಹಿತಿಗಾಗಿ ಜನಗಣತಿ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು.

೬.) ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಕಛೇರಿಯ ಕಾರ್ಯಗಳನ್ನು ಸಂಪೂರ್ಣ ಗಣಕೀಕರಿಸುವುದು.

೭.) ದೇಶ-ವಿದೇಶ ಗಳಲ್ಲಿರುವ ಸಮಾಜದ ಬಂಧುಗಳ ಮಾಹಿತಿಗಾಗಿ ಒಂದು ವೆಬ್ ಸೈಟ್ ಪ್ರಾರಂಭಿಸುವುದು.

೮.) ಸಮಾಜದ ಪ್ರತೀ ಪ್ರಜೆಯೂ ಸಂಘದ ಸದಸ್ಯತ್ವವವನ್ನು ಪಡೆಯುವಂತೆ ಉತ್ತೇಜಿಸುವುದು.

೯.) ಪ್ರಸ್ತುತ ಸಂಘದ ಮತದಾರರ ಪಟ್ಟಿಯ ಲೋಪ-ದೋಷಗಳನ್ನು ಪರಿಶೀಲಿಸಿ ಪರಿಷ್ಕೃತ ಪಟ್ಟಿಯನ್ನು ತಯಾರಿಸುವುದು.

೧೦.) ಸಂಘದ ಕಾರ್ಯ-ಚಟುವಟಿಕೆಗಳ, ಅಭಿವೃದ್ದಿಯ ಅಂಕಿ-ಅಂಶಗಳನ್ನೊಳಗೊಂಡ ಕಿರು ಹೊತ್ತಿಗೆ ಪ್ರಕಟಿಸುವುದು.


ಬಂಧುಗಳೇ.... ಸಂಘದ ಹೊಸ ಕಾರ್ಯಪಡೆ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷ ಪೂರೈಸಿದ್ದು, 2014-2015 ನೇ ಸಾಲಿಗೇ ಮೇಲೆ ತಿಳಿಸಿದ ಬಹುತೇಕ ದ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರಲಾಗಿದ್ದು, ಬಹುತೇಕ ಕಾರ್ಯಗಳು ಪ್ರಗತಿಯ ಹಾದಿಯಲ್ಲಿವೆ ಎಂದು ತಿಳಿಸಲು ಹರ್ಷಿಸುತ್ತೇನೆ.

:: ಕಾರ್ಯಕ್ರಮಗಳ ವಿವರ ::


1.1) ಕೇಂದ್ರ ಸಂಘದ ಪದಾದಿಕಾರಿಗಳು, ತಾಲ್ಲೂಕು ಸಮಿತಿಗಳೊಂದಿಗೆ ಚರ್ಚಿಸಿ, ಸರ್ಕಾರ, ಮಂತ್ರಿ-ಮಹೋದಯರು, ಶಾಸಕರು, ಸಹಕಾರೀ ಸಂಸ್ಥೆ ಗಳಿಂದ ತರಬಹುದಾದ ಅನುದಾನಗಳು, ಸಮಾಜದ ಹಿತೈಷಿಗಳು, ವಾಣಿಜ್ಯೋದ್ಯಮಿಗಳಿಂದ ಸಂಗ್ರಹಿಸಬಹುದಾದ ದಾನಗಳ ಬಗ್ಗೆ ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಸಕಾಲದಲ್ಲಿ ಅವುಗಳ ಸದ್ಬಳಕೆಗೆ ಯೋಜನೆ ಜಾರಿಗೊಳಿಸುವುದು.

2.1) ತುಮಕೂರಿನ ವಾಣಿಜ್ಯ ಮಳಿಗೆಗಳ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ವಾಣಿಜ್ಯ ಕಟ್ಟಡ ಅಥವಾ ಸಮುದಾಯ ಭವನ ನಿರ್ಮಾಣ ಮಾಡುವುದಕ್ಕೆ ಆದ್ಯತೆ ಮೇರೆಗೆ ಕಾರ್ಯಪ್ರವೃತ್ತರಾಗುವುದು.

2.2) ತುಮಕೂರಿನ ಅಶೋಕನಗರದ ಹಾಲೀ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಬೇರೆ ಕಡೆ ವಸತಿ ವ್ಯವಸ್ಥೆ ಕಲ್ಪಿಸಿ, ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣವನ್ನು ಹಂತ ಹಂತವಾಗಿ ನಿರ್ಮಾಣ ಮಾಡುವುದು.

2.3) ವಾಣಿಜ್ಯ ಸಂಕೀರ್ಣದಿಂದ ಬರುವ ಆದಾಯದಿಂದ ತುಮಕೂರಿನ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ನಿವೇಶನ ಖರೀದಿಸಿ ಮುಂದಿನ ದಿನಗಳಲ್ಲಿ ಹೊಸ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಿಸುವುದು.

2.4) ಗೌರಿಬಿದನೂರಿನ ಹಾಲಿ ನಿಲಯದ ರಸ್ತೆಬದಿಯಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುವುದು ಮತ್ತು ಅದರಿಂದ ಬರುವ ಆದಾಯದಿಂದ ಮತ್ತು ಅನುದಾನಗಳಿಂದ ಪ್ರತ್ಯೇಕ ನಿವೇಶನ ಖರೀದಿಸಿ, ಹಣಕಾಸಿನ ಲಬ್ಯತೆ ಆಧರಿಸಿ ಮುಂದಿನ ದಿನಗಳಲ್ಲಿ ನಿಲಯದ ಕಟ್ಟಡ ನಿರ್ಮಿಸುವುದು.

3.1) ಆದ್ಯತೆ ಮತ್ತು ಅವಶ್ಯಕತೆಯನ್ನು ಆಧರಿಸಿ ತಾಲ್ಲೂಕು ಕೇಂದ್ರಗಳಾದ ಮಧುಗಿರಿ ಮತ್ತು ಹಿಂದೂಪುರಗಳಲ್ಲಿ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸುವುದು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿನಿಲಯಕ್ಕೆ ಮತ್ತು ವಿದ್ಯಾರ್ಥಿಗಳಿಗೆ ದೊರೆಯಬಹುದಾದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಬಗ್ಗೆ ರೂಪು-ರೇಷೆಗಳನ್ನು ನಿರ್ಮಿಸಿ ಕಾರ್ಯಪ್ರವೃತ್ತರಾಗುವುದು.

3.2) ತುಮಕೂರಿನ ಹಾಲಿ ಇರುವ ವಿದ್ಯಾರ್ಥಿನಿಯರ ವಸತಿನಿಲಯಕ್ಕಾಗಿ, ಲಭ್ಯವಿರುವ ಕಟ್ಟಡವನ್ನು ಸ್ವಂತಕ್ಕಾಗಿ ಖರೀದಿಸುವುದು ಇಲ್ಲವೇ ಪ್ರತ್ಯೇಕ ನಿವೇಶನ ಖರೀದಿಸಿ, ಕಟ್ಟಡ ನಿರ್ಮಾಣಕ್ಕಾಗಿ ಆದ್ಯತೆ ನೀಡುವುದು.

3.3) ಬೆಂಗಳೂರಿನಲ್ಲಿ ಅವಶ್ಯವಾಗಿ ಬೇಕಾಗಿರುವ ವಿದ್ಯಾರ್ಥಿನಿಯರ ನಿಲಯವನ್ನು ಬಾಡಿಗೆ ಕಟ್ಟಡದಲ್ಲಿ ಪ್ರಾರಂಬಿಸಿ ಅದಕ್ಕೆ ಬೇಕಾಗಿರುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ಮತ್ತು ಅದರ ನಿರ್ವಹಣೆಗೆ ವನಿತಾ ಮಂಡಳಿಗಳ ನೆರವನ್ನು ಪಡೆಯುವುದು.

4.1) ಸಮಾಜದ ಆಸಕ್ತ ಬಂದುಗಳು, ಹಿತೈಷಿಗಳ ಆರ್ಥಿಕ ನೆರವಿನಿಂದ ಮತ್ತು ಸಂಬಂದಿಸಿದ ಕ್ಷೇತ್ರದ ಶಾಸಕರ, ಮಂತ್ರಿಗಳ ಅನುದಾನದ ವತಿಯಿಂದ, ನಗರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಂಘ-ಸಂಸ್ಥೆಗಳಿಂದ ವಿನಿಯೋಗಿಸಲಾಗುವ ಆಯ್ದ ಜಮೀನನ್ನು ಖರೀದಿಸಿ ಸಮಾಜಕ್ಕಾಗಿಯೇ ಒಂದು ಸುಸಜ್ಜಿತ ಸ್ಮಶಾನವನ್ನು ತುಮಕೂರು, ಬೆಂಗಳೂರು, ಮಧುಗಿರಿ, ಗೌರಿಬಿದನೂರು, ಶಿರಾ ಗಳಲ್ಲಿ ನಿರ್ಮಾಣ ಮಾಡುವುದು.

4.2) ಸಮಾಜದ ಬಂದುಗಳ ಆರ್ಥಿಕ ನೆರವಿಗಾಗಿ ವಾಣಿಜ್ಯಕ ಸಂಸ್ಥೆಗಳು, ಸಹಕಾರೀ ಬ್ಯಾಂಕುಗಳನ್ನು ಪ್ರಮುಖವಾಗಿ ಮಧುಗಿರಿ ಮತ್ತು ಗೌರಿಬಿದನೂರಿನಲ್ಲಿ ಸ್ಥಾಪಿಸಲು ಸಂಘದ ವತಿಯಿಂದ ಸಹಕಾರ ನೀಡುವುದು.

4.3) ಸಮಾಜದ, ಸಂಘದ ಅವಿಭಾಜ್ಯ ಅಂಗಗಳಾಗಿರುವ ಸಹಕಾರೀ ಬ್ಯಾಂಕುಗಳು, ಸಂಘ ಸಂಸ್ಥೆಗಳು ಮತ್ತು ಸಮಾಜದ ಬಂದುಗಳ ಉಪಯೋಗಕ್ಕಾಗಿ ಹಾಗೂ ಅವುಗಳನ್ನು ಉತ್ತೇಜಿಸುವ ಸಲುವಾಗಿ ವಾಣಿಜ್ಯ ಮಳಿಗೆಗಳು-ಕಟ್ಟಡಗಳಲ್ಲಿ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ಸ್ಥಳಾವಕಾಶ ಒದಗಿಸುವುದು.

4.4) ಶಿರಾ, ಕಡವಿಗೆರೆ ಮತ್ತು ಕೊಡಿಗೇನಹಳ್ಳಿ ಗಳಲ್ಲಿನ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಮಾಜದ ಗ್ರಾಮೀಣ ಜನರ ಮದುವೆ ಸಮಾರಂಭಗಳಿಗಾಗಿ ರಿಯಾಯಿತಿ ದರದಲ್ಲಿ ಸಮುದಾಯ ಭವನ ಒದಗಿಸುವುದು.

4.5) ಸಮಾಜದ ಯುವಕರು, ಗ್ರಾಮೀಣ ರೈತಾಪಿ ವರ್ಗ, ನಗರದ ಸಮಾಜದ ಬಂಧುಗಳು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ “ಸದಸ್ಯತ್ವ ಆಂದೋಲನ” ಆಯೋಜಿಸಿ ಸದಸ್ಯರಾಗಿಸುವುದು ಮತ್ತು ಹಾಲಿ ಇರುವ ಸದಸ್ಯರ ಪರಿಶ್ಕೃತ ಪಟ್ಟಿಯನ್ನು ನವೀಕರಿಸಿ ಪ್ರಕಟಿಸುವುದು.

4.6) ಆರ್ಥಿಕ ಸಬಲೀಕರಣಕ್ಕಾಗಿ, ಆಯ್ದ ಸಂಘದ ಕಚೇರಿಗಳಲ್ಲಿ ವಿಶೇಷ ಪರಿಣತರಿಂದ ಒಲಿಗೆ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ, ಡಿ.ಟಿ.ಪಿ. ತರಬೇತಿ, ಮೊಬೈಲ್ ರಿಪೇರಿ ಕಾರ್ಯಾಗಾರ ಗಳನ್ನು ನಡೆಸಿ ಸಮಾಜದ ಮಹಿಳೆಯರು ಮತ್ತು ಯುವಕರಿಗೆ ಸ್ವ-ಉದ್ಯೋಗ ನಿರ್ವಹಣೆಗೆ ನೆರವಾಗುವುದು.

5.1) ಗ್ರಾಮೀಣ ಸಮಾಜದ ಆರ್ಥಿಕ, ಸಾಮಾಜಿಕ ಮತ್ಥು ಶೈಕ್ಷಣಿಕ ಪರಿಸ್ಥಿತಿ ಸಂಪೂರ್ಣ ಮಾಹಿತಿಯ ವರದಿ ಯನ್ನು ಹಿಂದುಳಿದ ವರ್ಗಗಳ ಆಯೋಗ ಮತ್ಥು ಸರ್ಕಾರದ ಮುಂದೆ ಮಂಡಿಸಿ ಸೂಕ್ತ ಸಹಕಾರ-ನೆರವು ಗಳನ್ನು ಪಡೆಯುವ ಸಲುವಾಗಿ, ಸಮಾಜದ ಸವಿವರ ಒಳಗೊಂಡ ಸಮಗ್ರ ಜನಗಣತಿ ಮಾಡಿಸುವುದು.

6.1) ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ, ಸಂಘದ ಎಲಾ ಲೆಕ್ಕ-ತೆಖ್ತೆಃ ಗಳನ್ನು, ಹಣಕಾಸಿನ ವ್ಯವಹಾರಗಳನ್ನು ಗಣಕೀಕರಿಸಿ, ಯೋಜನಾಬದ್ದ ಹಣ ವಿನಿಯೋಗ, ಬ್ಯಾಂಕ್ ಮುಖಾಂತರವೇ ಹಣಕಾಸಿನ ನಿರ್ವಹಣೆ ಮಾಡುವ ವ್ಯವಸ್ತೆ ಜಾರಿಗೊಳಿಸಿ ಮುಂದಿನ ದಿನಮಾನಗಳಲ್ಲಿ ಯಾರೇ ಬಂದರೂ ಸುಲಲಿತವಾಗಿ ನಿರ್ವಹಿಸಿಕೊಂಡು ಹೋಗಬಲ್ಲ ವಿನೂತನ ವ್ಯವಸ್ಥೆ ಜಾರಿಗೊಳಿಸುವುದು.

7.1) ಕೇಂದ್ರ ಸಂಘದ, ತಾಲ್ಲೂಕು ಘಟಕಗಳ ಆಡಳಿತ ಮಂಡಳಿ ವಿವರಗಳು, ಸಂಘದ ಕಾರ್ಯಚಟುವಟಿಕೆಗಳು, ದ್ಯೇಯೊದ್ದೇಶಗಳು, ಕಾರ್ಯಯೋಜನೆಗಳ ವಿವರಗಳನ್ನೊಳಗೊಂಡ ಸಚಿತ್ರ ಮಾಹಿತಿಯನ್ನು ದೇಶ-ವಿದೇಶಗಳಲ್ಲಿ ವಾಸಿಸುತ್ತಿರುವ ಸಮಾಜದ ಬಂದುಗಳಿಗೆ ಒದಗಿಸುವ ಸಲುವಾಗಿ ವೆಬ್ ಸೈಟ್ ನಿರ್ಮಿಸಿ ಲೋಕಾರ್ಪಣೆಗೊಳಿಸುವುದು.

8.1) ಸಮಾಜದ ಪ್ರತೀ ಪ್ರಜೆಯೂ ಸಂಘದ ಸದಸ್ಯತ್ವವವನ್ನು ಪಡೆದು ಸಂಘದ ಸಮಾಜದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ಉತ್ತೇಜಿಸುವುದು ಮತ್ತು ೨೦೧೫-೧೬ ನೇ ಸಾಲಿಗೆ ಕನಿಷ್ಟ ೨೫ ಸಾವಿರ ಸದಸ್ಯರ ಸದಸ್ಯತ್ವವನ್ನು ನೋಂದಣೆ ಮಾಡಿಸುವುದು.

9.1) ಹಾಲಿ ಸಂಘದ ಸದಸ್ಯರ ಮತದಾರರ ಪಟ್ಟಿಯ ಲೋಪ-ದೋಷಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕ್ರಮಬದ್ದವಾಗಿ ತಾಲ್ಲೂಕುವಾರು ವಿಂಗಡಿಸಿ ಪರಿಷ್ಕೃತ ಮತದಾರರ ಪಟ್ಟಿಯನ್ನು ತಯಾರಿಸುವುದು ಮತ್ತು ಎಲ್ಲಾ ಮತದಾರರಿಗೂ ಭಾವಚಿತ್ರ ಸಹಿತ ಗುರುತಿನ-ಚೀಟಿ ವಿತರಿಸುವುದು.

10.1) ಸಂಘದ ಕಾರ್ಯ-ಚಟುವಟಿಕೆಗಳು, ಯೋಜನೆಗಳು, ಸಮಿತಿ ಸದಸ್ಯರುಗಳ ವಿವರ, ದಾನಿಗಳ ವಿವರ, ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು, ಸಹಕಾರಿಗಳ ವಿವರ, ವಿವಿಧ ಕ್ಷೇತ್ರಗಳ ಸಾದಕರುಗಳ ವಿವರ, ಅನಿವಾಸಿ ಭಾರತೀಯರು, ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಿವರ, ಅಭಿವೃದ್ದಿಯ ಅಂಕಿ-ಅಂಶಗಳು-ಚಿತ್ರಗಳನ್ನೊಳಗೊಂಡ ಕಿರು ಹೊತ್ತಿಗೆಯನ್ನು ಮುದ್ರಿಸಿ ಪ್ರಕಟಿಸುವುದು. ಇದಕ್ಕಾಗಿ ಪ್ರತ್ಯೇಕ ಸ್ಮರಣ ಸಂಚಿಕೆಯ ಪ್ರಕಟಣೆಗಳ ಆದಾಯದ ಮೂಲವನ್ನು ಬಳಸಿಕೊಳ್ಳುವುದು.

~~~~***~~~~